ಬೆಂಗಳೂರು: ಕಿಚ್ಚ ಸುದೀಪ್ ಅವರ ಮಗಳು ಸಾನ್ವಿ ಒಂದಲ್ಲ ಒಂದು ರೀತಿ ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಹಾಕುವ ಮೂಲಕ ಮಿಂಚುತ್ತಿರುತ್ತಾರೆ.
ಹೌದು, ಕಿಚ್ಚ ಸುದೀಪ್ ಅವರ ಮಗಳು ಸಾನ್ವಿಯವರು ಸೋಶಿಯಲ್ ಮೀಡಿಯಾದಲ್ಲಿ ಸಕ್ಕತ್ ಆಕ್ಟಿವ್ ಆಗಿದ್ದು, ಇದೀಗ ಅಚ್ಚರಿ ಮೂಡಿಸುವಂತಹ ಫೋಟೋಗಳನ್ನು ಹಾಕಿ ಸುದೀಪ್ ಅವರ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದಾರೆ.
ಯೆಸ್…ಸುದೀಪ್ ಹಾಗೂ ಅವರ ಪತ್ನಿ ಪ್ರಿಯಾರಿಂದ ಅರಿಶಿಣ ಹಚ್ಚಿಸಿಕೊಳ್ಳುವ ಫೋಟೋಗಳನ್ನು instagram ನಲ್ಲಿ ಪೋಸ್ಟ್ ಮಾಡಿ ಅಚ್ಚರಿ ಮೂಡಿಸಿದ್ದಾರೆ
ಥಟ್ ಅಂತ ನೋಡಿದ್ರೆ ಸಾನ್ವಿಯದ್ದೇ ಮದುವೆಯಾ ಎಂದು ಕೇಳುವಂತಿದೆ ಫೋಟೋಗಳು. ಆದರೆ ಈ ಶಾಸ್ತ್ರ ಸುದೀಪ್ ಅಕ್ಕನ ಮಗನ ಮದುವೆಯಲ್ಲಿ ನಡೆದಿದೆ. ಅದರ ಫೋಟೋಗಳನ್ನ ಸಾನ್ವಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಬಿಬಿಕೆ ಮನೆಯಿಂದ ಜಾನ್ವಿ ಔಟ್
ಸುದೀಪ್ ಅಕ್ಕನ ಮಗನ ಮದುವೆ ಶಾಸ್ತ್ರದಲ್ಲಿ ಸುದೀಪ್ ಪುತ್ರಿ ಸಾನ್ವಿಗೂ ಅರಿಶಿಣ ಹಚ್ಚಲಾಗಿದೆ. ಶಾಸ್ತ್ರದಲ್ಲಿ ಹೆಣ್ಣುಮಕ್ಕಳಿಗೂ ಅರಿಶಿಣ ಹಚ್ಚುವ ಪದ್ಧತಿ ಬಹುಶಃ ಇರುತ್ತೆ. ಹೀಗಾಗೇ ಸಾನ್ವಿ ಕೂಡ ಅರಿಶಿಣ ಹಚ್ಚಿಸಿಕೊಂಡಿದ್ದಾರೆ. ಸುದೀಪ್ ಅಕ್ಕನ ಮಗನ ವಿವಾಹದ ಹಿನ್ನೆಲೆ ಕುಟುಂಬದಲ್ಲಿ ಈ ಶಾಸ್ತ್ರ ನಡೆದಿದೆ. ಸಾಂಪ್ರದಾಯಿಕ ಲುಕ್‌ನಲ್ಲಿ ಸುದೀಪ್ ಪುತ್ರಿ ಸಾನ್ವಿ ಭಾರಿ ಮಿಂಚಿದ್ದಾರೆ.
