ಬೆಂಗಳೂರು: ಇಸ್ರೇಲ್-ಇರಾನ್ ಯುದ್ಧದಿಂದ ಇಡೀ ಪ್ರಪಂಚದಾದ್ಯಂತ ಪೆಟ್ರೋಲ್, ಡೀಸೆಲ್, ಗ್ಯಾಸ್ ದರ ಏರಿಕೆಯಾಗಿದ್ದು, ಇದೀಗ ಈ ಕುರಿತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಪ್ರತಿಕ್ರಿಯೆಸಿ, ಕೇಂದ್ರದಲ್ಲಿ ಬಿಜೆಪಿಯು ಸೌದೆ ಮುಕ್ತ ಭಾರತ ಅಂತ ಎಲ್ಲೆಡೆ ಗ್ಯಾಸ್ ನೀಡಿ, ಹಳ್ಳಿಗಳಿಗೂ ಗ್ಯಾಸ್ ನೀಡಿ ಈಗ ಹಳ್ಳಿ ಸೇರಿದಂತೆ ಸಿಟಿಗಳಿಗೂ ಒಲೆಯಲ್ಲಿ ಅಡುಗೆ ಮಾಡುವಂತಹ ಪರಿಸ್ಥಿತಿ ಬಿಜೆಪಿ ತಂದಿದೆ ಎಂದು ಕೇಂದ್ರ ಬಿಜೆಪಿ ವಿರುದ್ಧ ಅಕ್ರೋಶ ಹೊರ ಹಾಕಿದ್ದಾರೆ.
ಹಳ್ಳಿಗಳಲ್ಲಿ ಹೇಗೋ ಸೌದೆ ಸಿಗುತೆ ಆದರೆ ಸಿಟಿಗಳಲ್ಲಿ ಸೌದೆಗಳಿಂದ ಅಡುಗೆ ಮಾಡುವುದು ಎಷ್ಟು ಕಷ್ಟ ಹಾಗೂ ಎಷ್ಟು ತೊಂದರೆ ಎಂದು ಕೇಂದ್ರ ಸರ್ಕಾರಕ್ಕೆ ಗೊತ್ತಿದೆಯಾ ಎಂದು ಪ್ರಶ್ನಿಸಿದರು.
ಈ ಕುರಿತು ಇಂದು ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿಯವರು ಎಲೆಕ್ಷನ್ ನಡೆಯುತ್ತಿದೆ, ಅಚ್ಚೇದಿನ್ ಅಂತ ಹೇಳಿದ್ರು, ಬಂತಾ? ಬೆಲೆ ಏರಿಕೆಯಿಂದ ರೋಡ್ ಕೆಲಸ ಸ್ಟಾಪ್ ಮಾಡಿಸಿದ್ದೇನೆ, ನಾವೇ ಬಿಟುಮಿನ್ ತಯಾರಿಗೆ ಸೂಚಿಸಿದ್ದೇನೆ. ಕಬ್ಬಿಣ, ಸಿಮೆಂಟ್ ಬೆಲೆ ಕೂಡ 5 ರಿಂದ 15% ಹೆಚ್ಚಳ ಆಗಿದೆ. ಒಂದೇ ಬಾರಿಗೆ ಇಷ್ಟು ಏರಿಸಿದ್ರೆ ಹೇಗೆ? ಜನ ಮತ್ತೆ ಸೌದೆಯಿಂದ ಅಡುಗೆ ಮಾಡುವ ಪರಿಸ್ಥಿತಿ ಬಂದಿದೆ. ಇದನ್ನೂ ಓದಿ: ಯಡಿಯೂರಪ್ಪ, ಬೊಮ್ಮಾಯಿ ಸರ್ಕಾರ ಬರೀ ಲೂಟಿ ಮಾಡಿದ್ದು ಬಿಟ್ಟರೆ ಅಭಿವೃದ್ಧಿ ಕಾರ್ಯ ಮಾಡಲಿಲ್ಲ: ಸಿಎಂ
ಸೌದೆ ಮುಕ್ತ ಭಾರತ ಅಂತ ಮಾಡಿದ್ರು, ಎಲ್ಲಾ ಕಡೆ ಗ್ಯಾಸ್ ತಂದ್ರು. ಸಿಟಿ ಅಲ್ಲ ಹಳ್ಳಿಗಳಲ್ಲೂ ಗ್ಯಾಸ್ ಬಂದಿದೆ ಅಂದ್ರು. ಈಗ ಸಿಟಿಗಳಲ್ಲಿ ಸೌದೆ ಎಲ್ಲಿಂದ ತರೋದು? ಕಮರ್ಷಿಯಲ್ ಗ್ಯಾಸ್ ಎಲ್ಲಿಂದ ಏರಿಸೋದು? ಎಂದು ಪ್ರಶ್ನೆ ಮಾಡಿದ್ರು.
