ಬೆಂಗಳೂರು: ಕಾಂಗ್ರೆಸ್ ನ ಹಿರಿಯ ಶಾಸಕ ಶಿವಲಿಂಗೇಗೌಡ ಅವರು ನಿನ್ನೆ (ಬುಧವಾರ ಫೆ. 04) ವಿಧಾನಸೌಧದಲ್ಲಿ ವಿರೋಧ ಪಕ್ಷದ ನಾಯಕರಿಗೆ ಹಿಂದುಮುಂದು ನೋಡದೆ ಹಿಗ್ಗಾಮುಗ್ಗಾ ಬೈದಿದ್ದರು.
ಅಲ್ಲದೇ ಶರಣು ಸಲಗಾರ್‌ಗೆ ನೀನು ಹೆಂಡ್ತಿನ ತಹಶಿಲ್ದಾರ್ ಮಾಡ್ಕೊಂಡು ಎಷ್ಟೆಷ್ಟು ದುಡ್ಡು ಹೊಡೆದಿದ್ದೀಯಾ ಅಂತ ಗೊತ್ತು. ನಿನ್ನ ಯೋಗ್ಯತೆಗೆ.. ಎಂದೆಲ್ಲಾ ಪದಗಳನ್ನ ಬಳಕೆ ಮಾಡಿ ಬಿಜೆಪಿ ಸದಸ್ಯರ ವಿರುದ್ಧ ಕಿಡಿಕಾರಿದರು.
ಆದರಿಗ ಶರಣು ಸಲಗರ ಪತ್ನಿ ಅವರ ಬಗ್ಗೆ ಮಾತನಾಡಿದ್ದಕ್ಕೆ ಶಾಸಕರಾದ ಶಿವಲಿಂಗೇಗೌಡ ಅವರು ವಿಷಾದ ವ್ಯಕ್ತಪಡಿಸಿದ್ದಾರೆ.
ಇನ್ನು ಸ್ವತಃ ಶಾಸಕರೇ ಸ್ಪಷ್ಟನೆ ನೀಡಿದ್ದಾರೆ. ನಾನು ಸಲಗರ, ವೇದವ್ಯಾಸ ಕಾಮತ್ ಬಗ್ಗೆ ಮಾತ್ರ ಮಾತಾಡಿದ್ದು. ತಹಶೀಲ್ದಾರ್ ಆಗಿರುವ ಪತ್ನಿಯಿಂದಲೇ ಶಾಸಕ ಶರಣು ಸಲಗರ ಎಂಎಲ್ಎ ಆಗಿದ್ದಾರೆಂದು ನಮ್ಮ ಕಡೆಯವ್ರು ಹೇಳಿದ್ರು. ಹೆಣ್ಮಗು ವಿಚಾರವಾಗಿ ಮಾತನಾಡಿದ್ದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ. ಹೆಣ್ಣುಮಕ್ಕಳ ಬಗ್ಗೆ ಯಾವತ್ತೂ ನಾನು ಮಾತನಾಡಿಲ್ಲ ಎಂದಿದ್ದಾರೆ. ಇದನ್ನೂ ಓದಿ:
ನನ್ನನ್ನು ಟಾರ್ಗೆಟ್ ಮಾಡಿ ಮಾತಾಡಿದ್ದು ಯಾಕೆ? ಅಧಿವೇಶನದಲ್ಲಿ ಬಿಜೆಪಿ ಶಾಸಕರು ಥೈ ತಕ ಅಂತಾ ಕುಣಿದಿದ್ದರು. ಅವರ ಆಡಿಯೋ ಹೋಗಲ್ಲ ಅಂತಾ ಬಾಯಿಗೆ ಬಂದಂತೆ ಕೂಗಿದ್ರು. ಕೊಬ್ಬರಿ ಕಳ್ಳ ಅಂದ್ರು, ಅದಕ್ಕೆ ಏನು ಪ್ರತಿಕ್ರಿಯೆ ಕೊಡಬೇಕೋ ಕೊಟ್ಟೆ. ನಿಮ್ಮಪ್ಪನಿಗೆ ಕೊಟ್ಟಿದ್ದೀನಿ ತೆಗೆದುಕೊ ಅಂತಾ ಹೇಳಿದ್ದೆ. ಬಿಜೆಪಿಯವರಿಗೆ ನನ್ನ ವೈಯಕ್ತಿಕ ಬದುಕಿನ ಬಗ್ಗೆ ಯಾಕೇ ಬೇಕು? ಶಿವಲಿಂಗೇಗೌಡನನ್ನ ಕಳ್ಳ ಎಂದು ಪ್ರಚೋದಿಸಿದ್ದಕ್ಕೆ ಮಾತನಾಡಿದ್ದು. ನನ್ನನ್ನ ಕಳ್ಳ ಅಂದ್ರೆ ದೇವರೇ, ಬುದ್ಧಿ, ಗುರುಗಳೇ ಅಂತಾ ಹೇಳ್ಬೇಕಿತ್ತಾ? ಎಂದವರು ಪ್ರಶ್ನಿಸಿದ್ದಾರೆ.
