Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಅನುಮಾನಸ್ಪದ ಮೂವರ ಸಾವು, ಸಿಐಡಿ ತನಿಖೆಗೆ ಆಗ್ರಹ
  • State
  • ಶಹಾಪುರ

ಅನುಮಾನಸ್ಪದ ಮೂವರ ಸಾವು, ಸಿಐಡಿ ತನಿಖೆಗೆ ಆಗ್ರಹ

Praja Vahini January 8, 2026
WhatsApp Image 2026-01-08 at 18.29.07
Spread the love

ಶಹಾಪುರ: ತಾಲೂಕಿನಲ್ಲಿ ಮಾದಿಗ ಸಮುದಾಯಕ್ಕೆ ಸೇರಿದ ಮೂವರ ಅನುಮಾನಾಸ್ಪದ ಸಾವುಗಳ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸದೇ ನಿರ್ಲಕ್ಷ ಮತ್ತು ತಾರತಮ್ಯ ಮಾಡುತ್ತಿರುವ ಪೊಲೀಸ್ ಇಲಾಖೆಯ ನಡೆ ಖಂಡನೀಯ, ಕೂಡಲೇ ಈ ಮೂರು ಪ್ರಕರಣಗಳ ತನಿಖೆಯನ್ನು ಸಿಐಡಿಗೆ ಒಪ್ಪಿಸಬೇಕು ಎಂದು ಸಮಾಜದ ಹಿರಿಯ ಮುಖಂಡ ವಾಸುದೇವ ಕಟ್ಟಿಮನಿ ಆಗ್ರಹಿಸಿದರು.

ನಗರದ ಬಸವೇಶ್ವರ ವೃತ್ತದಲ್ಲಿ ಮಾದಿಗ ಸಾಮೂಹಿಕ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿ ಮಾದಿಗ ಸಮುದಾಯಕ್ಕೆ ಸೇರಿದ ಶಿವರಾಜ ತಂದೆ ಶರಣಪ್ಪ, ಮರೆಮ್ಮ ಗಂಡ ವಿಜಯಕುಮಾರ ದೇವಿನಗರ, ಇತ್ತೀಚೆಗೆ ನಡೆದ ಜಯಮ್ಮ ಗಂಡ ಪರಶುರಾಮ ಈ ಮೂರು ಸಾವುಗಳು ಅನುಮಾನಸ್ಪಾದ ಮೂಡಿಸುತ್ತಿದ್ದು, ಸ್ಥಳೀಯ ಪೊಲೀಸ್ ಠಾಣೆ ಮಟ್ಟದಲ್ಲಿ ತನಿಖೆ ನಿರೀಕ್ಷಿತ ವೇಗದಲ್ಲಿ ನಡೆಯುತ್ತಿಲ್ಲ. ಇದು ಸಮಾಜದ ಅಸಮಾಧಾನಕ್ಕೆ ಕಾರಣವಾಗಿದೆ. ಮೂರು ಪ್ರಕಣಗಳು ಇಡೀ ಮಾದಿಗ ಜನಾಂಗಕ್ಕೆ ಗಂಭೀರ ಆತಂಕ ಹಾಗೂ ಅಶಾಂತಿಯನ್ನು ಉಂಟು ಮಾಡಿವೆ. ಈ ಪ್ರಕರಣಗಳ ಗಂಭೀರತೆಯನ್ನು ಪರಿಗಣಿಸಿ ಹಾಗೂ ನ್ಯಾಯಪರ, ವೃತ್ತಿಪರ ತನಿಖೆಗೆ ಸಿಐಡಿ ಮಟ್ಟದಲ್ಲಿ ತನಿಖೆ ಮಾಡಬೇಕು ಎಂದು ಆಗ್ರಹಿಸಿದರು.

ಮಹಿಳೆಯರಿಗೆ ರಕ್ಷಣೆ ಇಲ್ಲ

ತಾಲೂಕಿನೆಲ್ಲೇಡೆ ಕಾನೂನು ವ್ಯವಸ್ಥೆ ಕುಸಿಯುತಿದೆ. ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ. ಮಾದಿಗ ಜನಾಂಗಕ್ಕೆ ಸೇರಿದ ಮೂವರ ಸಾವಿನಲ್ಲಿ ಅನುಮಾನವಿದ್ದು, ಸಚಿವರು ಈ ಬಗ್ಗೆ ಸೂಕ್ತ ತನಿಖೆಗೆ ಸೂಚಿಸಬೇಕು. ಮತ್ತು ಮೃತ ಕುಟುಂಬಸ್ಥರ ಕುಟುಂಬಕ್ಕೆ 30 ಲಕ್ಷ, ರೂ ಪರಿಹಾರ, ಕುಟುಂಬದ ಸದಸ್ಯರೊಬ್ಬರಿಗೆ ಸರ್ಕಾರಿ ಉದ್ಯೋಗ ಕೊಡಬೇಕು ಎಂದು ಯುವ ಮುಖಂಡ ಭೀಮು ಖಾದ್ಯಪುರ ಆಗ್ರಹಿಸಿದರು. ಇದನ್ನೂ ಓದಿ: ಮಹಿಳೆ ಬಟ್ಟೆ ಹರಿದ ಪ್ರಕರಣ: ಸಂತೋಷ ಲಾಡ್ ಹೇಳಿದ್ದೇನು?

ಈ ಸಂದರ್ಭದಲ್ಲಿ ರುದ್ರಪ್ಪ ಹುಲಿಮನಿ, ಮಲ್ಲಪ್ಪ ಉಳ್ಳಂಡಗೇರ, ವೆಂಕಟೇಶ ಆಲೂರ, ಶಾಂತಪ್ಪ ಕಟ್ಟಿಮನಿ, ಬಸವರಾಜ ಪೂಜಾರಿ, ವಿಜಯಕುಮಾರ ಎದುರುಮನಿ, ಹುಲಗಪ್ಪ ದೊಡ್ಮನಿ, ಮಾನಪ್ಪ ವಠಾರ್, ಚಂದಪ್ಪ ಹಲಿಗಿ, ಭೀಮರಾಯ ಕರ್ಕಳ್ಳಿ, ಸಿದ್ದಪ್ಪ ಗೋನಾಲ್, ಭೀಮರಾಯ ಪೂಜಾರಿ, ಭೀಮರಾಯ ಕಾಂಗ್ರೆಸ್, ಭೀಮಾಶಂಕರ ಕಟ್ಟಿಮನಿ, ಶಿವುಕುಮಾರ ದೊಡ್ಮನಿ, ಲಕ್ಷ್ಮಣ ಶೆಟ್ಟಿಗೇರಾ, ಈರಣ್ಣ ಗುತ್ತಿಪೇಠ, ಶೇಖಪ್ಪ ಕತ್ತಿ, ಹುಸನಪ್ಪ ಕಟ್ಟಿಮನಿ, ಪರಶುರಾಮ ಮಹಾಲ್‌ರೋಜ, ಧರ್ಮರಾಜ್ ನಾಟೇಕರ್, ಶಿವರೆಡ್ಡಿ ಗುಂಡಗುರ್ತಿ, ಮಲ್ಲಣ್ಣ ಝಂಡೆ ಸೇರಿದಂತೆ ಮಹಿಳೆಯರು, ಯುವಕರು ಇದ್ದರು.

About the Author

Praja Vahini

Editor

View All Posts

Spread the love

Post navigation

Previous: ಮಹಿಳೆ ಬಟ್ಟೆ ಹರಿದ ಪ್ರಕರಣ: ಸಂತೋಷ ಲಾಡ್ ಹೇಳಿದ್ದೇನು?
Next: ಕಾಂಗ್ರೆಸ್ ನ್ಯಾಷನಲ್ ಪಾರ್ಟಿಯಾಗಿ ಉಳಿದಿಲ್ಲ: ನಿಖಿಲ್ ಕುಮಾರಸ್ವಾಮಿ

Views:

262

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.