ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ರಾಜ್ಯದ ರಾಜಧಾನಿ ಬೆಂಗಳೂರು ನಗರದಲ್ಲಿ ಮಾದಕ ವಸ್ತುಗಳ ಮಾರಾಟಗಾರರ ಹಾವಳಿ ಹೆಚ್ಚಾಗಿದ್ದು, ಇದೀಗ ಆಡಗೋಡಿ ಪೊಲೀಸ್ ಠಾಣೆಯ ಪೊಲೀಸರ ಕಾರ್ಯಾಚರಣೆಯಲ್ಲಿ ಸುಮಾರು 27 ಕೆಜಿ ಗಾಂಜಾ ವಶಕ್ಕೆ ಪಡೆದು ಮೂವರನ್ನ ಬಂಧಿಸಲಾಗಿದೆ.
ಇನ್ನು ಬಂಧಿತರನ್ನು ಸಂತೋಷ್, ರಂಜಿತ್ ಅಲಿಯಾಸ್ ಡೋರಿ ಮತ್ತು ಅರುಣ್ ಅಲಿಯಾಸ್ ಮುನ್ನ ಎಂದು ಗುರುತಿಸಲಾಗಿದೆ. ಇವರಿಂದ 27 ಕೆಜಿ ಗಾಂಜಾ ಹಾಗೂ 220 ಗ್ರಾಂ ಹೈಡ್ರೋ ಗಾಂಜಾ ಜಪ್ತಿ ಮಾಡಲಾಗಿದೆ.
ಪೊಲೀಸರ ಪ್ರಕಾರ, ಆರೋಪಿಗಳು ಐಷಾರಾಮಿ ಜೀವನಕ್ಕಾಗಿ ಗಾಂಜಾ ಮಾರಾಟದಲ್ಲಿ ತೊಡಗಿಕೊಂಡಿದ್ದರು. ಮಹಿಳೆಯರು ಹಾಗೂ ಅಂಗವಿಕಲರ ಮೂಲಕ ಸಣ್ಣ ಪ್ಯಾಕೆಟ್ಗಳಲ್ಲಿ ಗಾಂಜಾ ಮಾರಾಟ ಮಾಡಿಸುತ್ತಿದ್ದು, ಪ್ರತಿ ಪ್ಯಾಕೆಟ್ನ್ನು ₹500 ರಿಂದ ₹2,000ರವರೆಗೆ ಮಾರಾಟ ಮಾಡುತ್ತಿದ್ದರು. ಇದನ್ನೂ ಓದಿ: ಸಿಟಿಗಳಲ್ಲಿ ಸೌದೆಗಳನ್ನ ಎಲ್ಲಿಂದ ತರೋದು? ಕೇಂದ್ರ ಬಿಜೆಪಿಗೆ ಡಿಕೆಶಿ
ಈ ಸಂಬಂಧ ಆಡಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಮುಂದುವರೆದಿದೆ.
