ಮುಂಬೈ: ರಣವೀರ್ ಸಿಂಗ್ ಅಭಿನಯದ ‘ಧುರಂಧರ್ 2’ ಸಿನಿಮಾ ವಿಶ್ವದಾದ್ಯಂತ ಮಾರ್ಚ್ 19 ರಂದು ಬಿಡುಗಡೆಯಾಗಿ ಎಲ್ಲೆಡೆ ಭರ್ಜರಿ ಪ್ರದರ್ಶನ ಕಾಣುತ್ತಿರುವುದರ ಜೊತೆಗೆ ಇದೀಗ ಗಳಿಕೆಯಲ್ಲೂ ಭರ್ಜರಿ ದಾಖಲೆ ಬರುತ್ತಿದೆ.
ಹೌದು, ನಿರ್ದೇಶಕ ಆದಿತ್ಯ ಧಾರ್ ಅವರ ‘ಧುರಂಧರ್: ದಿ ರಿವೆಂಜ್’ (ಧುರಂಧರ್ 2) ಚಿತ್ರವು ಜಾಗತಿಕ ಬಾಕ್ಸ್ ಆಫೀಸ್ನಲ್ಲಿ ಸಾಧನೆ ಮುಂದುವರೆಸುತ್ತಿದ್ದು, ಕೇವಲ 10 ದಿನಗಳಲ್ಲಿ ಹಲವು ದಾಖಲೆಗಳನ್ನು ಮುರಿದಿದೆ.
‘ಬಾಕ್ಸ್ ಆಫೀಸ್ ಮೋಜೊ’ ವರದಿ ಪ್ರಕಾರ, ‘ಧುರಂಧರ್ 2’ ಈಗಾಗಲೇ $22 ಮಿಲಿಯನ್ (ಸುಮಾರು ₹207 ಕೋಟಿ) ಸಂಗ್ರಹಿಸಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ ಎನ್ನಲಾಗಿದೆ. ಇದನ್ನೂ ಓದಿ: ಕೆಡಿ ಸಿನಿಮಾಗೆ ರಿಲೀಸ್ಗು ಮುನ್ನ ಸಂಕಷ್ಟ
ಈ ಮೂಲಕ ‘ಧುರಂಧರ್ 2’ ವಿದೇಶಗಳಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ ಚಿತ್ರವಾಗಿ ಹೊರಹೊಮ್ಮಿದೆ. ಚಿತ್ರವು ದೇಶೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಸೂಪರ್ಡೂಪರ್ ಹಿಟ್ ಚಿತ್ರಗಳನ್ನೂ ಹಿಂದಿಕ್ಕಿ ತನ್ನ ಪ್ರಾಬಲ್ಯವನ್ನು ತೋರಿಸಿದೆ.
