Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಹುಳಿಮಾವು ಬ್ರಹ್ಮ ರಥೋತ್ಸವಕ್ಕೆ ಶ್ರೀ ನಿರ್ಮಲಾನಂದ ಸ್ವಾಮೀಜಿ ಚಾಲನೆ
  • Bangalore
  • State

ಹುಳಿಮಾವು ಬ್ರಹ್ಮ ರಥೋತ್ಸವಕ್ಕೆ ಶ್ರೀ ನಿರ್ಮಲಾನಂದ ಸ್ವಾಮೀಜಿ ಚಾಲನೆ

Praja Vahini February 28, 2026 1 minute read
WhatsApp Image 2026-02-28 at 15.49.22
Spread the love

ಬೆಂಗಳೂರು: ಬೆಂಗಳೂರಿನ ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾಗಿರುವ ಹುಳಿಮಾವು ಶ್ರೀ ಸ್ಫೂರ್ತಿ ವಿನಾಯಕ ಸಹಿತ ಶ್ರೀ ಸತ್ಯನಾರಾಯಣ ಸ್ವಾಮಿಯವರ 21ನೇ ವರ್ಷದ ವಾರ್ಷಿಕೋತ್ಸವ ಹಾಗೂ 20ನೇ ವರ್ಷದ ಬ್ರಹ್ಮ ರಥೋತ್ಸವ ಅದ್ಧೂರಿಯಾಗಿ ನಡೆಯುತ್ತಿದೆ. ಸತತ 9 ದಿನ ನಡೆಯುತ್ತಿರುವ ಈ ಉತ್ಸವ ಫೆಬ್ರುವರಿ 22 ರಿಂದ ಪ್ರಾರಂಭವಾಗಿದೆ.

ಇನ್ನು ಗುರುವಾರ ಫೆಬ್ರುವರಿ 26 ರಂದು ಬೆಳಗ್ಗೆ 9 ಗಂಟೆಗೆ ಕಾಶೀ ಯಾತ್ರೋತ್ಸವ ಹಾಗೂ 10 ಗಂಟೆಗೆ ಶ್ರೀ ಸತ್ಯನಾರಾಯಣ ಸ್ವಾಮಿಯವರ ದಿವ್ಯ ಕಲ್ಯಾಣೋತ್ಸವ ಅದ್ದೂರಿಯಾಗಿ ನೆರೆವೇರಿತು.

ಅದರಂತೆ ಇಂದು (ಶನಿವಾರ ಫೆ. 28) ಅದ್ದೂರಿಯಾಗಿ ಬ್ರಹ್ಮ ರಥೋತ್ಸವ ಕೂಡ ನೆರವೇರಿತು. ಈ ಬ್ರಹ್ಮ ರಥೋತ್ಸವಕ್ಕೆ ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧಿಪತಿ ಶ್ರೀ ನಿರ್ಮಲಾನಂದ ಸ್ವಾಮೀಜಿ ಅವರು ಚಾಲನೆ ನೀಡಿದರು.

ಬ್ರಹ್ಮ ರಥೋತ್ಸವಕ್ಕೆ ಚಾಲನೆ ನೀಡಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ಬ್ರಹ್ಮ ರಥೋತ್ಸವದಲ್ಲಿ ಭಕ್ತಾದಿಗಳು ಬಹಳ ಶ್ರದ್ಧಾಭಕ್ತಿಯಿಂದ ಭಾಗವಹಿಸಿದ್ದರು.

ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಬಹಳ ಅದ್ದೂರಿಯಾಗಿ ಭಗವಂತನ ಕೃಪೆಯಿಂದ ದೇವಸ್ಥಾನ ಆಡಳಿತ ಮಂಡಳಿಯ ಸದಸ್ಯರಾದ ಭಾಗ್ಯಮ್ಮ ರವಿ, ಚಂದ್ರು ಕೋಮಲ ಮತ್ತು ಎಲ್‌.ಮುತ್ತಪ್ಪ ಕುಟುಂಬದ ನೇತೃತ್ವದಲ್ಲಿ ಬ್ರಹ್ಮ ರಥೋತ್ಸವ ನಡೆಯಿತು ಎಂದು ಹೇಳಿದರು.

