Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ನಿಮಗೆ ಬಿಳಿ ಕೂದಲಿನ ಸಮಸ್ಯೆ ಕಾಡ್ತಾ ಇದ್ದೀಯಾ? ಹಾಗಾದ್ರೆ ಈ ಸಿಂಪಲ್ ಮನೆಮದ್ದು ಬಳಸಿ!
  • Healthy Life

ನಿಮಗೆ ಬಿಳಿ ಕೂದಲಿನ ಸಮಸ್ಯೆ ಕಾಡ್ತಾ ಇದ್ದೀಯಾ? ಹಾಗಾದ್ರೆ ಈ ಸಿಂಪಲ್ ಮನೆಮದ್ದು ಬಳಸಿ!

Praja Vahini April 27, 2026 1 minute read
WhatsApp Image 2026-04-27 at 13.35.44
Spread the love

ಇತ್ತೀಚಿನ ದಿನಗಳಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ಕೂದಲು ಬೆಳೆಯಾಗುವ ಸಮಸ್ಯೆ ಸಾಮಾನ್ಯವಾಗಿಬಿಟ್ಟಿದೆ. ಕೇವಲ 20 ರಿಂದ 25 ವರ್ಷದ ವಯಸ್ಸಿನ ಮಕ್ಕಳಿಗೆ ಇಂದಿನ ಕಾಲದಲ್ಲಿ ಬಿಳಿ ಕೂದಲ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ.

ಇದಕ್ಕೆ ಪ್ರಮುಖ ಕಾರಣವೆಂದರೆ ನಿದ್ರಾಹೀನತೆ ಇರಬಹುದು ಅಥವಾ ರಾಸಾಯನಿಕ ಉತ್ಪನ್ನಗಳ ಅತಿಯಾದ ಬಳಕೆ ಇರಬಹುದು. ಅಲ್ಲದೆ ನಿದ್ರಾಹೀನತೆಯಿಂದಲೂ ಕೂಡ ಚಿಕ್ಕ ವಯಸ್ಸಿನಿಂದಲೇ ಬಿಳಿ ಕೂದಲು ಬರಲು ಪ್ರಾರಂಭವಾಗುತ್ತದೆ ಎಂದು ವೈದ್ಯ ತಿಳಿಸುತ್ತಾರೆ.

ಇನ್ನು ಕೂದಲನ್ನು ಕಪ್ಪಾಗಿಸಲು ಮಾರುಕಟ್ಟೆಯಲ್ಲಿ ಸಿಗುವಂತಹ ಕೆಮಿಕಲ್ ಮಿಶ್ರಿತ ಕಲರ್ ಗಳನ್ನು ಹಾಕುವುದರಿಂದ ಕೇವಲ ತಾತ್ಕಾಲಿಕವಾಗಿ ಕೂದಲು ಕಪ್ಪಾಗಬಹುದು ಆದರೆ ನೈಸರ್ಗಿಕವಾಗಿ ಕೂದಲು ಕಪ್ಪಾಗಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಮನೆಯಲ್ಲೇ ಸಿಗುವಂತಹ ಕೆಲವು ಪದಾರ್ಥಗಳನ್ನ ಬಳಸಿ ನೈಸರ್ಗಿಕವಾಗಿ ಕೂದಲನ್ನು ಕಪ್ಪಾಗಿಸಿಕೊಳ್ಳಬಹುದು.

ಕಾಫಿ-ತೆಂಗಿನೆಣ್ಣೆ ಮಿಶ್ರಣದ ಲಾಭ

ಕಾಫಿಯಲ್ಲಿರುವ ಕೆಫೀನ್ ಕೂದಲಿನ ಬೇರುಗಳಿಗೆ ರಕ್ತ ಸಂಚಾರವನ್ನು ಹೆಚ್ಚಿಸಿ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಜೊತೆಗೆ ಬಿಳಿ ಕೂದಲನ್ನು ಮೃದುವಾಗಿ ಕಂದು ಬಣ್ಣದಲ್ಲಿ ಮರೆಮಾಡಲು ಸಹಕಾರಿ. ತೆಂಗಿನೆಣ್ಣೆ ಕೂದಲಿಗೆ ಆಳವಾದ ಪೋಷಣೆ ನೀಡಿ ತೇವಗೊಳಿಸಿ ತಲೆಹೊಟ್ಟು, ಶುಷ್ಕತೆ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ.

