Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಬೆಂಗಳೂರು ಇಂದು ಅತಿದೊಡ್ಡ ಸ್ಟಾರ್ಟ್‌ಅಪ್ ಕೇಂದ್ರವಾಗಿದೆ: ಪ್ರಿಯಾಂಕ್ ಖರ್ಗೆ
  • Bangalore
  • Politics
  • State

ಬೆಂಗಳೂರು ಇಂದು ಅತಿದೊಡ್ಡ ಸ್ಟಾರ್ಟ್‌ಅಪ್ ಕೇಂದ್ರವಾಗಿದೆ: ಪ್ರಿಯಾಂಕ್ ಖರ್ಗೆ

Praja Vahini April 28, 2026 1 minute read
WhatsApp Image 2026-04-28 at 14.33.32
Spread the love

ಬೆಂಗಳೂರು: ಭಾರತದ ಸ್ಟಾರ್ಟ್‌ಅಪ್ ಇಕೋ ಸಿಸ್ಟಂಗಳಲ್ಲಿ ಬೆಂಗಳೂರು 2026 ರ ಮೊದಲ ತ್ರೈಮಾಸಿಕದಲ್ಲಿ 89 ಒಪ್ಪಂದಗಳ ಮೂಲಕ $823 ಮಿಲಿಯನ್ ನಿಧಿಯೊಂದಿಗೆ ತನ್ನ ನಾಯಕತ್ವವನ್ನು ಮುಂದುವರಿಸಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿರುವ ಅವರು, ಬೆಂಗಳೂರಿನ ಸಾಧನೆಯನ್ನು ಭಾರತದ ಇತರ ಪ್ರಮುಖ ನಗರಗಳಿಗೆ ಹೋಲಿಸಿದರೆ, ದೆಹಲಿ 74 ಒಪ್ಪಂದಗಳಲ್ಲಿ $538 ಮಿಲಿಯನ್ ಮತ್ತು ಮುಂಬೈ 34 ಒಪ್ಪಂದಗಳಲ್ಲಿ $402 ಮಿಲಿಯನ್ ನಿಧಿಯನ್ನು ದಾಖಲಿಸಿವೆ. ಇದು ಬಂಡವಾಳ ಹರಿವು ಮತ್ತು ಒಪ್ಪಂದದ ವೇಗ ಎರಡರಲ್ಲೂ ಇರುವ ಸ್ಪಷ್ಟ ಅಂತರವನ್ನು ಒತ್ತಿಹೇಳುತ್ತದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಬೆಂಗಳೂರು ಇಂದು ಅಮೆರಿಕ, ಯುರೋಪ್ ಹಾಗೂ ಚೀನಾದ ಹೊರಗೆ ಅತಿದೊಡ್ಡ ಸ್ಟಾರ್ಟ್‌ಅಪ್ ಕೇಂದ್ರವಾಗಿ ಮತ್ತು ಜಾಗತಿಕವಾಗಿ 5 ನೇ ಅತಿದೊಡ್ಡ ಯುನಿಕಾರ್ನ್ ಕೇಂದ್ರವಾಗಿ ನಿಂತಿದೆ. ನಮ್ಮ ನಾಯಕತ್ವವು ಬಂಡವಾಳ ಹಾಗೂ ಉತ್ತಮ ಗುಣಮಟ್ಟದ ಉದ್ಯಮಿಗಳನ್ನು ಆಕರ್ಷಿಸುತ್ತಲೇ ಇರುವ ಪ್ರಬಲ, ಸಂಯೋಜಿತವಾದ ಇಕೋ ಸಿಸ್ಟಂನಿಂದ ಮೂಡಿ ಬಂದಿದೆ. ಇದನ್ನೂ ಓದಿ: ಸವಣೂರ ತಾಲೂಕಿನಲ್ಲಿ ಅದ್ದೂರಿ ಕಳಸಾರೋಹಣ ಕಾರ್ಯಕ್ರಮ

ಡೀಪ್ ಟೆಕ್’ನಿಂದ ದೈನಂದಿನ ತಂತ್ರಜ್ಞಾನದವರೆಗೆ, ಬೆಂಗಳೂರಿನ ಸ್ಟಾರ್ಟ್‌ಅಪ್‌ಗಳು ಪ್ರತಿಯೊಂದು ಪ್ರಮುಖ ವಲಯದಲ್ಲೂ ಪ್ರಾಬಲ್ಯ ಸಾಧಿಸಿವೆ ಎಂದು ಮಾಹಿತಿ ನೀಡಿರುವ ಸಚಿವ ಪ್ರಿಯಾಂಕ್ ಖರ್ಗೆ, ಇಂದು ಬೆಂಗಳೂರು ನಗರವನ್ನು ಭಾರತದ ತಂತ್ರಜ್ಞಾನ ಆರ್ಥಿಕತೆಯ ಕೇಂದ್ರದಲ್ಲಿರಿಸಿದೆ ಎಂದು ಸಂತಸ ಹಂಚಿಕೊಂಡಿದ್ದಾರೆ.

About the Author

Praja Vahini

Editor

View All Posts

Spread the love

Post navigation

Previous: ಸವಣೂರ ತಾಲೂಕಿನಲ್ಲಿ ಅದ್ದೂರಿ ಕಳಸಾರೋಹಣ ಕಾರ್ಯಕ್ರಮ
Next: ಪಿಡಿಓ ಲಂಚಾವತಾರ ಬಟಾ ಬಯಲು!

Views:

46

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.