Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ದೇಶದ ಸ್ವಾಭಿಮಾನ ಮಹಿಳೆಯರಿಗೆ ಕೇಂದ್ರ ಸರ್ಕಾರ ಅಪಮಾನ ಮಾಡಿದೆ: ಸಿಎಂ
  • Bangalore
  • Politics
  • State

ದೇಶದ ಸ್ವಾಭಿಮಾನ ಮಹಿಳೆಯರಿಗೆ ಕೇಂದ್ರ ಸರ್ಕಾರ ಅಪಮಾನ ಮಾಡಿದೆ: ಸಿಎಂ

Praja Vahini April 18, 2026
WhatsApp Image 2026-04-18 at 22.04.58
Spread the love

ಬೆಂಗಳೂರು: ಮಹಿಳಾ ಮೀಸಲಾತಿ ಮಸೂದೆ ವಿಚಾರದಲ್ಲಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಮಾಡಿದ ಕಪಟ ನಾಟಕ ದೇಶದ ಮಹಿಳೆಯರಿಗೆ ಮಾಡಿರುವ ಅಪಮಾನ ಮತ್ತು ದ್ರೋಹವಾಗಿದೆ. ಸ್ವಾಭಿಮಾನಿಗಳಾಗಿರುವ ಭಾರತೀಯ ಮಹಿಳೆಯರು ಈ ದ್ರೋಹವನ್ನು ಖಂಡಿತಾ ಸಹಿಸುವುದಿಲ್ಲ ಮತ್ತು ಮರೆಯುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಕ್ರೋಶ ಹೊರಹಾಕಿದರು.
ಈ ಕುರಿತು ಮಾತನಾಡಿದ ಅವರು, ವಿರೋಧ ಪಕ್ಷಗಳು ಈ ಮಸೂದೆಯನ್ನು ತಿರಸ್ಕರಿಸಬೇಕು ಮತ್ತು ಅದನ್ನೇ ನೆಪಮಾಡಿಕೊಂಡು ನಾವೆಲ್ಲರೂ ಮಹಿಳಾ ವಿರೋಧಿಗಳು ಎಂದು ದೇಶದ ತುಂಬಾ ಢಂಗುರ ಬಾರಿಸುತ್ತಾ ಹೋಗಬೇಕು ಎನ್ನುವ ದುರುದ್ದೇಶದಿಂದಲೇ ಕೇಂದ್ರ ಸರ್ಕಾರ ತುರ್ತಾಗಿ ಲೋಕಸಭಾ ಅಧಿವೇಶನವನ್ನು ಕರೆದು ಅವಸರದಲ್ಲಿ “ನಾಮ್ ಕ ವಸ್ತೆ” ಚರ್ಚೆ ನಡೆಸಿ ಅದು ವಿಫಲಗೊಳ್ಳುವಂತೆ ಮಾಡಿದೆ. ಈ ಕಪಟ ನಾಟಕವನ್ನು ಅರ್ಥಮಾಡಿಕೊಳ್ಳದಷ್ಟು ನಮ್ಮ ಮಹಿಳೆಯರು ದಡ್ಡರಲ್ಲ.

