ಚಿಕ್ಕಬಳ್ಳಾಪುರ: ಸಾಮಾನ್ಯವಾಗಿ ಯಾವುದೇ ಒಂದು ಸರಕಾರಿ ಪರೀಕ್ಷೆಗಳು ಇದ್ದರೆ ಅದಕ್ಕೆ ಅದರದ್ದೇ ಆದ ಕೆಲವು ನಿಯಮಗಳು ಇದ್ದೇ ಇರುತ್ತವೆ. ಪರೀಕ್ಷೆ ಬರೆಯುವಾಗ ಹೆಣ್ಣು ಮಕ್ಕಳು ಕಿವಿ ಓಲೆ, ಕೈ ಬಳೆ ಸೇರಿದಂತೆ ತಮ್ಮ ಮೈ ಮೇಲಿರುವ ಉಂಗುರ, ದಾರ ಎಲ್ಲವನ್ನು ತೆಗೆಯಬೇಕಾಗುತ್ತದೆ ಅದರಂತೆ ಗಂಡು ಮಕ್ಕಳು ಕೂಡ ಕೈಯಲ್ಲಿ ದಾರ ಹಾಗೂ ಜನಿವಾರ ಇನ್ನಿತರ ವಸ್ತುಗಳು ಇದ್ದರೆ ಅವುಗಳನ್ನು ಪರೀಕ್ಷೆ ಕೊಠಡಿಗೆ ಹಾಜರಾಗುವ ಮುನ್ನವೇ ತೆಗೆದು ಇಡಬೇಕಾಗುತ್ತದೆ.
ಹೌದು, ಸರ್ಕಾರದ ಯಾವುದೇ ಪರೀಕ್ಷೆ ಬರೆಯಬೇಕಾದರೆ ಕೆಲವು ನಿಯಮಗಳು ಇದ್ದೇ ಇರುತ್ತವೆ, ಅದರಂತೆ ಪರೀಕ್ಷೆ ಕೇಂದ್ರಗಳಲ್ಲಿ ಸರ್ಕಾರದ ಮಾರ್ಗ ಸೂಚಿಯಂತೆ ಪರೀಕ್ಷೆ ಬರೆಯಲು ಬರುವ ವಿದ್ಯಾರ್ಥಿಗಳಲ್ಲಿ ಸರ, ಬಲೆ ಹಾಗೂ ಇನ್ನಿತರ ವಸ್ತುಗಳು ಇದ್ದರೆ ಅದನ್ನ ಮೊದಲೇ ತೆಗೆದಿಡಬೇಕು ಎಂದು ತಿಳಿಸುತ್ತಾರೆ. ಅದರಂತೆ, ಚಿಕ್ಕಬಳ್ಳಾಪುರದಲ್ಲಿ ಸಿಇಟಿ ಪರೀಕ್ಷೆ ಬರೆಯಲು ಹೋಗಿದ್ದ ವಿದ್ಯಾರ್ಥಿಗೆ ತಾನು ಧರಿಸಿದ್ದ ಜನಿವಾರವನ್ನು ಕತ್ತರಿಸಿ ಕಸದ ಬುಟ್ಟಿಗೆ ಹಾಕಿದ್ದಾರೆ ಎಂದು ತಿಳಿದುಬಂದಿದೆ.
ಚಿಕ್ಕಬಳ್ಳಾಪುರ ತಾಲೂಕು ನಂದಿ ಕ್ರಾಸ್ ಬಳಿ ಸಮೀಪ ಇರುವ ನಾಗಾರ್ಜುನ ಕಾಲೇಜಿನಲ್ಲಿ ಘಟನೆ ನಡೆದಿದ್ದು, ಈ ಸಂಬಂಧ ವಿದ್ಯಾರ್ಥಿ, ಆತನ ತಾಯಿ ಸೇರಿದಂತೆ ಬ್ರಾಹ್ಮಣ ಸಮುದಾಯದಿಂದ ಘಟನೆ ಖಂಡಿಸಿ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಜಿಲ್ಲಾಧಿಕಾರಿಗೆ ದೂರು ನೀಡಲು ಮುಂದಾಗಿದ್ದಾರೆ. ಇದನ್ನೂ ಓದಿ: ಸಿಎಂಗೆ ಅಭಿನಂದನೆ ಸಲ್ಲಿಸಿದ ಮಾದಿಗ ಸಮುದಾಯದ ನಾಯಕರು
ಚಿಂತಾಮಣಿ ನಗರದ ವಿದ್ಯಾರ್ಥಿ ಸುಪ್ರೀತ್ ಏಪ್ರಿಲ್ 23 ರಂದು ಪರೀಕ್ಷೆ ಬರೆಯಲು ಬಂದಾಗ ಜನಿವಾರ ಕತ್ತರಿಸಲಾಗಿದೆ. ತಂದೆ ಇಲ್ಲದ ಸುಪ್ರೀತ್‌ಗೆ ತಾಯಿ ವಾಣಿ ಕಳೆದ 1 ವಾರದ ಹಿಂದೆಯಷ್ಟೇ ಸಂಬಂಧಿಕರ ಸಮ್ಮುಖದಲ್ಲಿ ಉಪನಯನ ಕಾಯಕ್ರಮ ಮಾಡಿಸಿ ಜನಿವಾರ ಹಾಕಿಸಿದ್ದರು.
ಜನಿವಾರ ಕತ್ತರಿಸಿದರಿಂದ ವಿಚಲಿತನಾಗಿರುವ ಪುತ್ರ ವಿಚಲಿತನಾಗಿ ಆತಂಕ ಸರಿಯಾಗಿ ಪರೀಕ್ಷೆ ಬರೆದಿಲ್ಲ. ಹೀಗಾಗಿ ಉನ್ನತ ಶಿಕ್ಷಣ ಸಚಿವರು ಮಗನಿಗೆ ಮರು ಪರೀಕ್ಷೆಯಾದರೂ ಮಾಡಲಿ ಇಲ್ಲವೇ ಗ್ರೇಸ್ ಅಂಕ ನೀಡಿ ಸಹಾಯ ಮಾಡಬೇಕು ಎಂದು ಮನವಿ ಮಾಡಿದ್ದಾರೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅಥವಾ ಸರ್ಕಾರವು ಪರೀಕ್ಷೆಯ ಸಮಯದಲ್ಲಿ ವಿದ್ಯಾರ್ಥಿಗಳು ಜನಿವಾರವನ್ನು ತೆಗೆಯಬೇಕು ಎಂಬ ಯಾವುದೇ ಅಧಿಕೃತ ಮಾರ್ಗಸೂಚಿಯನ್ನು ಹೊರಡಿಸಿಲ್ಲ. ಇದು ವೈಯಕ್ತಿಕ ಧಾರ್ಮಿಕ ನಂಬಿಕೆಯ ಭಾಗವಾಗಿದ್ದು, ಕಾನೂನು ನಿರ್ವಹಿಸುವಾಗ ಅಧಿಕಾರಿಗಳು ವಿವೇಚನೆಯಿಂದ ವರ್ತಿಸಬೇಕು ಎಂದು ಸೂಚಿಸಲಾಗಿದೆ.
