ಬೆಂಗಳೂರು: ಏಪ್ರಿಲ್ 24ರಂದು ಡಾ. ರಾಜಕುಮಾರ್ ಅವರ ಹುಟ್ಟು ಹಬ್ಬದ ಅಂಗವಾಗಿ ಎಲ್ಲಾ ಅಭಿಮಾನಿಗಳು ಡಾ. ರಾಜ್ ಅವರ ಹುಟ್ಟು ಹಬ್ಬವನ್ನು ಬಹಳ ಸಂಭ್ರಮದಿಂದ ಆಚರಿಸಿದ್ದರು. ಆದರೆ ಹುಟ್ಟು ಹಬ್ಬದ ಸಂಭ್ರಮ ದಿನದಂದು ಡಾ. ರಾಜ್ಕುಮಾರ್ ಸಮಾಧಿ ವಿಚಾರವಾಗಿ ಹೊಟ್ಟು ಕೊಂಡಿರುವ ವಿವಾದ ಮತ್ತಷ್ಟು ತೀವ್ರ ಕೊಂಡಿದೆ
ಹೌದು, ನಟ ಚೇತನ್ ಅಹಿಂಸಾ ನೀಡಿದ್ದ ಹೇಳಿಕೆ ವಿರುದ್ಧ ಭಾರಿ ವಿರೋಧ ವ್ಯಕ್ತವಾದ ಬೆನ್ನಲ್ಲೇ, ಇದೀಗ ಅವರು ಮತ್ತೊಮ್ಮೆ ಸ್ಪಷ್ಟನೆ ನೀಡಿ ತಮ್ಮ ನಿಲುವನ್ನು ಕಠಿಣವಾಗಿ ಸಮರ್ಥಿಸಿಕೊಂಡಿದ್ದಾರೆ.
ಚೇತನ್ ಅಹಿಂಸಾ ಅವರು ಅಣ್ಣಾವ್ರ ಸಮಾಧಿಗೆ ಸರ್ಕಾರ ನೀಡಿದ ಎರಡು ಮತ್ತು ಅರ್ಧ ಎಕರೆ ಜಾಗದ ಬಗ್ಗೆ ಪ್ರಶ್ನೆ ಎತ್ತಿದ್ದು, ಈ ಹೇಳಿಕೆ ರಾಜ್ ಅಭಿಮಾನಿಗಳು ಮತ್ತು ಕನ್ನಡಪರ ಸಂಘಟನೆಗಳಲ್ಲಿ ಆಕ್ರೋಶ ಹುಟ್ಟಿಸಿತ್ತು. ಕ್ಷಮೆಯಾಚನೆಗೆ ಒತ್ತಾಯಗಳು ಕೇಳಿಬಂದಿದ್ದರೂ, ಇದೀಗ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ. ಆದರೆ ನಾನು ಹೇಳಿದ ವಿಚಾರ ಸುಳ್ಳಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ದಬ್ಬಾಳಿಕೆ ಆರೋಪದೊಂದಿಗೆ ಚೇತನ್ ಅಹಿಂಸಾ ತೀವ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದು, ಕ್ಷಮೆ ಕೇಳಿಸಲು ಬಂದು ಒತ್ತಡ ಹೇರುವುದು ಪ್ರಜಾಪ್ರಭುತ್ವಕ್ಕೆ ವಿರುದ್ಧ. ಕಾನೂನಿನ ಪ್ರಕಾರ ಕ್ರಮ ತೆಗೆದುಕೊಳ್ಳಲಿ, ನಾನು ಎದುರಿಸಲು ಸಿದ್ಧ ಎಂದು ಹೇಳಿದ್ದಾರೆ. ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡ ಅವರು, ನಾನು ಹೇಳಿದ್ದರಲ್ಲಿ ಸತ್ಯ ಇದೆ. ನಾನು ಪ್ರಚಾರಕ್ಕಾಗಿ ಮಾತನಾಡಿಲ್ಲ, ಇದು ನೀತಿ ಮತ್ತು ತತ್ವದ ಪ್ರಶ್ನ ಎಂದಿದ್ದಾರೆ. ಇದನ್ನೂ ಓದಿ: ಟಿಸಿಎಸ್ 10ಕೆ ಮ್ಯಾರಥಾನ್ ಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಚಾಲನೆ
ಅವರು ಸ್ಟಾರ್ ಸಂಸ್ಕೃತಿಯ ವಿರುದ್ಧವೂ ಆಕ್ಷೇಪ ವ್ಯಕ್ತಪಡಿಸಿ, ಸರ್ಕಾರ ಒಂದು ವ್ಯಕ್ತಿಗೆ ಜಾಗ ನೀಡಿದರೆ, ಇತರರಿಗೆ ನ್ಯಾಯ ಸಿಗುವುದಿಲ್ಲ. ಇದು ಚಿತ್ರರಂಗದಲ್ಲಿ ಅಸಮಾನತೆ ಉಂಟುಮಾಡುತ್ತದೆ ಎಂದು ಹೇಳಿದರು. ಜೊತೆಗೆ, ಯಾವುದೇ ರೀತಿಯ ಗೂಂಡಾ ವರ್ತನೆ ಅಥವಾ ಮಹಿಳೆಯರ ವಿರುದ್ಧ ಅವಹೇಳನಕಾರಿ ಮಾತುಗಳನ್ನು ಸಹಿಸಿಕೊಳ್ಳುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
