Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಮಗಳ ಚಿಕಿತ್ಸೆಗೆ ಕಿಡ್ನಿ ಮಾರಲು ಮುಂದಾದ ತಂದೆ- ನೊಂದ ಕುಟುಂಬಕ್ಕೆ ನೇರವಾದ ಶಾಸಕ ಸುರೇಶ್ ಕುಮಾರ್
  • Bangalore
  • Politics

ಮಗಳ ಚಿಕಿತ್ಸೆಗೆ ಕಿಡ್ನಿ ಮಾರಲು ಮುಂದಾದ ತಂದೆ- ನೊಂದ ಕುಟುಂಬಕ್ಕೆ ನೇರವಾದ ಶಾಸಕ ಸುರೇಶ್ ಕುಮಾರ್

Praja Vahini April 21, 2026 1 minute read
Thumbnail for website
Spread the love

ಬೆಂಗಳೂರು: ಹೆತ್ತ ಮಕ್ಕಳು ಎಂತಾ ಕಷ್ಟದಲ್ಲಿದ್ದರೂ ಕೂಡ ತಂದೆ-ತಾಯಿ ಅವರ ಮಕ್ಕಳ ಜೀವನವನ್ನು ಹೇಗಾದರೂ ಸರಿ ಮಾಡಲು ಹರಸಾಹಸ ಪಡುತ್ತಾರೆ.

ಹೌದು, ಮಕ್ಕಳ ಜೀವನಕ್ಕಾಗಿ ಹೆತ್ತಾ ತಂದೆ-ತಾಯಿ ಎಂತಹ ಸಾಹಸಕ್ಕೂ ಕೂಡ ಕೈ ಹಾಕುತ್ತಾರೆ ಎಂಬ ಉದಾಹರಣೆ ಇದೀಗ ಬೆಂಗಳೂರಿನ ನಗರದಲ್ಲಿ ನಡೆದಿದೆ.

ತನ್ನ ಮಗಳಿಗೆ ಆರೋಗ್ಯ ಸಮಸ್ಯೆ ಇರುವುದರಿಂದ ಆಸ್ಪತ್ರೆಗೆ ದಾಖಲು ಮಾಡಿದ ತಂದೆ ಆಸ್ಪತ್ರೆಗೆ ಹಣ ಹೊಂದಿಸಲು ಆಗದಿದ್ದ ಕಾರಣಕ ತನ್ನ ಮಗಳಿಗೋಸ್ಕರ ತನ್ನ ಕಿಡ್ನಿಯನ್ನೇ ಮಾರಲು ಮುಂದಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಇನ್ನು ಈ ವಿಷಯ ತಿಳಿಯುತ್ತಿದ್ದಂತೆ ಶಾಸಕ ಸುರೇಶ್ ಕುಮಾರ್ ಅವರು ನೊಂದ ಕುಟುಂಬಕ್ಕೆ ಸ್ಪಂದಿಸಿ ನೆರವುಗೆ ದಾವಿಸಿದ್ದಾರೆ.

ಕುಸುಮಾ ಎಂಬ ಮಹಿಳೆ ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆ ಸೇರಿದ್ದರು. ಕಾಲು ಕಳೆದುಕೊಂಡಿದ್ದರೂ ಇತ್ತೀಚೆಗೆ ಪರೀಕ್ಷೆ ಬರೆದಿದ್ದರು. ಅನಾರೋಗ್ಯದಿಂದ ವೈಟ್‌ಫೀಲ್ಡ್‌ನ ಎಸ್ಟರ್ ಆಸ್ಪತ್ರೆಗೆ ದಾಖಲಾಗಿದ್ದರು. 4 ದಿನಕ್ಕೆ ಕುಸುಮಾ ಚಿಕಿತ್ಸೆಗೆ ಐದೂವರೆ ಲಕ್ಷ ರೂಪಾಯಿ ವೆಚ್ಚವಾಗಿತ್ತು. ಮಗಳ ಚಿಕಿತ್ಸೆಗೆ ಹೆಚ್ಚಿನ ಹಣ ಹೊಂದಿಸಲು ಸಾಧ್ಯವಾಗದೇ ತಂದೆ ಕಿಡ್ನಿ ಮಾರಾಟಕ್ಕೆ ಮುಂದಾಗಿದ್ದರು.

ನೊಂದ ಕುಟುಂಬದ ಬಗ್ಗೆ ವಿಷಯ ತಿಳಿದು ಶಾಸಕ ಸುರೇಶ್ ಕುಮಾರ್ ಆಸ್ಪತ್ರೆಗೆ ಭೇಟಿ ನೀಡಿ ವಿಚಾರಿಸಿದರು. ವೈದ್ಯರು ಮತ್ತು ಆಸ್ಪತ್ರೆ ಆಡಳಿತ ಮಂಡಳಿಯ ಜೊತೆ ಮುಕ್ತ ಮಾತುಕತೆ ನಡೆಸಿದರು. ಈ ವಿಚಾರವನ್ನು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹಾಗೂ ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಅವರ ಗಮನಕ್ಕೆ ತಂದರು. ಇದನ್ನೂ ಓದಿ: ಫೆಮಿನಾ ಮಿಸ್ ಇಂಡಿಯಾ -2026″ ಕಿರೀಟ ಮುಡಿಗೇರಿಸಿಕೊಂಡ ಶಾಸಕ ಸತೀಶ್ ಸೈಲ್ ಪುತ್ರಿ

ಕೊನೆಗೆ ಕುಸುಮಾ ಚಿಕಿತ್ಸೆಗಾಗಿ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಆಸ್ಪತ್ರೆ ವೆಚ್ಚ ಭರಿಸಲು ಅನುವು ಮಾಡಿಕೊಡಲಾಯಿತು.

About the Author

Praja Vahini

Editor

View All Posts

Spread the love

Post navigation

Previous: ಫೆಮಿನಾ ಮಿಸ್ ಇಂಡಿಯಾ -2026″ ಕಿರೀಟ ಮುಡಿಗೇರಿಸಿಕೊಂಡ ಶಾಸಕ ಸತೀಶ್ ಸೈಲ್ ಪುತ್ರಿ
Next: ಎರಡನೇ ಮದುವೆ ಬಗ್ಗೆ ಚಂದನ್ ಶೆಟ್ಟಿ ಹೇಳಿದ್ದೇನು?

Views:

47

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.