ಬಳ್ಳಾರಿ: ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಂಪಿ ಉತ್ಸವಕ್ಕೆ ಚಾಲನೆ ನೀಡಿದ್ದಾರೆ. ಅಲ್ಲದೆ ಈ ಬಾರಿ ಹಂಪಿ ಉತ್ಸವದಲ್ಲಿ ಡ್ರೋನ್ ಗಳ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಜಿಲ್ಲಾ ಉಸ್ತುವಾರಿ ಸಚಿವರಾಗಿರುವಂತ ಜಮೀರ್ ಅಹ್ಮದ್ ಖಾನ್ ಅವರ ಚಿತ್ರಗಳು ಆಕಾಶದಲ್ಲಿ ಕಣ್ಣು ಕುಕ್ಕುತಿವೆ. ಅಲ್ಲದೆ ಹೂವಿನ ಅಲಂಕಾರದಲ್ಲಿ ಇಡೀ ವಿಜಯನಗರದ ಸಾಮ್ರಾಜ್ಯವನ್ನು ಅರಳಿಸಲಾಗಿದೆ.
ಹೌದು, ಈ ಬಾರಿ ವಿಶೇಷವಾಗಿ ವಸ್ತುಗಳ ಪ್ರದರ್ಶನದ ಜೊತೆಗೆ ಹೂವಿನಲ್ಲಿ ಇಡೀ ವಿಜಯನಗರ ಸಾಮ್ರಾಜ್ಯವನ್ನು ಅರಳಿಸಲಾಗಿದೆ ಇದು ಪ್ರವಾಸಿಗರ ಕಣ್ಮಣ ಸೆಳೆಯುತ್ತಿದೆ. ಹಂಪಿ ಉತ್ಸವವನ್ನು ಕಣ್ತುಂಬಿಕೊಳ್ಳಲು ಬಂದಿರುವ ಪ್ರವಾಸಿಗರು ವಸ್ತು ಪ್ರದರ್ಶನ ಜೊತೆಗೆ ಹೂವಿನಲ್ಲಿ ನಿರ್ಮಾಣವಾಗಿರುವ ವಿಜಯನಗರ ಸಾಮ್ರಾಜ್ಯವನ್ನು ಕಣ್ತುಂಬಿಕೊಂಡಿದ್ದಾರೆ.
ವಿಜಯನಗರ ಸಾಮ್ರಾಜ್ಯದ ಗತವೈಭವ ಸಾರುವ ಹಂಪಿ ಉತ್ಸವದಲ್ಲಿ ವಸ್ತು ಪ್ರದರ್ಶನ ಕಣ್ಮನ ಸೆಳೆಯುತ್ತದೆ. ಗುಲಾಬಿ ಹಾಗೂ ಸೇವಂತಿ ಹೂವಿನಲ್ಲಿಯೇ ವಿಜಯನಗರ ಸಾಮ್ರಾಜ್ಯದ ಅರಳಿದೆ. ಇದನ್ನೂ ಓದಿ: ಬಿಜೆಪಿಗೆ ನೈತಿಕ ಹಕ್ಕಿಲ್ಲ: ಸಿಎಂ ಸಿದ್ದರಾಮಯ್ಯ
ಈ ಬಾರಿ ಅರಣ್ಯ ಇಲಾಖೆ ಹಾಗೂ ಮೀನುಗಾರಿಕೆ ಇಲಾಖೆಯಿಂದಲೂ ವಿಭಿನ್ನ ಪ್ರಯತ್ನ ಮಾಡಲಾಗಿದ್ದು, ಅರಣ್ಯ ಇಲಾಖೆಯಿಂದ ದರೋಜಿ ಕರಡಿ ಧಾಮ ಹಾಗೂ ಮೀನುಗಾರಿಕೆ ಇಲಾಖೆಯಿಂದ 33 ಗೇಟ್ಗಳುಳ್ಳ ಟಿಬಿ ಡ್ಯಾಂ ನಿರ್ಮಾಣ ಮಾಡಲಾಗಿದೆ. ವಿಜಯನಗರ ಜಿಲ್ಲೆಯ ಐತಿಹಾಸಿಕ ಹಾಗೂ ಪ್ರವಾಸಿ ತಾಣಗಳೆಲ್ಲವೂ ವಸ್ತು ಪ್ರದರ್ಶನದಲ್ಲಿ ನೋಡುವ ಅವಕಾಶ ಕಲ್ಪಿಸಲಾಗಿದ್ದು, ಸಾವಿರಾರು ಪ್ರವಾಸಿಗರು ಖುಷಿಯಿಂದ ವಸ್ತು ಪ್ರದರ್ಶನ ವೀಕ್ಷಣೆ ಮಾಡ್ತಿದ್ದಾರೆ.
