ಬೆಂಗಳೂರು: ಕರ್ನಾಟಕದ ಹೆಮ್ಮೆಯ ನಂದಿನಿ ಉತ್ಪನ್ನಗಳು ದೇಶ ಮಾತ್ರವಲ್ಲದೇ ವಿದೇಶದಲ್ಲೂ ಕೂಡ ಹೆಚ್ಚು ಬೇಡಿಕೆಯನ್ನು ಹೊಂದಿರುವ ನಂದಿನಿ ಉತ್ಪನ್ನಕ್ಕೆ ಇದೀಗ ಹೊಸದಾಗಿ ನಂದಿನಿ ಉತ್ಪನ್ನಗಳ ಪ್ರಚಾರದ ರಾಯಭಾರಿಯಾಗಿ ನಟಿ ಸುಧಾರಣೆಯವರನ್ನ ಆಯ್ಕೆ ಮಾಡಲಾಗಿದೆ.
ಹೌದು, ಕನ್ನಡ ಮಾತ್ರವಲ್ಲದೆ ಹಲವಾರು ಭಾಷೆಗಳಲ್ಲಿ ನಟಿಸಿದ ನಟಿ ಸುಧಾರಾಣಿ ಅವರನ್ನು ನಂದಿನಿ ಉತ್ಪನ್ನಗಳ ಪ್ರಚಾರದ ರಾಯಭಾರಿಯಾಗಿ ಆಯ್ಕೆ ಮಾಡಿಕೊಂಡಿರುವುದರ ಕುರಿತಾಗಿ ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ಅವರು ಕಳಿಸಿದ್ದಾರೆ. ಇದನ್ನೂ ಓದಿ: KSDL ಬ್ರ್ಯಾಂಡ್ ಗೆ ಇಂದಿನಿಂದ ನಟಿ ತಮನ್ನಾ ರಾಯಭಾರಿ
ಈ ಕುರಿತು ತಮ್ಮನ್ನು ಹಂಚಿಕೊಂಡಿರುವ ಅವರು, ಬಮೂಲ್ ಕುಟುಂಬಕ್ಕೆ ನಟಿ ಸುಧಾರಾಣಿ ಅವರನ್ನು ಪ್ರೀತಿಯಿಂದ ಸ್ವಾಗತಿಸುತ್ತೇವೆ ಎಂದು ತಿಳಿಸಿದ್ದಾರೆ.
ನಂಬಿಕೆಯ ಮೇಲೆ ನಿರ್ಮಿತವಾದ ನಂದಿನಿಯು ರೈತರ ಮೇಲಿನ ಬದ್ಧತೆ, ಶುದ್ಧ ಹಾಗೂ ಗುಣಮಟ್ಟದ ಪೌಷ್ಟಿಕ ಆಹಾರದೊಂದಿಗೆ ಇನ್ನಷ್ಟು ಬಲಿಷ್ಠವಾಗುತ್ತದೆ ಎಂದು ತಿಳಿಸಿದ್ದಾರೆ.
