ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಬೆಂಗಳೂರು ನಗರದಲ್ಲಿ ಮನೆ ಕೆಲಸದವರಿಗೆ ಡಿಮ್ಯಾಂಡ್ ಹೆಚ್ಚಾಗಿದ್ದು, ಸಿಕ್ಕಸಿಕ್ಕವರನ್ನು ಮನೆ ಕೆಲಸಕ್ಕೆ ನೇಮಕ ಮಾಡಿಕೊಂಡರೆ ಮನೆಗೆ ಕನ್ನ ಬೀಳೋದಂತು ಗ್ಯಾರಂಟಿ.
ಹೌದು, ಮನೆ ಕೆಲಸಕ್ಕೆ ಎಂದು ಸಿಕ್ಕಸಿಕ್ಕವರನ್ನ ನೇಮಕ ಮಾಡಿಕೊಂಡರೆ ನಿಮ್ಮ ಮನೆಯಲ್ಲಿರುವ ವಜ್ರ, ಒಡವೆ, ಹಣ ದೋಚುವುದಂತೂ ಗ್ಯಾರಂಟಿ. ಇದಕ್ಕೆ ದೊಡ್ಡ ಉದಾಹರಣೆಗೆ ಎಂಬಂತೆ ಇದೀಗ ಮಾರತಹಳ್ಳಿಯಲ್ಲಿ ನಡೆದಿರುವ ಪ್ರಕರಣವೇ ಒಂದು ಪ್ರಮುಖ ಉದಾಹರಣೆಯಾಗಿದೆ.
ಮಾರತ್ತಹಳ್ಳಿಯಲ್ಲಿ ಉದ್ಯಮಿಯೊಬ್ಬರ ಮನೆಯಲ್ಲಿ ನಡೆದಿದ್ದ 18 ಕೋಟಿ ರೂ. ದರೋಡೆ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದೆ. ಈ ದರೋಡೆಯಲ್ಲಿ ನೇಪಾಳ ಮೂಲದ ಗ್ಯಾಂಗ್ ಇರೋದು ಬೆಳಕಿಗೆ ಬಂದಿದೆ.
ನೇಪಾಳದ ಈ ಗ್ಯಾಂಗ್ ಸದಸ್ಯರು ಶ್ರೀಮಂತ ಉದ್ಯಮಿಗಳ ಮನೆಗಳನ್ನು ಟಾರ್ಗೆಟ್ ಮಾಡಿ ಮನೆಗೆಲಸಕ್ಕೆ ಸೇರಿಕೊಳ್ಳುತ್ತಿದ್ದರು. ಬಳಿಕ ಅಲ್ಲಿನ ಎಲ್ಲಾ ಚಟುವಟಿಕೆಗಳನ್ನು ತಿಳಿದುಕೊಳ್ಳುತ್ತಿದ್ದರು. ದರೋಡೆ ಮಾಡುವ ಮುನ್ನ ಒಂದು ತಿಂಗಳಲ್ಲಿ ವೈಯಕ್ತಿಕ ಕಾರಣದ ನೆಪ ಹೇಳಿ ಕೆಲಸ ಬಿಡುತ್ತಿದ್ದರು. ಕೆಲಸ ಬಿಡುವ ಮುನ್ನ ಇದೇ ಗ್ಯಾಂಗ್, ಇಬ್ಬರನ್ನು ಕೆಲಸಕ್ಕೆ ಸೇರಿಸಿ ಹೋಗಿದ್ದರು. ಅದೇ ರೀತಿ ನಗರದ ಉದ್ಯಮಿ ಶಿವಕುಮಾರ್ ಅವರ ಮನೆಗೂ ಗ್ಯಾಂಗ್ನ ಕಮಲ ಹಾಗೂ ದಿನೇಶ್ ಎಂಬವರನ್ನು ಕೆಲಸಕ್ಕೆ ಸೇರಿಸಿದ್ದರು. ಇದನ್ನೂ ಓದಿ: 2ನೇ ಬಾರಿಗೆ ಫಿಲ್ಮ್ ಚೇಂಬರ್ ನ ಅಧ್ಯಕ್ಷೆಯಾಗಿ ಆಯ್ಕೆಯಾದ ನಟಿ ಜಯಮಾಲಾ
ಸಮಯ ನೋಡಿ ಈ ಗ್ಯಾಂಗ್ ಉದ್ಯಮಿಯ ಮನೆ ದರೋಡೆ ಮಾಡಿ ಪರಾರಿಯಾಗಿತ್ತು. ಡಿಸೆಂಬರ್ನಲ್ಲಿ ದಿನೇಶ್ ಮತ್ತು ಗ್ಯಾಂಗ್ ಪುಣೆಯಲ್ಲಿ ಶ್ರೀಮಂತ ಉದ್ಯಮಿಯೊಬ್ಬರ ಮನೆಯಲ್ಲಿ ದರೋಡೆ ಮಾಡಿರೋದು ಪತ್ತೆಯಾಗಿದೆ. ಸದ್ಯ ಈ ನೇಪಾಳ ಮೂಲದ ಗ್ಯಾಂಗ್ ಬಗ್ಗೆ ಮಾಹಿತಿ ಕಲೆಹಾಕಿದ್ದು, ಬಂಧನಕ್ಕಾಗಿ ಬಲೆ ಬೀಸಿದ್ದಾರೆ.
