ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರವು ಗುಂಡಿ ಮುಚ್ಚಿದ ಹಣವನ್ನ ನೇರವಾಗಿ ಗುಂಡಿಗೆ ಹಾಕಿದೆ ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಅವರು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ನೇರ ವಾಗ್ದಾನ ನಡೆಸಿದ್ದಾರೆ.
ವಿಧಾನಸೌಧದಲ್ಲಿ ಇಂದು (ಮಂಗಳವಾರ ಏಪ್ರಿಲ್ 28) ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಗುಂಡಿ ಮುಚ್ಚಿದ ಹಣ ಗುಂಡಿಗೆ ಹೋಗಿದೆ. ಗುಂಡಿ ಮುಚ್ಚೋಕೆ ಎಲ್ಲಾದ್ರೂ ಒಂದು ಲಕ್ಷ ಖರ್ಚಾಗುತ್ತದೆಯಾ? ಬೆಂಗಳೂರು ಜನ ಶಾಪ ಹಾಕುತ್ತಿದ್ದಾರೆ. ಎಲ್ಲಾ ಬೆಲೆ ಜಾಸ್ತಿ ಮಾಡಿದ್ದಾರೆ. ಗುಂಡಿ ಮುಚ್ಚೋದ್ರಲ್ಲಿ ಹೇಗೆ ಹಣ ಮಾಡಬೇಕು ಎಂದು ಕಾಂಗ್ರೆಸ್ ಅವರನ್ನ ಕೇಳಬೇಕು ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಪಿಡಿಓ ಲಂಚಾವತಾರ ಬಟಾ ಬಯಲು!
ಇಷ್ಟು ಹಣ ಖರ್ಚು ಮಾಡಿರೋದು ಬೋಗಸ್. ಈ ಅಕ್ರಮದ ಬಗ್ಗೆ ತನಿಖೆ ಆಗಬೇಕು. ಸದನದ ಸಮಿತಿ ರಚನೆ ಮಾಡಿ ತನಿಖೆ ಆಗಲಿ. ನಾವು ಅವರಿಗೆ ಲೆಕ್ಕ ನೀಡುತ್ತೇವೆ. ಮುಚ್ಚಿರುವ ಗುಂಡಿಗಳು ಮತ್ತೆ ಓಪನ್ ಆಗಿವೆ. ಇವರ ಬೋಗಸ್ ಗುಂಡಿ ಲೆಕ್ಕ ನಾವು ಕೊಡ್ತೀವಿ ಅಂತ ಸದನ ಸಮಿತಿ ರಚನೆಗೆ ಆಗ್ರಹಿಸಿದ್ದಾರೆ.
