ಚಡಚಣ: ಹಿಂದುತ್ವ ಎನ್ನುವುದು ಒಂದು ಸನಾತನ ಆಚರಣೆ. ಇದು ಎಲ್ಲ ಜಾತಿ ಮತಗಳನ್ನು ಒಳಗೊಂಡ ಒಂದು ರಾಷ್ಟ್ರೀಯತೆಯ ಸಂಕೇತ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕರ್ನಾಟಕ ಉತ್ತರ ಪ್ರಾಂತೀಯ ಕಾರ್ಯ ಕಾರಣಿ ಸದಸ್ಯ ರವೀಂದ್ರ ಜೀ ಹೇಳಿದರು.
ಪಟ್ಟಣದಲ್ಲಿ ಆಯೋಜಿಸಿದ್ದ ಹಿಂದು ಸಮ್ಮೇಳನದಲ್ಲಿ ಮಾತನಾಡಿದ ಅವರು, ಹಿಂದುತ್ವ ಎನ್ನುವುದು ಭಾರತೀಯತೆ, ದೇಶ ಭಕ್ತಿ, ಇದು ಯಾವುದೇ ಜಾತಿ ಮತವಲ್ಲ. ಆರ್.ಎಸ್.ಎಸ್ ಕೆಲಸ ಮಾಡುವುದು ಹಿಂದುತ್ವಕ್ಕಾಗಿ, ಹಿಂದು ರಾಷ್ಟ್ರ ನಿರ್ಮಾಣದ ಉದ್ದೇಶ ಹೊಂದಿದೆ.
ಈ ಸಂಘಟನೆ ಹಿಂದುಗಳನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿದೆ. ಆರ್.ಎಸ್.ಎಸ್ ಒಂದು ಅಲಿಖಿತ ಸಂಘಟನೆ. ಈ ಸಂಘಟನೆ ಎಲ್ಲಿಯೂ ನಾವುಗಳು ನಮ್ಮನಮ್ಮಲ್ಲಿಯಪಂಥಗಳನ್ನು ಬಿಟ್ಟು ನಾವೆಲ್ಲ ಹಿಂದೂ ಒಂದೇ ಎಂಬ ಧೈಯದಿಂದ ನಡೆದಾಗ ಮಾತ್ರ ಹಿಂದೂ ರಾಷ್ಟ್ರ ಬಲಿಷ್ಠವಾಗಲು ಸಾಧ್ಯ ಎಂದರು. ನೋಂದಾವಣೆಯಾಗಿಲ್ಲ.
ಹುಕ್ಕೇರಿಯ ಅಭಿನವ ಮಂಜುನಾಥ ಸ್ವಾಮೀಜಿ ಮಾತನಾಡಿ, ಮೊದಲು ನಾವೆಲ್ಲರೂ ನಮ್ಮಲ್ಲಿಯ ಬೇಧ ಭಾವವನ್ನು ಮರೆತು ಒಗ್ಗೂಡಿಕೊಂಡಾಗ ಮಾತ್ರ ಹಿಂದುತ್ವ ಉಳಿಯಲು ಸಾಧ್ಯ.
ನಾವೆಲ್ಲ ಮಠಾಧೀಶರು ಎಲ್ಲರೂ ಹಿಂದು ಎಂದು ಭಾವಿಸಿ, ದೇಶದ ಪ್ರಜೆಗಳಲ್ಲಿ ಹಿಂದುತ್ವದ ಅರಿವನ್ನು ಮೂಡಿಸಬೇಕು.
ನಾವು ಹಿಂದುಗಳು ಎಲ್ಲ ಸಮಯದಲ್ಲೂ ಎಚ್ಚರಿಕೆಯಿಂದ ಇದ್ದಾಗ ಮಾತ್ರ ನಮ್ಮ ದೇಶ ಭದ್ರವಾಗಿ, ಹಿಂದೂಗಳು ಸ್ವತಂತ್ರರಾಗಿರುತ್ತಾರೆ ಎಂದರು.
ಸ್ಥಳೀಯ ವಿರಕ್ತ ಮಠದ ಷಡಕ್ಷರ ಸ್ವಾಮೀಜಿ, ಹಾವಿನಾಳದ ವಿಜಯ ಮಹಾಂತೇಶ ಸ್ವಾಮೀಜಿ, ಓಂ ಶಾಂತಿ ಕೇಂದ್ರದ ಶ್ರೀದೇವಿ ಅಕ್ಕ, ಹಿಂದು ಸಮ್ಮೇಳನ ಸಂಚಲನಾ ಸಮಿತಿ ಅಧ್ಯಕ್ಷ ಶಾಂತುಗೌಡ ಬಿರಾದಾರ ಮಾತನಾಡಿದರು. ಇದನ್ನೂ ಓದಿ: ರಾಜಕೀಯವಾಗಿ ಸೋಲುಗೆಲುವು ಕಂಡಿದ್ದರೂ, ಜನಸೇವೆಯನ್ನು ಮರೆಯಲಾರೆ: ಸಿಎಂ
ಈ ಸಂದರ್ಭದಲ್ಲಿ ಚೇತನ ನಿರಾಳೆ ನಿರೂಪಿಸಿ, ರಾಜುಗೌಡ ಝಳಕಿ ಸ್ವಾಗತಿಸಿದರು. ಪಟ್ಟಣದ ವಿದ್ಯಾನಗರದ ಹನುಮಾನ ಮಂದಿರದಿಂದ ಬೃಹತ್ ಶೋಭಾ ಯಾತ್ರೆ ಜರುಗಿತು. ಗೊಂಬೆ ಕುಣಿತ, ವಿವಿಧ ವಾದ್ಯ ಮೇಳಗಳು, ಹಲವಾರು ರಾಷ್ಟ್ರೀಯ ನಾಯಕರ ಭಾವಚಿತ್ರಗಳ ಮೆರವಣಿಗೆ ರಿಕ್ಷಾಗಳ ಮೇಲೆ ಇಟ್ಟು ಜಾಥಾ ನಡೆಯಿತು. ಮುಖಂಡರಾದ ಚಿದಾನಂದ ಚಲವಾದಿ, ಭೀಮಾ ಶಂಕರ ಬಿರಾದಾರ, ಸಂಜು ಐಹೊಳ್ಳಿ, ಕಾಂತುಗೌಡ ಪಾಟೀಲ, ರಾಮ ಅವಟಿ, ಚಂದು ನಿರಾಳೆ ಇತರರು.
