Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಸೌತ್ ಯುನೈಟೆಡ್ ಫುಟ್‌ ಬಾಲ್ ಕ್ಲಬ್‌ ನ ಅಧಿಕೃತ ಸ್ಪೋರ್ಟ್ಸ್ ಮೆಡಿಸಿನ್ ಮತ್ತು ವೈದ್ಯಕೀಯ ಸೇವಾ ಪಾಲುದಾರರಾಗಿ ಸಹಭಾಗಿತ್ವ ಮಾಡಿಕೊಂಡ ಹೊಸ್ಮಟ್ ಆಸ್ಪತ್ರೆ
  • Bangalore
  • Front news
  • State

ಸೌತ್ ಯುನೈಟೆಡ್ ಫುಟ್‌ ಬಾಲ್ ಕ್ಲಬ್‌ ನ ಅಧಿಕೃತ ಸ್ಪೋರ್ಟ್ಸ್ ಮೆಡಿಸಿನ್ ಮತ್ತು ವೈದ್ಯಕೀಯ ಸೇವಾ ಪಾಲುದಾರರಾಗಿ ಸಹಭಾಗಿತ್ವ ಮಾಡಿಕೊಂಡ ಹೊಸ್ಮಟ್ ಆಸ್ಪತ್ರೆ

Praja Vahini February 14, 2026 1 minute read
a0fc4ff0-5a85-4a80-9fd3-ef62293ffefb
Spread the love

ಬೆಂಗಳೂರು:  ಆರ್ಥೊಪೆಡಿಕ್ಸ್, ಆಘಾತ ಚಿಕಿತ್ಸೆ ಮತ್ತು ಕ್ರೀಡಾ ವೈದ್ಯಕೀಯ ಕ್ಷೇತ್ರದಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲ ಮುಂಚೂಣಿಯಲ್ಲಿರುವ ಹಾಗೂ ಈಗ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಾಗಿ ಬೆಳೆಯುತ್ತಿರುವ ಅತ್ಯಂತ ಪ್ರತಿಷ್ಠಿತ ಹೊಸ್ಮಟ್ ಆಸ್ಪತ್ರೆಯು ಇದೀಗ ಸೌತ್ ಯುನೈಟೆಡ್ ಫುಟ್‌ ಬಾಲ್ ಕ್ಲಬ್ (ಎಸ್.ಯು.ಎಫ್.ಸಿ) ಜೊತೆಗೆ ಸ್ಪೋರ್ಟ್ಸ್ ಮೆಡಿಸಿನ್ ಮತ್ತು ವೈದ್ಯಕೀಯ ಸೇವಾ ಪಾಲುದಾರರಾಗಿ ಮೂರು ವರ್ಷಗಳ ಸಹಭಾಗಿತ್ವವನ್ನು ಮಾಡಿಕೊಂಡಿದೆ.

ಬೆಂಗಳೂರಿನ ಹೃದಯಭಾಗದಲ್ಲಿರುವ ಎಸ್.ಯು.ಎಫ್.ಸಿ, ವಿಶ್ವದರ್ಜೆಯ ವಸತಿ ಅಕಾಡೆಮಿ ಮಾದರಿಯನ್ನು ಹೊಂದಿರುವ ವೃತ್ತಿಪರ ಫುಟ್‌ ಬಾಲ್ ಕ್ಲಬ್ ಆಗಿದ್ದು, ಈ ಪಾಲುದಾರಿಕೆಯಡಿ ಹೊಸ್ಮಟ್ ಆಸ್ಪತ್ರೆಯು ಈ ಕ್ಲಬ್‌ ಗೆ ಸಂಪೂರ್ಣ ಕ್ರೀಡಾ ವೈದ್ಯಕೀಯ ಸೇವೆಗಳು, ತುರ್ತು ಸಿದ್ಧತೆ ಮತ್ತು ಆನ್ ಗ್ರೌಂಡ್ ವೈದ್ಯಕೀಯ ಸೇವೆಯನ್ನು ಒದಗಿಸಲಿದೆ.

