ಬೆಂಗಳೂರು: ಬೆಂಗಳೂರು ನಗರದಲ್ಲಿ ಇತ್ತೀಚಿಗೆ ಹಾಡ ಹಗಲೇ ಕಳ್ಳತನ, ಕಲೆಸುಲಿಗೆ ನಡೆಯುತ್ತಿರುವುದು ಬೆಳಕಿಗೆ ಬರುತ್ತಿರುವುದು ಕಂಡುಬಂದಿದ್ದು, ಇದೀಗ ಕೆಆರ್ ಪುರಂ ಪೊಲೀಸ್ ಅಧಿಕಾರಿಗಳು ಭರ್ಜರಿ ಕಾರ್ಯಚರಣೆ ನಡೆಸಿ 70 ಲಕ್ಷ ಮೌಲ್ಯದ 500 ಗ್ರಾಂ ಚಿನ್ನಾಭರಣ ಹಾಗೂ 1.5 ಕೆಜಿ ಬೆಳ್ಳಿ ವಶ ಮಾಡಿದ್ದಾರೆ.
ಹಲವಾರು ದಿನಗಳಿಂದ ಕೆಆರ್ ಪುರಂ ಸುತ್ತಮುತ್ತಲಿನಲ್ಲಿ ತಡರಾತ್ರಿ ಮನೆಗಳಲ್ಲಿಯೇ ಕಳ್ಳತನ ಮಾಡುತ್ತಿದ್ದ ಮೊಹಮ್ಮದ್ ಇಸ್ರಾರ್ ಎಂಬ ಆರೋಪಿ ಬಂಧನಗೆ ಸಿಕ್ಕಿದ್ದಾನೆ. ಆರೋಪಿ ಕಳ್ಳತನದ ನಂತರ ಬಟ್ಟೆ ಬದಲಾಯಿಸಿ, ಬೈಕ್ ನಂಬರ್ ಪ್ಲೇಟ್ ಬದಲಿಸುತ್ತಿದ್ದ, ಹೀಗೆಯೇ ಕಳೆದ 3 ವರ್ಷಗಳಿಂದ ಪೊಲೀಸರಿಗೆ ಸಿಗದಂತೆ ಚಳ್ಳೆಹಣ್ಣು ತಿನಿಸುತ್ತಿದ್ದ ಆರೋಪಿ ಇದೀಗ ಪೊಲೀಸರ ವಶದಲ್ಲಿದ್ದಾನೆ. ಇದನ್ನೂ ಓದಿ: ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ಬಂಪರ್ ಗಿಫ್ಟ್
ಈ ಹಿಂದೆ ಒಟ್ಟು 17 ಪ್ರಕರಣಗಳನ್ನು ಆರೋಪಿ ಭೇದಿಸಿರುವುದು ತನಿಖೆ ವೇಳೆ ಪತ್ತೆಯಾಗಿದ್ದು, ಪೊಲೀಸರು ಈಗ ಆರೋಪಿಯನ್ನು ಬಂಧಿಸಿ ಜೈಲಿಗೆ ಕಳಿಸಿದ್ದಾರೆ.