ಈ ಬ್ರಹ್ಮರ ಪರಥೋತ್ಸವದಲ್ಲಿ ಸುಮಾರು 7ರಿಂದ 8 ಸಾವಿರ ಜನ ಭಕ್ತಾದಿಗಳು ಭಗವಂತನ ಕೃಪೆಗೆ ಪಾತ್ರರಾಗಿ, ಈ ಬ್ರಹ್ಮರಥೋತ್ಸವದಲ್ಲಿ ಭಾಗಿಯಾಗಿ ಪ್ರಸಾದವನ್ನು ಸೇವಿಸಿ ಬಹಳ ಸಡಗರ ಸಂಭ್ರಮದಿಂದ ಈ ಧಾರ್ಮಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದಾರೆ ಎಂದು ಹೇಳಿದರು. ಎಲ್ಲಾ ನೆರೆದಿರುವಂತಹ ಭಕ್ತಾದಿಗಳಿಗೆ ಆ ಭಗವಂತ ಐಶ್ವರ್ಯ, ಆರೋಗ್ಯ ಕೊಟ್ಟು ಕಾಪಾಡಲಿ ಎಂದು ತಿಳಿಸಿದರು.

ಬೆಂಗಳೂರು ನಗರದಲ್ಲಿ ಇಂತಹ ಜಾತ್ರಾ ಮಹೋತ್ಸವ ನೆರವೇರುವುದರಿಂದ ಭಾರತೀಯ ಸಂಸ್ಕೃತಿಗೆ ಮತ್ತು ಭಾರತೀಯ ಧರ್ಮವನ್ನು ರಕ್ಷಣೆ ಮಾಡಿದಂತಾಗುತ್ತದೆ ಎಂದರು. ನಮ್ಮ ಹಿಂದೂ ಸನಾತನ ಸಂಸ್ಕೃತಿಯಲ್ಲಿ ಧಾರ್ಮಿಕ ಸೇವೆ ಮತ್ತು ಧಾರ್ಮಿಕ ಆಚರಣೆಗಳು ಅತ್ಯಂತ ಪ್ರಧಾನ ಪಾತ್ರ ವಹಿಸುತ್ತವೆ. ಹಾಗಾಗಿ ಈ ಬ್ರಹ್ಮ ರಥೋತ್ಸವದಿಂದ ಜನರನ್ನು ಒಂದು ಕಡೆ ಸೇರಿಸಿ, ನಮ್ಮ ಸಂಸ್ಕೃತಿಯನ್ನು ರಕ್ಷಣೆ ಮಾಡುವುದರ ಕುರಿತಾಗಿ ಇಂತಹ ಜಾತ್ರಾ ಮಹೋತ್ಸವಗಳು ಬೇಕಾಗುತ್ತವೆ ಎಂದರು.

ವಿಶೇಷ ಅಂದರೆ ಹುಳಿಮಾವು ಒಂದು ಒಳ್ಳೆಯ ಪವಿತ್ರ ಕ್ಷೇತ್ರವಾಗಿದ್ದು, ಈ ಗ್ರಾಮದಲ್ಲಿ ಬಹಳಷ್ಟು ದೇವಾಲಯಗಳಿವೆ. ರಾಮಮಂದಿರ ಸೇರಿದಂತೆ ಸ್ಪೂರ್ತಿ ವಿನಾಯಕ ಸತ್ಯನಾರಾಯಣ ದೇವಾಲಯವು ಇರುವುದರಿಂದ ಜನರಿಗೆ ಹೆಚ್ಚು ಒಳಿತಾಗುತ್ತಿದೆ ಎಂದು ಹೇಳಿದರು.