ಈ ಪಾಲುದಾರಿಕೆಯ ಭಾಗವಾಗಿ, ಹೊಸ್ಮಟ್ ಆಸ್ಪತ್ರೆಯು ಎಸ್.ಯು.ಎಫ್.ಸಿ ಆವರಣದಲ್ಲೇ ಪ್ರತ್ಯೇಕ ‘ಆನ್-ಸೈಟ್ ಸ್ಪೋರ್ಟ್ಸ್ ಮೆಡಿಕಲ್ ಸೆಂಟರ್’ ಅನ್ನು ಪ್ರಾರಂಭಿಸಿದೆ. ಈ ಕೇಂದ್ರವು ಕ್ಲಬ್‌ ನ ತರಬೇತಿ ಮತ್ತು ಸ್ಪರ್ಧಾತ್ಮಕ ಪರಿಸರದಲ್ಲಿ ಆಸ್ಪತ್ರೆ ದರ್ಜೆಯ ವೈದ್ಯಕೀಯ ವ್ಯವಸ್ಥೆಯನ್ನು ಕಲ್ಪಿಸಿಕೊಡಲಿದೆ. ಹೊಸ್ಮಟ್ ಆಸ್ಪತ್ರೆಯು ಎಸ್.ಯು.ಎಫ್.ಸಿ ಯ ವೈದ್ಯಕೀಯ ಚಿಕಿತ್ಸಾಲಯವನ್ನು ನಿರ್ವಹಿಸಲಿದ್ದು, ತರಬೇತಿ ಮತ್ತು ಚಾಂಪಿಯನ್‌ ಶಿಪ್ ಅವಧಿಯಲ್ಲಿ ಆಟಗಾರರು ಹಾಗೂ ಸಿಬ್ಬಂದಿಯ ಎಲ್ಲಾ ವೈದ್ಯಕೀಯ ಅವಶ್ಯಕತೆಗಳನ್ನು ಪೂರೈಸಲಿದೆ.

ಈ ಸಹಯೋಗವು ಕ್ರೀಡಾ ವೈದ್ಯಕೀಯ ಚಿಕಿತ್ಸೆ ಮತ್ತು ತುರ್ತು ಚಿಕಿತ್ಸೆಯ ಒಂದು ವ್ಯವಸ್ಥಿತ ಚೌಕಟ್ಟನ್ನು ರೂಪಿಸಲಿದ್ದು, ಈ ಚೌಕಟ್ಟಿನಲ್ಲಿ ಮುನ್ನೆಚ್ಚರಿಕೆ ತಪಾಸಣೆ, ತ್ವರಿತ ಪ್ರತಿಸ್ಪಂದನೆ, ವೈದ್ಯಕೀಯ ಸಿದ್ಧತೆ ಮತ್ತು ಮುಂದಿನ ಹಂತದ ಚಿಕಿತ್ಸೆಯ ನಿರಂತರ ಮೇಲುಸ್ತುವಾರಿ ಜವಾಬ್ದಾರಿ ಒಳಗೊಂಡಿರುತ್ತದೆ ಮತ್ತು ಕ್ರೀಡಾ ವ್ಯವಸ್ಥೆಯಲ್ಲಿರುವ ವಿಶ್ವ ಮಟ್ಟದ ಗುಣಮಟ್ಟವನ್ನು ಒದಗಿಸಲಿದೆ.