ಹೇರ್ ಮಾಸ್ಕ್ ತಯಾರಿಸುವ ವಿಧಾನ

2 ಚಮಚ ಕಾಫಿ ಪುಡಿ ತೆಗೆದುಕೊಳ್ಳಿ

3–4 ಚಮಚ ತೆಂಗಿನೆಣ್ಣೆ ಸೇರಿಸಿ ಚೆನ್ನಾಗಿ ಕಲಸಿ

ಈ ಮಿಶ್ರಣವನ್ನು ಕೂದಲಿನ ಬೇರುಗಳಿಗೆ ಹಚ್ಚಿ

1–2 ಗಂಟೆಗಳ ನಂತರ ಶಾಂಪೂ ಬಳಸಿ ತೊಳೆಯಿರಿ

ಮತ್ತೊಂದು ವಿಧಾನ

12–15 ಕರಿಬೇವಿನ ಎಲೆಗಳನ್ನು ತೆಗೆದುಕೊಳ್ಳಿ

2 ಚಮಚ ತೆಂಗಿನೆಣ್ಣೆ ಬಿಸಿ ಮಾಡಿ ಅದರಲ್ಲಿ ಎಲೆಗಳನ್ನು ಹಾಕಿ

ತಣ್ಣಗಾದ ಬಳಿಕ ಕಾಫಿ ಪುಡಿ ಸೇರಿಸಿ

ಕೂದಲಿಗೆ ಹಚ್ಚಿ 2 ಗಂಟೆಗಳ ನಂತರ ತೊಳೆಯಿರಿ

ಬಳಸುವ ವಿಧಾನ

ಈ ಮಿಶ್ರಣವನ್ನು ವಾರಕ್ಕೆ ಎರಡು ಬಾರಿ ಬಳಸಿದರೆ ಕೆಲವೇ ವಾರಗಳಲ್ಲಿ ಬಿಳಿ ಕೂದಲು ನಿಧಾನವಾಗಿ ಗಾಢ ಬಣ್ಣಕ್ಕೆ ತಿರುಗಲು ಪ್ರಾರಂಭಿಸುತ್ತದೆ. ಜೊತೆಗೆ ಕೂದಲು ಬಲವಾಗಿದ್ದು, ದಪ್ಪವಾಗುತ್ತದೆ ಹಾಗೂ ನೈಸರ್ಗಿಕ ಹೊಳಪು ಬರುತ್ತದೆ.

ಮನೆಯಲ್ಲಿ ಸಿಗುವಂತಹ ಪದಾರ್ಥಗಳನ್ನು ಬಳಸಿ ನೈಸರ್ಗಿಕವಾಗಿ ಕೂದಲನ ಕಪ್ಪು ದಟ್ಟವಾಗಿ ಬೆಳೆಯುವುದರ ಜೊತೆಗೆ ಬಿಳಿ ಕೂದಲನ್ನು ಕೂಡ ಕಡಿಮೆ ಮಾಡಿಕೊಳ್ಳಬಹುದು..

About the Author

Praja Vahini

Editor

View All Posts

Spread the love

Post navigation

Previous: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಿಸಿಟಿವಿ ಕೇಬಲ್ ಕಟ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್!
Next: ಪ್ರತಿದಿನ ಮೊಟ್ಟೆ ತಿಂದರೆ ಏನಾಗುತ್ತದೆ ಗೊತ್ತಾ?

Views:

26

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.