ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಅವರಿಗೆ ಇಂದು (ಸೋಮವಾರ ಫೆಬ್ರುವರಿ 16) ಹುಟ್ಟು ಹಬ್ಬದ ಸಂಭ್ರಮ. ಹುಟ್ಟು ಹಬ್ಬದ ಸಂಭ್ರಮ ಇದ್ದರು ಕೂಡ ನಟ ದರ್ಶನ್ ಅವರಿಗೆ ಈ ಬಾರಿ ಬರ್ತಡೆ ಸೆಲೆಬ್ರೇಶನ್ ಮಾಡಿಕೊಳ್ಳಲು ಅವಕಾಶ ಇಲ್ಲ.
ಹೌದು, ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೆರೆವಾಸ ಅನುಭವಿಸುತ್ತಿರುವ ನಟ ದರ್ಶನ ಈ ಬಾರಿ ಜೈಲಿನಲ್ಲಿಯೇ ಇರೋದರಿಂದ ಬರ್ತಡೇ ಸೆಲೆಬ್ರೇಶನ್ ಗೆ ಬ್ರೇಕ್ ಹಾಕಲಾಗಿದೆ.
ಇನ್ನು ನೆಚ್ಚಿನ ನಟ ಜೈಲಿನಲ್ಲಿ ಇರುವುದರಿಂದ ಅಭಿಮಾನಿಗಳು ದರ್ಶನ್ ಅವರ ಹೆಸರಿನಲ್ಲಿ ಸಾಮಾಜಿಕ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದಾರೆ. ಅಲ್ಲದೆ ಸೋಶಿಯಲ್ ಮೀಡಿಯಾಗಳಲ್ಲಿ ಅವರ ಅಭಿಮಾನಿಗಳು ಹುಟ್ಟು ಹಬ್ಬದ ಶುಭ ತಿಳಿಸಿದ್ದಾರೆ.
ಇನ್ನು ದರ್ಶನವರ ಪತ್ನಿ ವಿಜಯಲಕ್ಷ್ಮಿ ದರ್ಶನವರು ಕೂಡ ಪತಿಗೆ ಹುಟ್ಟು ಹಬ್ಬದ ಶುಭ ತಿಳಿಸಿದ್ದಾರೆ. ವಿಜಯಲಕ್ಷ್ಮಿ ಅವರು ದರ್ಶನ್ ಅವರಿಗೆ ಸೋಶಿಯಲ್ ಮೀಡಿಯಾ ಗಳಲ್ಲಿ ವಿಶ್ ಮಾಡಿದ್ದು, ಪ್ರತಿ ದಿನವನ್ನೂ ಸಂಭ್ರಮಿಸೋ ವ್ಯಕ್ತಿಗೆ ಜನ್ಮದಿನದ ಶುಭಾಶಯಗಳು’ ಎಂದು ವಿಜಯಲಕ್ಷ್ಮೀ ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿದ್ದಾರೆ. ದರ್ಶನ್, ವಿನೀಶ್ ಹಾಗೂ ವಿಜಯಲಕ್ಷ್ಮೀ ಅವರು ಕೇಕ್ ಎದುರು ನಿಂತಿದ್ದಾರೆ. ಇದನ್ನೂ ಓದಿ: ನಾವ್ಯಾರು ಕೂಡ ದೇವರಲ್ಲಿ ಇದೇ ಜಾತಿಗೆ ಸೇರಿದವರು ಎಂದು ಅಪ್ಲಿಕೇಶನ್ ಹಾಕಿಲ್ಲ: ಶಾಸಕ ಸತೀಶ್ ರೆಡ್ಡಿ
