ಶಹಾಪುರ: ಬಾಕಿ ಬಿಲ್ ಫೈಲ್ ಪಾಸ್ ಕೊಡಲು ಹಣದ ಬೇಡಿಕೆ ಇಟ್ಟ ದೂರನಡಿ ಭೀಮರಾಯನ ಗುಡಿ ಕೆಬಿಜೆಎನ್ಎಲ್ ಕಚೇರಿಯ ಎಇಇ ಮತ್ತು ಜೆಇ ಲೋಕಾಯುಕ್ತ ಬಲೆಗೆ ಸಿಲುಕಿದ್ದಾರೆ.
ವಡಗೇರ ತಾಲೂಕಿನ ಗದ್ದೆಸೂಗೂರು ಗ್ರಾಮದ ಖಾಸಿಂಸಾಬ್ ಜಲಾಲ್ ಸಾಬ್ ದೂರಿನ ಅನ್ವಯ ಲೋಕಾಯುಕ್ತ ಪಿಎಸ್ಐ ಶೋಧ ನೆಡೆಸಿ ಲಂಚ ಸ್ವೀಕರಿಸಿದ ಫೋನ್ ಪತ್ತೆ ಹಚ್ಚಿದ್ದಾರೆ.
ಭೀಮರಾಯನಗುಡಿ ಕೆಬಿಜೆ ಎನ್ಎಲ್ ಎಇಇ ಮಧುಸೂದನ್ ಹಾಗೂ ಜೆಇ ಮಂಜುನಾಥ ಫೋನ್ ಪೇ ಮೂಲಕ 35,000 ಹಣ ಸ್ವೀಕರಿಸಿದ್ದು, ಬಾಕಿ ಬಿಲ್ ಪಾವತಿಗಾಗಿ ಈ ಇಬ್ಬರು ಅಧಿಕಾರಿಗಳು ಹಣದ ಬೇಡಿಕೆ ಇಟ್ಟು ಲಂಚವನ್ನು ಫೋನ್ ಪೇ ಮೂಲಕ ಸ್ವೀಕಾರ ಮಾಡಿದ್ದಾರೆ ಎಂದು ದೂರಿನಲ್ಲಿ ದಾಖಲಿಸಿದ್ದಾರೆ. ಇದನ್ನೂ ಓದಿ: ತಾಲೂಕಿನ ಪತ್ರಿಕೋದ್ಯಮಕ್ಕೆ ಮತ್ತೊಂದು ಹೆಮ್ಮೆಯ ಗರಿ
ಲೋಕಾಯುಕ್ತ ಡಿವೈಎಸ್ಪಿ ಜೆ. ಎಚ್ ಇನಾಮದರ್, ಪಿಐ ಸಿದ್ರಾಯ ಬಲರೂಗಿ ಹಾಗೂ ಲೋಕಾಯುಕ್ತ ಸಿಬ್ಬಂದಿಗಳು ಲೋಕ ಎಸ್ಪಿ ಮಾರ್ಗದರ್ಶನದಲ್ಲಿ ಕಾರ್ಯಚರಣೆ ನಡೆಸಿದ್ದಾರೆ.
