ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿ ಬಂದ ಮೇಲೆ ಮಹಿಳೆಯರ ಓಡಾಟ ಹೆಚ್ಚಾಗಿರುವುದರಿಂದ ಬಸ್ಸಿನ ಅಭಾವ ಕಂಡು ಬರುತ್ತಿದೆ ಎಂಬ ಆರೋಪ ಕೇಳಿ ಬರುತ್ತಿರುವ ಬೆನ್ನೆಲೆ ಇದೀಗ ಸರ್ಕಾರವು ಸಾರ್ವಜನಿಕರಿಗೆ ಅನುಕೂಲವಾಗಲೆಂದು ಹೊಸ ಬಸ್ಸನ್ನು ರೋಡಿಗೆ ಇಳಿಸಿದ್ದಾರೆ.
ಹೌದು, ಸಾರಿಗೆ ಸಚಿವರಾಗಿರುವಂತಹ ರಾಮಲಿಂಗ ರೆಡ್ಡಿ ಅವರು (ಶುಕ್ರವಾರ ಮಾರ್ಚ್ 13) ರಂದು ನೂತನವಾಗಿ 115 ಬಸ್ಸುಗಳಿಗೆ ಹಸಿರು ನಿಶಾನೆ ತೋರಿಸುವ ಮೂಲಕ ನೂತನ 115 ಬಸ್ಸುಗಳಿಗೆ ಆರಂಭ ಕಲ್ಪಿಸಿದ್ದಾರೆ.
ಇನ್ನು 115 ನೂತನ ಬಸ್ಗಳಲ್ಲಿ 45 ಸಾಮಾನ್ಯ ಬಸ್ಗಳು ಮತ್ತು 70 ಪ್ರೀಮಿಯಂ ಪಲ್ಲಕ್ಕಿ ಬಸ್ಗಳು ಸೇರಿದ್ದು, ಬೆಂಗಳೂರು ನಗರದಿಂದ ರಾಜ್ಯದ ಪ್ರಮುಖ ಮಾರ್ಗಗಳಿಗೆ ಸಂಚಾರ ನಡೆಸಲಿವೆ. ಇದನ್ನೂ ಓದಿ: ಹಿಂದುತ್ವ ರಾಷ್ಟ್ರೀಯತೆಯ ಸಂಕೇತ
ನೂತನ ಪಲ್ಲಕ್ಕಿ ಬಸ್ಗಳಲ್ಲಿ ಹೈಟೆಕ್ ಸೀಟು ವ್ಯವಸ್ಥೆ, ಹೆಚ್ಚು ಅನುಕೂಲಗಳು, ಪ್ರಯಾಣಿಕರ ಸುರಕ್ಷತೆಯನ್ನು ಹೆಚ್ಚಿಸುವ ವಿಶೇಷ ವಿನ್ಯಾಸ ಮತ್ತು ಒಟ್ಟು 5 ಬಾಗಿಲುಗಳ ವ್ಯವಸ್ಥೆ ಇದ್ದು, ತುರ್ತು ಪರಿಸ್ಥಿತಿಯಲ್ಲಿ ಪ್ರಯಾಣಿಕರು ಸುಲಭವಾಗಿ ಹೊರಬರಲು ಸಹಾಯಕವಾಗಿವೆ. ಪಲ್ಲಕ್ಕಿ ಬಸ್ಗಳಲ್ಲಿ ಪ್ರಯಾಣಿಕರು ಹಣ ಕೊಟ್ಟು ಪ್ರಯಾಣ ಮಾಡಬೇಕಾಗಿದ್ದು, ಸಾಮಾನ್ಯ ಬಸ್ಗಳಲ್ಲಿ ಮಹಿಳೆಯರು ಆಧಾರ್ ಕಾರ್ಡ್ ತೋರಿಸುವ ಮೂಲಕ ಉಚಿತವಾಗಿ ಪ್ರಯಾಣ ಮಾಡಬಹುದು.