ರಥದ ಮೇಲೆ ಗರುಡ ಪಕ್ಷಿ ಪ್ರದಕ್ಷಣೆ

ಇನ್ನು ಬ್ರಹ್ಮರಥೋತ್ಸವ ಎಳೆಯುವ ಸಂದರ್ಭದಲ್ಲಿ ಪ್ರತಿ ವರ್ಷವೂ ಒಂದು ವಿಶೇಷವಾದ ಘಟನೆ ನಡೆಯುತ್ತದೆ. ರಥೋತ್ಸವಕ್ಕೆ ಚಾಲನೆ ನೀಡುವ ಸಂದರ್ಭಕ್ಕೆ ಸರಿಯಾಗಿ ಗರುಡ ಪಕ್ಷಿಯು ರಥದ ಮೇಲೆ ಪ್ರದಕ್ಷಣೆ ಹಾಕುತ್ತದೆ. ಇದನ್ನು ಜನರು ವೈಜ್ಞಾನಿಕವಾಗಿಯೂ ನಂಬಬಹುದು ಅಥವಾ ಧಾರ್ಮಿಕವಾಗಿಯೂ ನಂಬಬಹುದು. ಇದು ಹೇಗೆ ಸಾಧ್ಯ ಎಂಬುದು ಯಾರಿಗೂ ಕೂಡ ನಿಲುಕದ್ದು. ಈ ವರ್ಷವೂ ಕೂಡ ರಥಕ್ಕೆ ಚಾಲನೆ ನೀಡುವ ಸಂದರ್ಭದಲ್ಲಿ ಗರುಡವು ರಥದ ಸುತ್ತಲೂ ಪ್ರದಕ್ಷಣೆ ಹಾಕಿ ದೇವರ ದರ್ಶನ ಮಾಡಿದೆ ಎಂದರು.

ಅಲ್ಲದೆ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರಾದ ವೇಣುಗೋಪಾಲ್ ಅವರು ತಮ್ಮ ಮನೆಯ ಕಾರ್ಯಕ್ರಮದಂತೆ ದೇವರ ಕಾರ್ಯಕ್ರಮವನ್ನು ತಮ್ಮ ಹೆಗಲ ಮೇಲೆ ಹಾಕಿಕೊಂಡು ಒಂದು ತಿಂಗಳಿನಿಂದ ಸಿದ್ಧತೆಗಳನ್ನು ಮಾಡಿಕೊಂಡು ಈ ಜಾತ್ರಾ ಮಹೋತ್ಸವವನ್ನು ಅತಿ ಅದ್ದೂರಿಯಾಗಿ ಮಾಡುತ್ತಾರೆ ಎಂದರು.

ಈ ದೇವಸ್ಥಾನದಲ್ಲಿ ಸುಮಾರು 10, 11 ದಿನಗಳಿಂದ ಪ್ರತಿದಿನವೂ ಪೂಜೆ ನೆರವೇರುತ್ತವೆ. ಪ್ರತಿದಿನವೂ ಭಕ್ತರಿಗೆ ಯಾವುದೇ ರೀತಿ ತೊಂದರೆಯಾಗದಂತೆ ಅನ್ನ ಸಂತರ್ಪಣ ಕಾರ್ಯಕ್ರಮವನ್ನು ದೇವಸ್ಥಾನದ ಆಡಳಿತ ಮಂಡಳಿ ನೋಡಿಕೊಳ್ಳುತ್ತಾರೆ ಎಂದು ಹೇಳಿದರು. ಇದನ್ನೂ ಓದಿ:  ಶ್ರೀ ಸತ್ಯನಾರಾಯಣ ಸ್ವಾಮಿಯವರ ದಿವ್ಯ ಕಲ್ಯಾಣೋತ್ಸವ

ಮುಂದಿನ ದಿನಗಳಲ್ಲಿ ಆಡಳಿತ ಮಂಡಳಿಯವರಿಗೆ ಸಾಧ್ಯವಾದರೆ ಜಾತ್ರಾ ಮಹೋತ್ಸವದಲ್ಲಿ ಹೆಲ್ತ್ ಕ್ಯಾಂಪ್ ಗಳಂತಹ ಸಾಮಾಜಿಕ ಕಾರ್ಯಕ್ರಮಕ್ಕೂ ಕೂಡ ಚಾಲನೆ ನೀಡಬೇಕು ಎಂದು ತಿಳಿಸಿದರು.

 

About the Author

Praja Vahini

Editor

View All Posts

Spread the love

Post navigation

Previous: ಬ್ಯಾಡಗಿಯಲ್ಲಿ ಕೋಲ್ಡ್ ಸ್ಟೋರೆಜ್ ಪ್ರಾರಂಭ
Next: ಪತ್ರಕರ್ತರು ಧ್ವನಿಯಿಲ್ಲದವರ ಪರ ನಿಲ್ಲಬೇಕು

Views:

38

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.