ಬೆಂಗಳೂರು: ರಾಜ್ಯದ ಉಪ ಮುಖ್ಯಮಂತ್ರಿಯಾಗಿರುವ ಡಿಕೆ ಶಿವಕುಮಾರ್ ಅವರು ಜೆಡಿಎಸ್ ಬಗ್ಗೆ ಮಾತನಾಡುವ ಮೊದಲು ಕಾಂಗ್ರೆಸ್ ಇಡೀ ದೇಶದಲ್ಲಿ ಪರಿಸ್ಥಿತಿ ಏನಾಗಿದೆ ಅಂತ ಮೊದಲು ತಿಳಿದುಕೊಂಡು ನಂತರ ಜೆಡಿಎಸ್, ಬಿಜೆಪಿ ಬಗ್ಗೆ ಮಾತನಾಡಲಿ ಎಂದು ನಿಖಿಲ್ ಕುಮಾರಸ್ವಾಮಿ ಡಿಕೆ ಶಿವಕುಮಾರ್ ಅವರಿಗೆ ತಿರುಗೇಟು ಕೊಟ್ಟಿದ್ದಾರೆ.
ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಇಂದು (ಶುಕ್ರವಾರ ಜ. 09) ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, 2028ಕ್ಕೆ ಬಿಜೆಪಿ-ಜೆಡಿಎಸ್ ಕನಿಷ್ಠ 150 ಸ್ಥಾನ ಗೆಲ್ಲಲಿದೆ ಎಂದುನಿಖಿಲ್ ಕುಮಾರಸ್ವಾಮಿ ಹೇಳಿದರು. 2 ಪಾರ್ಟಿ ಸಿಸ್ಟಮ್ ಯಾರಿಗೆ ಅನುಕೂಲ ಆಗುತ್ತದೆ? ಡಿಕೆ ಶಿವಕುಮಾರ್ ಗಾ? ಅಂತ ಪ್ರಶ್ನೆ ಮಾಡಿದರು. ಇದನ್ನೂ ಓದಿ: ಅನುಮಾನಸ್ಪದ ಮೂವರ ಸಾವು, ಸಿಐಡಿ ತನಿಖೆಗೆ ಆಗ್ರಹ
ಜೆಡಿಎಸ್ ನ 37% ವೋಟನ್ನ ಹಳೇ ಮೈಸೂರು ಭಾಗದಲ್ಲಿ ಉಳಿಸಿಕೊಂಡು ಬಂದಿದ್ದೇವೆ. ಜೆಡಿಎಸ್ ಅಲ್ಲಿಗೆ ಮಾತ್ರ ಸೀಮಿತ ಆಗಿಲ್ಲ. ಸವದತ್ತಿಯಲ್ಲಿ 30,000 ವೋಟ್ ತಗೊಂಡು. ಸೇಡಂ, ರಾಯಭಾಗ, ಶೃಂಗೇರಿ ಸೇರಿ ಅನೇಕ ಕ್ಷೇತ್ರದಲ್ಲಿ ವೋಟ್ ಪಡೆದಿದ್ದೇವೆ. ಕಾಂಗ್ರೆಸ್ ನಲ್ಲಿ ಇರೋ ವ್ಯಕ್ತಿಗಳು ಜೆಡಿಎಸ್ ಶಕ್ತಿಯನ್ನ ಪ್ರಶ್ನೆ ಮಾಡಬಹುದು. ಜೆಡಿಎಸ್ ಶಕ್ತಿ ಏನು ಅಂತ 4 ವಿಧಾನಸಭೆ ಚುನಾವಣೆಯಲ್ಲಿ ಜನ ತೋರಿಸಿದ್ದಾರೆ. 55 ಲಕ್ಷ ಮತ ಜೆಡಿಎಸ್‌ಗೆ ಬಂದಿದೆ ಅಂತ ತಿಳಿಸಿದರು. ಬೇರೆ ರಾಜ್ಯದಲ್ಲಿ ಕಾಂಗ್ರೆಸ್ ಸ್ಥಿತಿ ಹೇಗೆ ಆಗಿದೆ? ಕಾಂಗ್ರೆಸ್ ನ್ಯಾಷನಲ್ ಪಾರ್ಟಿಯಾಗಿ ಉಳಿದಿಲ್ಲ. ಕಾಂಗ್ರೆಸ್ ಅವರ ಶಕ್ತಿ ಕುಂದಿದೆ ಅಂತ ಡಿಕೆಶಿಗೆ ನಿಖಿಲ್ ತಿರುಗೇಟು ಕೊಟ್ಟರು.