ಈ ಪಾಲುದಾರಿಕೆಯ ಕುರಿತು ಮಾತನಾಡಿದ ಹೊಸ್ಮಟ್ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕಿ ಅನಿಶಾ ಚಾಂಡಿ ಎಕ್ಕಾರ್ಡ್ ಅವರು, “ಆಧುನಿಕ ಕ್ರೀಡಾ ಕ್ಷೇತ್ರಕ್ಕೆ ವ್ಯವಸ್ಥಿತ ವೈದ್ಯಕೀಯ ವ್ಯವಸ್ಥೆಯ ಅಗತ್ಯವಿದೆ. ಈ ವ್ಯವಸ್ಥೆಯು ಕೇವಲ ತುರ್ತು ಸ್ಪಂದನೆಯಷ್ಟೇ ಅಲ್ಲದೆ, ಗಾಯಗಳನ್ನು ತಡೆಗಟ್ಟುವುದು, ನಿರಂತರ ಮೇಲ್ವಿಚಾರಣೆ ಮತ್ತು ಚೇತರಿಕೆಯ ಪ್ರಕ್ರಿಯೆಗಳನ್ನು ಒಳಗೊಂಡಿರಬೇಕು. ಹೊಸ್ಮಟ್ ನಲ್ಲಿ ಕ್ರೀಡಾ ವೈದ್ಯಕೀಯ ಸೇವೆಯು ದಶಕಗಳ ಅವಧಿಯ ಶ್ರೇಷ್ಠ ಆರ್ಥೊಪೆಡಿಕ್, ಆಘಾತ ಚಿಕಿತ್ಸೆ ಮತ್ತು ಪುನರ್ವಸತಿ ಚಿಕಿತ್ಸೆಯ ಮೇಲೆ ನಿರ್ಮಾಣವಾಗಿದೆ. ಸೌತ್ ಯುನೈಟೆಡ್ ಫುಟ್‌ ಬಾಲ್ ಕ್ಲಬ್ (ಎಸ್.ಯು.ಎಫ್.ಸಿ) ಜೊತೆಗಿನ ನಮ್ಮ ಪಾಲುದಾರಿಕೆ ಮತ್ತು ಆನ್ ಸೈಟ್ ಸ್ಪೋರ್ಟ್ಸ್ ಮೆಡಿಕಲ್ ಸೆಂಟರ್ ಸ್ಥಾಪನೆಯು, ಕ್ರೀಡಾ ಕ್ಷೇತ್ರದಲ್ಲಿ ಆಸ್ಪತ್ರೆ ದರ್ಜೆಯ ವೈದ್ಯಕೀಯ ವ್ಯವಸ್ಥೆಯನ್ನು ಪರಿಚಯಿಸಿದೆ. ಈ ಕೇಂದ್ರವು ತುರ್ತು ಸ್ಪಂದನೆಯ ಸಮಯವನ್ನು ಕಡಿಮೆ ಮಾಡುತ್ತದೆ, ಗಾಯಗಳಿಂದ ಶೀಘ್ರವಾಗಿ ಚೇತರಿಸಿಕೊಳ್ಳಲು ಸಹಕರಿಸುತ್ತದೆ ಮತ್ತು ಕ್ರೀಡಾಪಟುವಿನ ವೃತ್ತಿಜೀವನ ದೀರ್ಘಕಾಲ ಮುಂದುವರಿಯಲು ಬೆಂಬಲ ನೀಡುತ್ತದೆ.

ಈ ಕುರಿತು ಮಾತನಾಡಿದ ಸೌತ್ ಯುನೈಟೆಡ್ ಫುಟ್‌ ಬಾಲ್ ಕ್ಲಬ್‌ ನ (ಎಸ್.ಯು.ಎಫ್.ಸಿ) ಸಿಇಓ ಮಹಮ್ಮದ್ ರಫೀಕ್ ಅವರು, “ಇಂದಿನ ಸ್ಪರ್ಧಾತ್ಮಕ ಕ್ರೀಡಾ ವ್ಯವಸ್ಥೆಯಲ್ಲಿ ಆಟಗಾರರ ಸುರಕ್ಷತೆ ಮತ್ತು ವೈದ್ಯಕೀಯ ಸಿದ್ಧತೆಯು ಬಹಳ ಪ್ರಮುಖವಾಗಿದೆ. ಈ ನಿಟ್ಟಿನಲ್ಲಿ ಕ್ರೀಡಾ ಗಾಯಗಳು, ಆರ್ಥೊಪೆಡಿಕ್ಸ್ ಮತ್ತು ಆಘಾತ ಚಿಕಿತ್ಸೆಯಲ್ಲಿ ಮುಂಚೂಣಿಯಲ್ಲಿರುವ ಹೊಸ್ಮಟ್ ಆಸ್ಪತ್ರೆ ಜೊತೆಗೆ ಪಾಲುದಾರಿಕೆ ಮಾಡಿಕೊಂಡಿರುವುದು ನಮಗೆ ಮೈದಾನದ ಒಳಗೆ ಮತ್ತು ಹೊರಗೆ ಹೆಚ್ಚಿನ ವೈದ್ಯಕೀಯ ಬಲ ದೊರೆತಂತಾಗಿದೆ. ಆನ್ ಸೈಟ್ ಸ್ಪೋರ್ಟ್ಸ್ ಮೆಡಿಕಲ್ ಸೆಂಟರ್, ವೈದ್ಯಕೀಯ ನಾಯಕತ್ವ, ಸಜ್ಜುಗೊಂಡ ಆಂಬುಲೆನ್ಸ್ ಮತ್ತು ಮುನ್ನೆಚ್ಚರಿಕೆಯ ವೈದ್ಯಕೀಯ ತಪಾಸಣೆಗಳ ಮೂಲಕ ನಾವು ನಮ್ಮ ಕ್ರೀಡಾಪಟುಗಳ ಚಿಕಿತ್ಸಾ ವ್ಯವಸ್ಥೆಯನ್ನು ಜಾಗತಿಕ ಗುಣಮಟ್ಟಕ್ಕೆ ಏರಿಸುತ್ತಿದ್ದೇವೆ.

