Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಸರಕಾರದಿಂದ ಮಾಧ್ಯಮದ ಮೇಲೆ ಸವಾರಿ ಸರಿಯಲ್ಲ
  • State
  • ಶಹಾಪುರ

ಸರಕಾರದಿಂದ ಮಾಧ್ಯಮದ ಮೇಲೆ ಸವಾರಿ ಸರಿಯಲ್ಲ

Praja Vahini February 19, 2026
Screenshot_2026-02-19-19-00-53-89_6012fa4d4ddec268fc5c7112cbb265e7
Spread the love

ವಿವಾದಿತ ನಿಯಮಾವಳಿ ವಾಪಸ್ಸಿಗೆ ಸಂಕೀನ್ ಆಗ್ರಹ

ಶಹಾಪುರ(ಯಾದಗಿರಿ) :ರಾಜ್ಯ ಸರಕಾರ ವಿಧಾನಸೌಧದ ಅಂಗಳದಲ್ಲಿ ಮಾಧ್ಯಮಗಳು ಹೀಗೆ ಇರಬೇಕು ಎಂದು ನಿಯಾಮವಳಿ ರೂಪಿಸಿರುವುದು ಮಾಧ್ಯಮಗಳ ಮೇಲಿನ ಹತ್ತಿಕ್ಕುವ ಕೆಲಸವಾಗಿದೆ. ಇದು ಪ್ರಜಾಪ್ರಭುತ್ವ ವಿರೋಧಿ ನಡೆಯಾಗಿದ್ದು ಸರಕಾರ ತನ್ನ ಆದೇಶವನ್ನು ಕೂಡಲೇ ವಾಪಸ್ಸು ಪಡೆಯಬೇಕು ಎಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಮಲ್ಲಪ್ಪ ಸಂಕೀನ್ ಆಗ್ರಹಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಪ್ರಜಾಪ್ರಭುತ್ವದ ಪವಿತ್ರ ಸ್ಥಳದಲ್ಲಿಯೇ ಮಾಧ್ಯಮಗಳಿಗೆ ಮೂಗುಧಾರ ಹಾಕುವಂತಹ ಕೆಲಸ ಮಾಡುತ್ತಿರುವುದು ಆಘಾತಕಾರಿಯಾಗಿದೆ. ಇದು ಜನರ ಧ್ವನಿಯನ್ನೇ ಕಸಿಯವಂತಹ ಕುತಂತ್ರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದನ್ನು ಗಂಭೀರವಾಗಿ ಪರಿಗಣಿಸಲು ಮುಂದಾಗಬೇಕಿದೆ‌‌. ಮಾಧ್ಯಮದ ಮೇಲೆ ಸವಾರಿ ಮಾಡಲು ಹೊರಟಿರುವ ಮತ್ತು ವಿವಾದಿತ ಆದೇಶ ಹೊರಡಿಸಿದ ಅಧಿಕಾರಿಗಳ ಮೇಲೆ ಕಠಿಣ ಕ್ರಮಕೈಗೊಳ್ಳಬೇಕು ಎಂದು ಹೇಳಿದರು.

ವಿಧಾನ ಸೌಧದಲ್ಲಿ ಭದ್ರತೆಯ ನೆಪವೊಡ್ಡಿ ಮಾಧ್ಯಮದವರ ವಾಕ್ ಸ್ವಾತಂತ್ರ್ಯ ವನ್ನೇ ಹರಣ ಮಾಡುವಂತಹ ದುಸ್ಸಾಹಸಕ್ಕೆ ಸರಕಾರ ಕೈ ಹಾಕಿರುವುದು ನಿಜಕ್ಕೂ ಆಘಾತಕಾರಿ ಆಗಿದೆ ಎಂದು ಹೇಳಿದರು.

ಭದ್ರತೆ ಸಮಸ್ಯೆಗಳು ಇದ್ದರೇ ಸರಕಾರ ಇರುವ ಲೋಪವನ್ನು ಸರಿಪಡಿಸುವಂತಹ ಕೆಲಸ ಮಾಡಬೇಕು‌.

About the Author

Praja Vahini

Editor

View All Posts

Spread the love

Post navigation

Previous: ಸೋಲುವ ಭಯದಲ್ಲಿ ಹಿಮಂತ್ ಬಿಸ್ವಾಸ್ ಶರ್ಮಾ ಆಧಾರರಹಿತ ಹೇಳಿಕೆ: ಡಿಕೆಶಿ ವಾಗ್ದಾಳಿ
Next: ಗಂಡು ಚಿರತೆ ಮೃತದೇಹ ಪತ್ತೆ, ಭಯಭೀತರಾದ ಜನತೆ

Views:

30

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.