ಬೆಂಗಳೂರು: ಕನ್ನಡ ಬಿಗ್ ಬಾಸ್ ನಲ್ಲಿ ಪರಿಚಯವಾಗಿದ್ದ ನಿವೇದಿತಾ ಗೌಡ ಅವರಿಗೆ ಮೈಸೂರು ದಸರಾ ವೇದಿಕೆಯಲ್ಲಿ ನಿವೇದಿತಾ ಗೌಡ ಅವರಿಗೆ ಪ್ರಪೋಸ್ ಮಾಡಿ ನಂತರ ದಾಂಪತ್ಯ ಜೀವನಕ್ಕೆ ಕಾಲಿಟ್ಟ ರ್ಯಾಪರ್ ಚಂದನ್ ಶೆಟ್ಟಿ ಅವರು ಕೆಲವೇ ಕೆಲವು ವರ್ಷಗಳು ನಿವೇದಿತಾ ಜೊತೆ ಜೀವನ ಸಾಗಿಸಿ ನಂತರ ವಿಚ್ಛೇದನ ಪಡೆದಿದ್ದಾರೆ.
ನಿವೇದಿತಾ ಗೌಡ ಅವರಿಂದ ಚಂದನ್ ಶೆಟ್ಟಿ ಅವರು ವಿಜೇತನಾ ಪಡೆದ ಬಳಿಕ ಹಲವಾರು ಕಷ್ಟ ನೋವುಗಳನ್ನು ಅನುಭವಿಸಿ ಇದೀಗ ಮತ್ತೆ ಜೀವನದಲ್ಲಿ ಹೊಸ ಹೆಜ್ಜೆ ಇಡಲು ಮುಂದಾಗಿದ್ದಾರೆ.
ಹೌದು, ನಟ ಚಂದನ್ ಶೆಟ್ಟಿ ಅವರು ಇತ್ತೀಚಿಗೆ ತಮ್ಮ ಎರಡನೇ ಮದುವೆ ಬಗ್ಗೆ ಮನ ಬಿಚ್ಚಿ ಮಾತನಾಡಿ ತಮ್ಮ ಅಭಿಮಾನಿಗಳಿಗೆ ಖುಷಿ ನೀಡಿದ್ದಾರೆ. ಇದನ್ನೂ ಓದಿ: ಫೆಮಿನಾ ಮಿಸ್ ಇಂಡಿಯಾ -2026″ ಕಿರೀಟ ಮುಡಿಗೇರಿಸಿಕೊಂಡ ಶಾಸಕ ಸತೀಶ್ ಸೈಲ್ ಪುತ್ರಿ
ಖಾಸಗಿ ವಾಹಿನಿ ಸಂದರ್ಶನ ಒಂದರಲ್ಲಿ ಮಾತನಾಡಿದ ಚಂದನ್ ಶೆಟ್ಟಿ ಅವರು ‘ಮದುವೆ ಆಗುತ್ತೇನೆ. ಆದರೆ, ಈ ವರ್ಷ ಅಲ್ಲ. ಒಂದು ಒಳ್ಳೆಯ ಹುಡುಗಿ ನೋಡಿ ಮುಂದಿನ ವರ್ಷ ವಿವಾಹ ಆಗುತ್ತೇನೆ. ಹುಡುಗಿ ನೋಡುವ ಪ್ರಕ್ರಿಯೆ ಶುರುವಾಗಿಲ್ಲ’ ಎಂದು ಹೇಳಿದರು.
