Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ‘ಅಚ್ಛೇ ದಿನಗಳು’ ಹೋಗಿ ‘ಕಚ್ಚಾ ದಿನ’ಗಳು ಬಂದಿವೆ: ಡಿಕೆಶಿ
  • Bangalore
  • Politics
  • State

‘ಅಚ್ಛೇ ದಿನಗಳು’ ಹೋಗಿ ‘ಕಚ್ಚಾ ದಿನ’ಗಳು ಬಂದಿವೆ: ಡಿಕೆಶಿ

Praja Vahini March 31, 2026 1 minute read
WhatsApp Image 2026-03-31 at 14.00.50
Spread the love

ಬೆಂಗಳೂರು: ಬಿಜೆಪಿ ನಾಯಕರಿಗೆ ನನ್ನದೊಂದೇ ಪ್ರಶ್ನೆ, ಮೋದಿಯವರು ‘ಅಚ್ಛೇ ದಿನಗಳುʼ ಬರುತ್ತವೆ ಎಂದು ಹೇಳಿದ್ದರಲ್ಲ, ಏನಾಯಿತು ಆ ಭರವಸೆ? ನೀವು ನೀಡಿದ ಆ ‘ಅಚ್ಛೇ ದಿನಗಳುʼ ಈಗ ಎಲ್ಲಿವೆ? ಈಗ ‘ಅಚ್ಛೇ ದಿನಗಳು’ ಹೋಗಿ ‘ಕಚ್ಚಾ ದಿನ’ಗಳು ಬಂದಿವೆ ಎಂದು ಹೇಳಬೇಕೇ? ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಕೇಂದ್ರ ಸರ್ಕಾರವನ್ನ ಪ್ರಶ್ನಿಸಿದರು.

ಈ ಕುರಿತು ಇಂದು (ಮಂಗಳವಾರ ಮಾರ್ಚ್‌ 31) ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಯುದ್ಧಗಳ ನೆಪವೊಡ್ಡಿ ಕೇಂದ್ರ ಸರ್ಕಾರವು ದೇಶದಲ್ಲಿ ಉಂಟಾಗುತ್ತಿರುವ ಬೆಲೆ ಏರಿಕೆಯ ಸಮಸ್ಯೆಯನ್ನು ಕಡೆಗಣಿಸುತ್ತಿದೆ. ಕೇಂದ್ರದ ವಿದೇಶಾಂಗ ನೀತಿಯ ವೈಫಲ್ಯಗಳಿಂದಾಗಿ ಬಡ ಜನರ ಬದುಕು ಹೇಗೆ ದುಸ್ತರವಾಗಿದೆ.

ಈಗ ‘ಉಜ್ವಲ’ ಯೋಜನೆ ಹೋಗಿ ಮತ್ತೆ ‘ಸೌದೆ’ ಯೋಜನೆ ಬಂದಂತಾಗಿದೆ. ಅಡುಗೆ ಅನಿಲದ ಸಮರ್ಪಕ ಪೂರೈಕೆ ಇಲ್ಲದೆ ಸಾಮಾನ್ಯ ಜನರಿಗೆ ಹಾಗೂ ಹೋಟೆಲ್ ಉದ್ಯಮಕ್ಕೆ ಬಹಳ ತೊಂದರೆಯಾಗುತ್ತಿದೆ. ಕೇಂದ್ರ ಸರ್ಕಾರ ನಮಗೆ ಇಂದು ‘ಸೌದೆ ಭಾಗ್ಯ’ ನೀಡಿದೆ. ಅಡುಗೆ ಅನಿಲದಿಂದ ಹಿಡಿದು ಪೆಟ್ರೋಲ್, ಡೀಸೆಲ್ ಹಾಗೂ ಇನ್ನಿತರ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಇಂದು ಗಗನಕ್ಕೇರಿದೆ.

ಇಂತಹ ಕಷ್ಟದ ದಿನಗಳಲ್ಲಿ ಜನರ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ನಮ್ಮ ಸರ್ಕಾರ ಜಾರಿಗೆ ತಂದ ‘ಗ್ಯಾರೆಂಟಿ’ ಯೋಜನೆಗಳು ಜನರಿಗೆ ಹೇಗೆ ಆಸರೆಯಾಗಿವೆ ಎಂಬುದಕ್ಕೆ ನೀವೆಲ್ಲರೂ ಸಾಕ್ಷಿಯಾಗಿದ್ದೀರಿ ಎಂದರು. ಇದನ್ನೂ ಓದಿ: ಐತಿಹಾಸಿಕ ಬೆಂಗಳೂರು ಕರಗಕ್ಕೆ ಕ್ಷಣಗಣನೆ

ಇಂದಿನಿಂದ ಟೋಲ್ ದರ ಕೂಡ ಏರಿಕೆಯಾಗಿದೆ. ಈಗಾಗಲೇ ಪೆಟ್ರೋಲ್ ದರ ಏರಿಕೆಯಿಂದ ತತ್ತರಿಸಿರುವ ಜನರಿಗೆ ಕೇಂದ್ರ ಸರ್ಕಾರವು ಇದೀಗ ಮತ್ತೊಂದು ಹೊಸ ಹೊರೆಯನ್ನು ಹೊರಿಸಿದೆ. ಸುಮಾರು 900ಕ್ಕೂ ಹೆಚ್ಚು ಅಗತ್ಯ ಔಷಧಿಗಳ ಬೆಲೆಯನ್ನು ಹೆಚ್ಚಿಸುವ ಮೂಲಕ, ಈ ಬಡ ಜನವಿರೋಧಿ ಸರ್ಕಾರವು ಸಾಮಾನ್ಯ ಜನರ ಬದುಕನ್ನು ಮತ್ತಷ್ಟು ಕಷ್ಟಕ್ಕೆ ದೂಡಿದೆ.

ಸಂಕಷ್ಟದ ಸಮಯದಲ್ಲಿ ಜನರ ಬದುಕನ್ನು ಆರ್ಥಿಕ ಸವಾಲುಗಳಿಂದ ಹೇಗೆ ಮುಕ್ತಗೊಳಿಸಬೇಕು ಎಂಬ ಯೋಜನೆ ರೂಪಿಸಬೇಕಾದ ಕೇಂದ್ರ ಸರ್ಕಾರವು, ಏಪ್ರಿಲ್ ಒಂದರಿಂದಲೇ ವಿವಿಧ ವಸ್ತುಗಳ ಬೆಲೆ ಏರಿಕೆ ಮಾಡುವ ಮೂಲಕ ಜನರನ್ನು ‘ಏಪ್ರಿಲ್ ಫೂಲ್’ ಮಾಡಿದೆ. ಈ ಮೂಲಕ ಜನಸಾಮಾನ್ಯರನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳಿದೆ ಎಂದರು.

About the Author

Praja Vahini

Editor

View All Posts

Spread the love

Post navigation

Previous: ‘ಧುರಂಧರ್ 2’ ಗಳಿಕೆಯಲ್ಲಿ ಹೊಸ ದಾಖಲೆ!
Next: ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಹಾಗಾದ್ರೆ ಈ ಹಣ್ಣುಗಳನ್ನು ಸೇವನೆ ಮಾಡಿ

Views:

36

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.