ಬೆಂಗಳೂರು: ಬಜೆಟ್ ಮಂಡನೆಗೆ ಹಣಕಾಸಿನ ಕೊರತೆ ಇರುವ ಪಾಲಿಕೆಗಳಿಗೆ ರಾಜ್ಯ ಸರ್ಕಾರ ನೆರವು ನೀಡಲಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ವಿಧಾನಸೌಧದಲ್ಲಿ ಇಂದು (ಮಂಗಳವಾರ ಮಾರ್ಚ್ 25) ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬೆಂಗಳೂರಿನ ಐದು ಪಾಲಿಕೆಗಳು ಪ್ರತ್ಯೇಕ ಬಜೆಟ್ ಮಂಡಿಸಲಿದ್ದು, ಉತ್ತಮ ಯೋಜನೆ ರೂಪಿಸಲಾಗಿದೆ. ಈ ಬಗ್ಗೆ ಶಾಸಕರ ಜತೆಗೂ ಚರ್ಚೆ ಮಾಡಲಾಗಿದೆ. ವಿಕೇಂದ್ರಿಕರಣದಿಂದಾಗಿ ಆಯಾ ಪಾಲಿಕೆಗಳ ಅನುದಾನ ಬೇರೆಡೆಗೆ ವರ್ಗಾವಣೆ ಆಗುವುದಿಲ್ಲ” ಎಂದು ಹೇಳಿದರು. ಇದನ್ನೂ ಓದಿ: “ಸ್ವಾವಲಂಬಿ ಸಾರಥಿ” ಯೋಜನೆಯಡಿಯಲ್ಲಿ ಸದೃಢ ಬದುಕು ಕಟ್ಟಿಕೊಳ್ಳಿ: ಸಿಎಂ
