ಬೆಂಗಳೂರು: ಕನ್ನಡ ಚಲನಚಿತ್ರದ ಹಿರಿಯ ನಟಿ ಜಯಮಾಲಾ ಅವರು ಈಗಾಗಲೇ ತಮ್ಮ ನಟನೆಯ ಮೂಲಕ ಹಲವಾರು ದಾಖಲೆಗಳನ್ನು ಮಾಡಿರುವ ಅವರು ಇದೀಗ ಮತ್ತೊಂದು ದಾಖಲೆ ಮಾಡಿದ್ದಾರೆ.
ಹೌದು, ಇತ್ತೀಚಿಗೆ ನಡೆದ ಫಿಲ್ಮ್ ಚೇಂಬರ್ ಚುನಾವಣೆಯಲ್ಲಿ ಬಹುಮತಗಳಿಂದ ಆಯ್ಕೆಯಾಗಿ 2ನೇ ಬಾರಿಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ನೂತನ ಅಧ್ಯಕ್ಷರಾಗಿ ಹಿರಿಯ ನಟಿ ಜಯಮಾಲಾ ಪದಗ್ರಹಣ ಮಾಡಿದ್ದಾರೆ.
ಫಿಲ್ಮ್ ಚೇಂಬರ್ನಲ್ಲಿ ಪದಾಧಿಕಾರಿಗಳ ಸಮ್ಮುಖದಲ್ಲಿ ದೇವರಿಗೆ ಪೂಜೆ ಸಲ್ಲಿಸಿ ಅವರು ಅಧಿಕಾರ ವಹಿಸಿಕೊಂಡಿದ್ದಾರೆ. ಇದನ್ನೂ ಓದಿ: ಇಂದೇ ರಶ್ಮಿಕಾ ಮಂದಣ್ಣ ವಿಜಯ್ ಮದುವೆ!?
ಈ ಹಿಂದೆ 2008 ರಿಂದ 2010 ವರೆಗೆ ಜಯಮಾಲಾ ಪ್ರಥಮ ಬಾರಿಗೆ ವಾಣಿಜ್ಯ ಮಂಡಳಿ ಅಧ್ಯಕ್ಷರಾಗಿದ್ದರು. ಇದೀಗ 2026ರಿಂದ 2028ರ ಸಾಲಿನ ವರೆಗೆ ಫಿಲ್ಮ್ ಚೇಂಬರ್ ನೂತನ ಅಧ್ಯಕ್ಷರಾಗಿ ಜಯಮಾಲಾ ಪದಗ್ರಹಣ ಮಾಡಿದ್ದಾರೆ.