ದೇಶದ ಜನಸಂಖ್ಯೆಯಲ್ಲಿ ಅರ್ಧಭಾಗದಷ್ಟು ಇರುವ ಮಹಿಳೆಯರಿಗೆ ಸಂಬಂಧಿಸಿದ ಮೀಸಲಾತಿಯಂತಹ ಗಂಭೀರ ವಿಷಯದ ಬಗ್ಗೆ ನಿರ್ಧಾರ ಕೈಗೊಳ್ಳುವ ಮೊದಲು ಪ್ರಧಾನ ಮಂತ್ರಿಗಳು ವಿರೋಧಪಕ್ಷಗಳ ಜೊತೆ ಸಮಾಲೋಚನೆ ನಡೆಸಿ ಅಭಿಪ್ರಾಯ ಸಂಗ್ರಹ ಮಾಡಬೇಕಾಗಿತ್ತು. ಕೇವಲ ತಮ್ಮ ಪೋಟೊಗಳನ್ನು ಹಾಕಿಕೊಂಡು ಜಾಹೀರಾತು ನೀಡುವುದಲ್ಲ, ದೇಶದಾದ್ಯಂತ ಬೇರೆ ಬೇರೆ ಕ್ಷೇತ್ರದಲ್ಲಿರುವ ಹಿರಿಯ ಮಹಿಳಾ ನಾಯಕಿಯರ ಜೊತೆಗಾದರೂ ಒಂದು ಚರ್ಚೆ ನಡೆಸಬೇಕಾಗಿತ್ತು. ಇದ್ಯಾವುದನ್ನೂ ಮಾಡದೆ ದಿಢೀರನೆ ಮಹಿಳಾ ಮೀಸಲಾತಿ ಮಸೂದೆಯನ್ನು ಮಂಡಿಸಿ, ವಿರೋಧ ಪಕ್ಷಗಳು ಕಣ್ಣುಮುಚ್ಚಿಕೊಂಡು ಒಪ್ಪಿಗೆ ನೀಡಬೇಕೆಂದು ನಿರೀಕ್ಷಿಸುವುದು ಮಹಿಳೆಯರಿಗೆ ಮಾತ್ರವಲ್ಲ ವಿರೋಧ ಪಕ್ಷಗಳಿಗೂ ಮಾಡಿರುವ ಅವಮಾನವಾಗಿದೆ ಎಂದರು.

ಸಾಮಾಜಿಕ ನ್ಯಾಯಕ್ಕೆ ಬದ್ಧವಾಗಿರುವ ಕಾಂಗ್ರೆಸ್ ಪಕ್ಷ ಪ್ರಾರಂಭದಿಂದಲೂ ಮಹಿಳೆಯರಿಗೆ ರಾಜಕೀಯ ಪ್ರಾತಿನಿಧ್ಯದಲ್ಲಿ ಮೀಸಲಾತಿ ನೀಡಲು ಬದ್ಧವಾಗಿದೆ. ನಮ್ಮ ಪಕ್ಷ ಅಧಿಕಾರದಲ್ಲಿರಲಿ, ಇರದೆ ಇರಲಿ ಸತತವಾಗಿ ಮಹಿಳಾ ಮೀಸಲಾತಿ ಪರವಾದ ನಿಲುವು ತೆಗೆದುಕೊಂಡಿದೆ. ಶ್ರೀಮತಿ ಇಂದಿರಾಗಾಂಧಿ ಮತ್ತು ಶ್ರೀಮತಿ ಸೋನಿಯಾ ಗಾಂಧಿಯವರಂತಹ ಜಗಮೆಚ್ಚಿದ ನಾಯಕಿಯರನ್ನು ಪಡೆದಿರುವ ಕಾಂಗ್ರೆಸ್ ಪಕ್ಷಕ್ಕೆ ಮಹಿಳಾ ನಾಯಕತ್ವದ ಮಹತ್ವ ಗೊತ್ತಿದೆ.
1992ರಲ್ಲಿ 73 ಮತ್ತು 74ನೇ ಸಾಂವಿಧಾನಿಕ ತಿದ್ದುಪಡಿ ಮೂಲಕ ಸ್ಥಳೀಯ ಸಂಸ್ಥೆಗಳಲ್ಲಿ (ಪಂಚಾಯತ್ ರಾಜ್ ಮತ್ತು ನಗರ ಸ್ಥಳೀಯ ಸಂಸ್ಥೆಗಳು) ಮಹಿಳೆಯರಿಗೆ ಶೇಕಡಾ 33ರಷ್ಟು ಮೀಸಲಾತಿ ನೀಡಿರುವ ಕೀರ್ತಿ ಕಾಂಗ್ರೆಸ್ ಪಕ್ಷಕ್ಕೆ ಸಲ್ಲಬೇಕು ಎಂದರು.

About the Author

Praja Vahini

Editor

View All Posts

Spread the love

Post navigation

Previous: ಗಲ್ಲಿ ಗಲ್ಲಿಯಲ್ಲೊಂದು ತಲೆಎತ್ತಿದ ಅಕ್ರಮ ಕೋಚಿಂಗ್, ವಸತಿ ಶಾಲೆ
Next: ನಾಡು ಸರ್ವಜನಾಂಗದ ಶಾಂತಿಯ ತೋಟವಾಗಬೇಕು: ಸಿಎಂ

Views:

37

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.