ಮುಖ್ಯವಾಗಿ, ಈ ವೈದ್ಯಕೀಯ ಸೌಲಭ್ಯವು ಕೇವಲ ನಮ್ಮ ವೃತ್ತಿಪರ ತಂಡಕ್ಕೆ ಮಾತ್ರ ಸೀಮಿತವಾಗಿಲ್ಲ. ಇದು ನಮ್ಮ ಫುಟ್‌ ಬಾಲ್ ಅಕಾಡೆಮಿ, ಸಾರ್ವಜನಿಕ ಕಾರ್ಯಕ್ರಮಗಳು ಮತ್ತು ಎಸ್.ಯು.ಎಫ್.ಸಿ ಮೈದಾನದಲ್ಲಿ ನಡೆಯುವ ಎಲ್ಲಾ ಚಟುವಟಿಕೆಗಳಿಗೆ ಬೆಂಬಲ ನೀಡಲಿದೆ. ಅಂಬೆಗಾಲಿಡುವ ಮಕ್ಕಳಿಂದ ಹಿಡಿದು ತಳಮಟ್ಟದ ಆಟಗಾರರು, ಹವ್ಯಾಸಿಗಳು ಹಾಗೂ ವೃತ್ತಿಪರ ಆಟಗಾರರವರೆಗೆ ಎಲ್ಲರಿಗೂ ವೈದ್ಯಕೀಯ ವ್ಯವಸ್ಥೆ ಲಭ್ಯವಿರುತ್ತದೆ. ಇಡೀ ಫುಟ್‌ ಬಾಲ್ ಸಮುದಾಯಕ್ಕೆ ಇಂತಹ ವ್ಯವಸ್ಥಿತ ವೈದ್ಯಕೀಯ ಬೆಂಬಲವನ್ನು ನೀಡುತ್ತಿರುವ ಕೆಲವೇ ಕೆಲವು ಕ್ಲಬ್‌ ಗಳಲ್ಲಿ ಎಸ್.ಯು.ಎಫ್.ಸಿ ಕೂಡ ಒಂದಾಗಿದೆ. ತಕ್ಷಣದ ಪ್ರಥಮ ಚಿಕಿತ್ಸೆ, ಗಾಯಗಳ ನಿರ್ವಹಣೆ ಮತ್ತು ವೈದ್ಯಕೀಯ ಚಿಕಿತ್ಸೆಯನ್ನು ಒದಗಿಸಲು ನಮ್ಮ ಮೈದಾನದಲ್ಲಿ ಫಿಸಿಯೋಥೆರಪಿಸ್ಟ್ ಮತ್ತು ತರಬೇತಿ ಪಡೆದ ಪುರುಷ ವೈದ್ಯಕೀಯ ಸಿಬ್ಬಂದಿಗಳು ಸದಾ ಲಭ್ಯವಿರುತ್ತಾರೆ” ಎಂದು ಹೇಳಿದರು.

About the Author

Praja Vahini

Editor

View All Posts

Spread the love

Post navigation

Previous: ವಿಶ್ವವಿಖ್ಯಾತ ಹಂಪಿ ಉತ್ಸವ 2026 ಉದ್ಘಾಟಿಸಿದ ಸಿಎಂ
Next: ನಾಳೆ ಮಾಹಾಶಿವರಾತ್ರಿ ಜಾನಪದ ಜಾಗರಣೆ ಕಾರ್ಯಕ್ರಮ

Views:

38

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.