ಬೆಂಗಳೂರು: ಬಾಸ್ಕೆಟ್ಬಾಲ್ ಪಂದ್ಯಾವಳಿಯಲ್ಲಿ 17 ಬಾರಿ ಕರ್ನಾಟಕವನ್ನು ಪ್ರತಿನಿಧಿಸಿ ಇದೀಗ “ಮಿಸ್ ಯೂನಿವರ್ಸ್ ಕರ್ನಾಟಕ – 2026” ಕಿರೀಟವನ್ನು ತಮ್ಮದಾಗಿಸಿಕೊಂಡಿರುವ ಕುಮಾರಿ ಲೇಖನ ಮಲ್ಲಿಕಾರ್ಜುನ ಹೆಗ್ಡೆ ಅವರು ನಿನ್ನೆ (ಸೋಮವಾರ ಏ. 13) ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದರು.
ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರು ಲೇಖನ ಅವರನ್ನ ಅಭಿನಂದಿಸಿ ಶುಭ ಹಾರೈಸಿದರು.
