ಕಾರವಾರ: ಅಕ್ರಮ ಸಂಬಂಧ ಪ್ರಶ್ನಿಸಿದಕ್ಕೆ ಸಂಬಂಧಿಕರನ್ನ ಕೊಲೆ ಮಾಡಿ ಈಗ ಜೈಲುಪಾಲಾಗಿರುವ ಸುಚಿತ್ರಾ ಅಲಿಯಾಸ್ ಸುರೇಖಾ ಮತ್ತು ಖ್ಯಾತ ಜ್ಯೋತಿಷ್ಯ ಕಮಲಾಕರ್ ಭಟ್ ಅಕ್ರಮ ಸಂಬಂಧದ ಕುರಿತಾಗಿ ಇದೀಗ ಮತ್ತೊಂದು ಸ್ಫೋಟಕ ಮಾಹಿತಿ ಬೆಳಕಿಗೆ ಬಂದಿದೆ.
ಹೌದು, ಕಮಲಾಕರ್ ಭಟ್ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಸುಚಿತ್ರಾ ಎಂಬ ಮಹಿಳೆ ಕೇವಲ ಕಮಲಾಕರ್ ಭಟ್ ಜೊತೆ ಮಾತ್ರವಲ್ಲದೇ ಪಡ್ಡೆ ಹುಡುಗರಿಗೆ ಬಲೆಗೆ ಬೀಳಿಸುವ ಹೊಂಚನ್ನು ಹಾಕಿದ್ರು ಎಂದು ಮೂಲಗಳಿಂದ ತಿಳಿದು ಬಂದಿದೆ.
ಸೋಶಿಯಲ್ ಮೀಡಿಯಾಗಳಾದ instagram ನಲ್ಲಿ ಅರ್ಧಂಬರ್ಧ ಬಟ್ಟೆ ಹಾಕಿಕೊಂಡು ರಿಲ್ಸ್ ಮಾಡಿ ಅವುಗಳನ್ನು ಪಡ್ಡೆ ಹುಡುಗರಿಗೆ ಕಳಿಸುವುದು ಮತ್ತೆ ಅವರ ಜೊತೆ ಮಾತನಾಡುವುದು ಮಾಡುತ್ತಿದ್ದಳು ಎಂದು ತನಿಖಾ ಮೂಲಗಳಿಂದ ಹೊರಬಂದಿದೆ.
ಇನ್ನು ಮದುವೆ ಪ್ರಮಾಣಪತ್ರದ ಪ್ರಕಾರ ಸುಚಿತ್ರಾಳ ನಿಜವಾದ ಹೆಸರು ಸುರೇಖಾ! ಆದರೆ ಯುವಕರನ್ನು ಸೆಳೆಯಲು ಸಾಮಾಜಿಕ ಜಾಲತಾಣಗಳಲ್ಲಿ ತನ್ನ ಹೆಸರನ್ನೇ ಬದಲಿಸಿ ‘ಸುಚಿತ್ರಾ’ ಎಂದು ಪರಿಚಯಿಸಿಕೊಳ್ಳುತ್ತಿದ್ದಳು ಎಂಬುದು ತಿಳಿದುಬಂದಿದೆ.
ಸುರೇಖಾ ಎಂಬಾಕೆ ನನ್ನ ಅಕ್ಕ. ನಾವು ಟ್ವಿನ್ಸ್, ಅಕ್ಕ ಸಾವನ್ನಪ್ಪಿದ ಬಳಿಕ ಮಕ್ಕಳನ್ನು ನಾನು ನೋಡಿಕೊಳ್ಳುತ್ತಿದ್ದೇನೆ, ನನಗೆ ಮದುವೆಯಾಗಿಲ್ಲ’ ಎಂಬ ಕಥೆ ಹೇಳಿ ಹುಡುಗರನ್ನು ಸೆಳೆಯುತ್ತಿದ್ದಳು ಎನ್ನಲಾಗಿದೆ. ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರ ಖಾಲಿ ಟ್ರಂಕ್: ತೇಜಸ್ವಿ ಸೂರ್ಯ!
ಸಾಮಾಜಿಕ ಜಾಲತಾಣಗಳ ಮೂಲಕವೇ ಪಡ್ಡೆ ಹುಡುಗರನ್ನು ಸಂಪರ್ಕಿಸುವುದು ಸುಚಿತ್ರಾಳ ಮುಖ್ಯ ತಂತ್ರವಾಗಿತ್ತು. ಮೊದಲಿಗೆ ಚೆಂದದ ಯುವಕರ ಫೋಟೋಗಳಿಗೆ ಕಾಮೆಂಟ್ ಮಾಡುವುದು, ನಂತರ ಮೆಸೆಂಜರ್‌ನಲ್ಲಿ ಸ್ನೇಹ ಬೆಳೆಸುವುದು, 2-3 ತಿಂಗಳು ಚಾಟಿಂಗ್ ನಡೆಸುತ್ತಾ ಅವರ ವೈಯಕ್ತಿಕ ಹಾಗೂ ಆರ್ಥಿಕ ಹಿನ್ನೆಲೆ ಬಗ್ಗೆ ಮಾಹಿತಿ ಸಂಗ್ರಹಿಸುವುದನ್ನು ಮಾಡುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಅಲ್ಲದೆ ಹುಡುಗರ ಜತೆ ಚಾಟಿಂಗ್ ಮಾಡಿ ಸಲುಗೆ ಬೆಳೆಯುತ್ತಿದ್ದಂತೆಯೇ ‘‘ಭೇಟಿಯಾಗೋಣ’’ ಎಂದು ಕರೆಸಿಕೊಂಡು ಆಪ್ತವಾಗುತ್ತಿದ್ದಳು. ಕೊನೆಗೆ ಆ ಹುಡುಗರನ್ನು ಮನೆಗೆ ಕರೆಯುತ್ತಿದ್ದಳು. ಈ ರೀತಿ ಹಲವರನ್ನು ತನ್ನ ಬಲೆಗೆ ಬೀಳಿಸಲು ಸುಚಿತ್ರಾ ಮಸ್ಟರ್ ಪ್ಲಾನ್ ಮಾಡಿಕೊಂಡಿದ್ದಾಳೆ ಎಂಬುದು ತನಿಖೆಯಲ್ಲಿ ತಿಳಿದುಬಂದಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ಕಮಲಾಕರ್ ಭಟ್ ಮಾತ್ರವಲ್ಲದೆ ಕಲಬುರಗಿಯ ಜಮೀನ್ದಾರನ ಜೊತೆಗೂ ಸುಚಿತ್ರಾ ಲವ್ವಿಡವ್ವಿ ನಡೆದಿತ್ತು ಎಂಬುದು ಭಾನುವಾರ ಬಯಲಾಗಿತ್ತು. ಸುಚಿತ್ರಾ ಮೊಬೈಲ್ ಫೋನ್ ಪರಿಶೀಲನೆಗೆ ಒಳಪಡಿಸಿದ ಪೊಲೀಸರಿಗೆ ಹಲವು ಸ್ಫೋಟಕ ಮಾಹಿತಿಗಳು ತಿಳಿದುಬಂದಿದ್ದವು. ಇದೀಗ ಆಕೆ ಹುಡುಗರನ್ನು ಬುಟ್ಟಿಗೆ ಬೀಳಿಸಿಕೊಳ್ಳುತ್ತಿದ್ದುದು ಹೇಗೆ ಎಂಬುದೂ ಬಯಲಾಗಿದೆ.
