ವಡೋದರಾ: ಇಂದು ಕ್ರಿಕೆಟ್ ಅಭಿಮಾನಿಗಳಿಗೆ ಹಬ್ಬದ ಸಂಭ್ರಮ ಯಾಕೆಂದರೆ ಇಂದು (ಗುರುವಾರ ಫೆ. 05) ವಡೋದಾರದ ಕೋಟಂಬಿ ಮೈದಾನದಲ್ಲಿ ಡಬ್ಲುಪಿಎಲ್ ಫೈನಲ್ ಪಂದ್ಯ ನಡೆಯಲಿದೆ ಸಂಜೆ 7ಗಂಟೆಯಿಂದ ನಡೆಯಲಿರುವ ಆರ್ಸಿಬಿ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ರಣರೋಚಕ ಪಂದ್ಯವಾಡಲು ವೇದಿಕೆ ಸಜ್ಜಾಗಿದ್ದು, ಫೈನಲ್ ನಲ್ಲಿ ಟ್ರೋಪಿಗೆ ಮುತ್ತಿಡೋರು ಯಾರು ಎಂದು ಎಲ್ಲಾ ಕ್ರಿಕೆಟ್ ಅಭಿಮಾನಿಗಳು ಹಾಗೂ ಆರ್ಸಿಬಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
ಹೌದು, ನಾಲ್ಕನೇ ಆವೃತ್ತಿಯಲ್ಲಿ ಆರ್ಸಿಬಿ ಮಹಿಳಾ ತಂಡವು ಫೈನಲ್ ಗೆ ಪ್ರವೇಶಿಸಿದ್ದು, ಇಂದಿನ ಫೈನಲ್ ಪಂದ್ಯದಲ್ಲಿ ಹೇಗಾದರೂ ಮಾಡಿ ಡಬ್ಲುಪಿಎಲ್ ಟ್ರೋಫಿ ಗೆದ್ದು ಇತಿಹಾಸ ನಿರ್ಮಿಸಲು ಯೋಜನೆ ರೂಪಿಸಿದೆ. ಇದನ್ನೂ ಓದಿ: ಹೈಕೋರ್ಟ್ ನಿಂದ ಹೆಚ್.ಡಿ.ರೇವಣ್ಣಗೆ ಬಿಗ್ ಶಾಕ್!
ಇನ್ನು ಆರ್ಸಿಬಿ ಫ್ರಾಂಚೈಸಿ ಹ್ಯಾಟ್ರಿಕ್ ಟ್ರೋಫಿ ಗೆಲುವಿನ ನಿರೀಕ್ಷೆಯಲ್ಲಿದೆ. 2024ರಲ್ಲಿ ಮಹಿಳಾ ತಂಡ, 2025ರಲ್ಲಿ ಪುರುಷರ ತಂಡ ಚಾಂಪಿಯನ್ ಆಗಿತ್ತು. ಈ ವರ್ಷ ಮತ್ತೆ ಕಪ್ ಗೆಲ್ಲುತ್ತಾ ಎಂಬ ಪ್ರಶ್ನೆಗೆ ಇಂದು ರಾತ್ರಿ ಉತ್ತರ ಸಿಗಲಿದೆ.
