ಬೆಂಗಳೂರು: ಕನ್ನಡ ಚಿತ್ರರಂಗ ಯಾವ ಚಿತ್ರರಂಗಕ್ಕೂ ಕಮ್ಮಿ ಇಲ್ಲ ಎಂಬುದು ಈಗಾಗಲೇ ಸಾಬೀತಾಗಿದ್ದು, ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾ ಈಗಾಗಲೇ ಹೊಸ ದಾಖಲೆಗಳನ್ನು ಬರೆಯುತ್ತಿದೆ.
ಹೌದು, ಪ್ಯಾನ್ ಇಂಡಿಯಾ ಸಿನಿಮಾ ‘ಟಾಕ್ಸಿಕ್’ ರಿಲೀಸ್ ಗೆ ಕೇವಲ ಒಂದು ತಿಂಗಳು ಬಾಕಿ ಇದ್ದು ಟೀಸರ್ ಮೂಲಕವೇ ಅಬ್ಬರಿಸಿದ ‘ಟಾಕ್ಸಿಕ್’ ಚಿತ್ರತಂಡವು ಈಗ ಮತ್ತೊಂದು ಸಾಹಸಕ್ಕೆ ಕೈ ಹಾಕಿದೆ.
ಯೆಸ್…ಟಾಕ್ಸಿಕ್ ಸಿನಿಮಾ ಕೇವಲ ಕನ್ನಡ, ಹಿಂದಿ, ತೆಲುಗು, ಮಲಯಾಳಂ ಸೇರಿದಂತೆ ಕೆಲ ಭಾರತದ ಭಾಷೆಗಳಲ್ಲಿ ಮಾತ್ರವಲ್ಲದೇ ಇದೀಗ ಇಂಗ್ಲಿಷ್ ಭಾಷೆಗಳಲ್ಲೂ ಕೂಡ ರಿಲೀಸ್ ಮಾಡಲು ಚಿತ್ರತಂಡ ತಯಾರಿ ನಡೆಸುತ್ತಿದೆ ಎಂದು ತಿಳಿದು ಬಂದಿದೆ. ಈಗಾಗಲೇ ಇಂಗ್ಲೀಷ್ ಭಾಷೆಯಲ್ಲಿ ಟ್ಯಾಕ್ಸಿಕ್ ಸಿನಿಮಾ ರಿಲೀಸ್ ಮಾಡಲು ಚಿತ್ರತಂಡವು ವಿದೇಶಿ ಹಂಚಿಕೆ ಹಕ್ಕನ್ನು ಫಾರ್ಸ್ ಫಿಲ್ಮ್ ಬರೋಬ್ಬರಿ 105 ಕೋಟಿಗೆ ಖರೀದಿ ಮಾಡಿದ್ದು, ಇದರಿಂದ ಇಂಗ್ಲಿಷ್ ಅಲ್ಲೂ ರಿಲೀಸ್ ಆಗಲಿದೆ. ಇದನ್ನೂ ಓದಿ: ನಂದಿನಿ ಉತ್ಪನ್ನಗಳಿಗೆ ರಾಯಭಾರಿಯಾದ ನಟಿ ಸುಧಾರಾಣಿ
ಫಾರ್ಸ್ ಫಿಲ್ಮ್ ಜೊತೆ ಇಷ್ಟು ದೊಡ್ಡ ಡೀಲ್ ಮಾಡಿಕೊಳ್ಳಲು ‘ಧುರಂಧರ್ 2’ ಕಾರಣ ಎನ್ನಲಾಗುತ್ತಿದೆ. ಫಾರ್ಸ್ ಫಿಲ್ಮ್ಸ್ ಸಿನಿಮಾ ಹಂಚಿಕೆಯಲ್ಲಿ ಸಾಕಷ್ಟು ಅನುಭವ ಹೊಂದಿದೆ. ಅಲ್ಲದೆ, ಇದು ದುಬೈ ಮೂಲದ ಕಂಪನಿ. ಹೀಗಾಗಿ, ಗಲ್ಫ್ ರಾಷ್ಟ್ರಗಳಲ್ಲಿ ಇದು ಸಾಕಷ್ಟು ಹಿಡಿತ ಹೊಂದಿದೆ. ಈ ಭಾಗದಲ್ಲಿ ದೊಡ್ಡ ಮಟ್ಟದಲ್ಲಿ ಸಿನಿಮಾ ರಿಲೀಸ್ ಮಾಡುವ ಆಲೋಚನೆ ತಂಡಕ್ಕೆ ಇದೆ.
