ವಿವಿಧ ಕ್ಷೇತ್ರದ ಸಾದಕರಿಗೆ ವೀರಕೇಸರಿ ಪ್ರಶಸ್ತಿ ಪ್ರಧಾನ
ಶಹಾಪುರ: ಪ್ರತಿ ವರ್ಷದಂತೆ ಈ ವರ್ಷದ ಫೇ,15 ರಂದು ಸಂಜೆ 6ಗಂಟೆಗೆ ವೀರಕೇಸರಿ ಕಲಾ ಸಾಂಸ್ಕೃತಿಕ ಮತ್ತು ಗ್ರಾಮೀಣ ಅಭಿವೃದ್ದಿ ಸಂಸ್ಥೆಯಿಂದ ಮಾಹಾಶಿವರಾತ್ರಿ ದಿನದಂದು ಭೀ. ಗುಡಿ ಕಮಿನ್ಯೂಟಿ ಹಾಲ್ ಅವರಣದಲ್ಲಿ ಜಾನಪದ ಜಾಗರಣೆ ನಡೆಯಲ್ಲಿದೆ ಎಂದು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಭೀಮಣ್ಣ ಶಖಾಪುರ ತಿಳಿಸಿದ್ದಾರೆ.
ಖ್ಯಾತ ಜಾನಪದ ಗಾರುಡಿಗ ಗುರುರಾಜ ಹೋಸಕೊಟೆಯವರ ಕಲಾ ತಂಡದಿಂದ ಜಾನಪದಗಳ ಸೊಗಡು, ಡಿ ಡ್ಯಾನ್ಸ ತಂಡದಿಂದ ವಿಶೇಷ ನೃತ್ಯಗಳ ಸರಮಾಲೆ, ಜೀ,ಕನ್ನಡ, ಕಲರಸ್ ಕನ್ನಡ ಕಲಾವಿದರು, ಆಗಮಿಸಿ ಜಾನಪದಗಳ ರಸದೌತಣ ನೀಡುವರು ಎಂದು ಹೇಳಿದರು.
ಕಾರ್ಯಕ್ರಮದ ದಿವ್ಯ ಸಾನಿದ್ಯವನ್ನು ಪೂಜ್ಯ ಕೈಲಾಸ ಆಶ್ರಮದ ಪೂಜ್ಯ ಶಿವಲಿಂಗೇಶ್ವರ ಮಾಹಾಸ್ವಾಮೀಗಳು ಹೋತಪೇಟ. ಮುದೋಳದ ಪೂಜ್ಯ ಸೋಮೇಶ್ವರ ಮಠದ ಷ,ಬ್ರ, ಶಿವಸಿದ್ದ ಸೋಮೇಶ್ವರ ಶಿವಾಚಾರ್ಯರು ಆಂದೋಲಾದ ಶ್ರೀ ಲಿಂಗೇಶ್ವರ ಮಠದ ಪೂಜ್ಯ ವಾಸುದೇವ ಮಾಹಾಸ್ವಾಮೀಗಳು, ಮಹಲರೋಜಾ ಪೂಜ್ಯ ಮಲ್ಲಿಕಾರ್ಜುನ ಮುತ್ಯಾ, ಗೋರಗುಂಡಗಿಯ ಪುಣ್ಯಕೊಟಿ ಆಶ್ರಮದ ಪೂಜ್ಯ ವರಲಿಂಗೇಶ್ವರ ಸ್ವಾಮೀಗಳು, ಭಗವಾನ್ ದೇವಸ್ಥಾನದ ರಾಜುಗುರು ಸ್ವಾಮೀಗಳು ವಹಿಸುವರು.
ಸಣ್ಣ ಕೈಗಾರಿಕಾ ಮತ್ತು ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸ್ಸಪ್ಪಗೌಡ ದರ್ಶನಾಪುರವರು ಕಾರ್ಯಕ್ರಮ ಉಧ್ಘಾಟಿಸುವರು, ನಮ್ಮ ಕರ್ನಾಟಕ ಸೇನೆಯ ರಾಜ್ಯಾಧ್ಯಕ್ಷರಾದ ಬಸವರಾಜ ಪಡಕೋಟೆಯವರು ಅಧ್ಯಕ್ಷತೆ ವಹಿಸುವರು, ಚಲನ ಚಿತ್ರ ನಟರು, ನಿರ್ಮಾಪಕರಾದ ಗಣೇಶರಾವ್ ಕೇಸರಕರ್ ರವರು ಮುಖ್ಯ ಅಥಿತಿಗಳಾಗಿ ಆಗಮಿಸುವರು. ಮತ್ತು ಕಾರ್ಯಕ್ರಮದಲ್ಲಿ ವೀರಕೇಸರಿ ಶಿರಿ ಪ್ರಶಸ್ತಿ ,ಪ್ರಧಾನ ಮಾಡಲಾಗುತ್ತದೆ ಆದ್ದರಿಂದ ಹೆಚ್ಚಿನ ಸಂಖ್ಯೆಯಲಿ ಜನತೆ, ಜಾನಪದ ಕಲಾವಿದರು, ಶಿವಭಕ್ತರು ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಲು ಮನವಿ ಮಾಡಿದ್ದಾರೆ. ಇದನ್ನೂ ಓದಿ: ವಿಶ್ವವಿಖ್ಯಾತ ಹಂಪಿ ಉತ್ಸವ 2026 ಉದ್ಘಾಟಿಸಿದ ಸಿಎಂ
