ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಮತ್ತೆ ಸಚಿವ ಸಂಪುಟ ವಿಸ್ತರಣೆ ಕೂಗು ಜೋರಾಗಿ ಕೇಳುತ್ತಿದ್ದು, 20 ಶಾಸಕರಿಗೆ ಸ್ಥಾನ ನೀಡಬೇಕೆಂದು ಒತ್ತಾಯ ನಡೆಯುತ್ತಿದೆ ಎಂದು ತಿಳಿದುಬಂದಿದೆ.
ಹೌದು, ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿ ಮತ್ತೆ ಸಚಿವ ಸಂಪುಟ ವಿಸ್ತರಣೆ ಕೂಗು ಜೋರಾಗಿ ಕೂಗುತ್ತಿದ್ದು, 2–3 ಬಾರಿ ಚುನಾವಣೆ ಗೆದ್ದಿರುವ 20 ಶಾಸಕರಿಗೆ ಸಚಿವ ಸ್ಥಾನ ನೀಡಬೇಕೆಂದು ಹಿರಿಯ ಶಾಸಕರಾದ ಬೇಳೂರು ಗೋಪಾಲಕೃಷ್ಣ, ಪ್ರಸಾದ್ ಅಬ್ಬಯ್ಯ, ಶಾಂತನಗೌಡ, ಬಿ.ಆರ್. ಪಾಟೀಲ್, ಷಡಕ್ಷರಿ ಸೇರಿದಂತೆ ಹಲವರು ಒತ್ತಾಯಿಸುತ್ತಿದ್ದಾರೆ.
ಸಿಎಂ ಸಿದ್ದರಾಮಯ್ಯ ಮಂಡಿಸಿದ್ದ ಬಜೆಟ್ಗೆ ಸ್ವಪಕ್ಷೀಯರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ರಾಮನಗರದ ಕಾಂಗ್ರೆಸ್ ಶಾಸಕ ಡಿಕೆ ಆಪ್ತ ಇಕ್ಬಾಲ್ ಹುಸೇನ್ ಈ ಬಜೆಟ್ ನನಗೆ ಸಮಾಧಾನ ನೀಡಿಲ್ಲ ಎಂದು ಹೇಳಿದ್ದಾರೆ. ಕ್ಷೇತ್ರದ ಸಮಸ್ಯೆಗಳಿಗೆ ವಿಶೇಷ ಅನುದಾನ ನೀಡಲು ಮನವಿ ಮಾಡಿದ್ದರೂ, ಸಿಎಂ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂಬುದಾಗಿ ಅವರು ದುಃಖ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಕ್ಷೇತ್ರಗಳಿಗೆ ಬೆಂಬಲ ಒದಗಿಸಲು ಕರ್ನಾಟಕದಲ್ಲಿ ಮತ್ತಷ್ಟು ಹೂಡಿಕೆ ಮಾಡಿದ ABB
ಕೇಂದ್ರ ಸಭೆಯಲ್ಲಿ ಕೆಲ ಶಾಸಕರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ತಮ್ಮ ವಿಶ್ವಾಸ ಹೊಂದಿಲ್ಲ ಎಂದು ಸಿಎಂ ಮುಂದೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೆಲ ಉಸ್ತುವಾರಿ ಸಚಿವರು ತಮ್ಮ ಇಷ್ಟದಂತೆ ವರ್ಗಾವಣೆ ತಯಾರಿಸುತ್ತಿದ್ದಾರೆ ಎಂಬ ಆರೋಪವೂ ಹೊರಹೊಮ್ಮಿದೆ.
