ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ನಟಿ ಮೇಘನಾ ರಾಜ್ ಅವರು ಮದುವೆಯಾದ ಬಳಿಕ ನಟನೆಗೆ ಬ್ರೇಕ್ ಕೊಟ್ಟಿದ್ದಾರೆ ಅವರು ಇದೀಗ ಬಹುದೊಡ್ಡ ಪ್ರಾಜೆಕ್ಟ್ ನಲ್ಲಿ ನಟಿಸುತ್ತಿದ್ದಾರೆ ಎಂಬ ಸುದ್ದಿ ಹೊರ ಬಿದ್ದಿದೆ.
ಹೌದು, ನಟಿ ಮೇಘನಾ ರಾಜ್ ಸರ್ಜಾ ಇದೀಗ ದೊಡ್ಡ ಪ್ರಾಜೆಕ್ಟ್ ಮೂಲಕ ಸುದ್ದಿಯಾಗಿದ್ದಾರೆ.
ಮೂಲಗಳ ಪ್ರಕಾರ, ಮೇಘನಾ ರಾಜ್ ಇದೀಗ ರಜನಿಕಾಂತ್ ನಟನೆಯ`ಜೈಲರ್ 2′ ಚಿತ್ರದಲ್ಲಿ ಅಭಿನಯಿಸುತ್ತಿದ್ದು, ಅವರ ಪಾತ್ರದ ವಿಚಾರವನ್ನು ಗುಟ್ಟಾಗಿ ಇಡಲಾಗಿದೆ. ಈಗಾಗಲೇ ಮೇಘನಾ ಅವರು ಚಿತ್ರೀಕರಣದಲ್ಲಿ ಭಾಗಿಯಾಗಿದ್ದು, ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.
ಮೇಘನಾ ರಾಜ್ ಅತಿಹೆಚ್ಚು ಮಲಯಾಳಂ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಹೀಗೆ ಕನ್ನಡದ ಜೊತೆ ಜೊತೆಗೆ ದಕ್ಷಿಣ ಭಾರತದಲ್ಲಿ ಮೇಘನಾ ಈಗಾಗ್ಲೇ ಹೆಸರು ಮಾಡಿರುವ ನಟಿ. ಇದೀಗ ನೆಲ್ಸನ್ ನಿರ್ದೇಶನದ ಬಹುನಿರೀಕ್ಷಿತ `ಜೈಲರ್ 2′ ಚಿತ್ರದ ಮೂಲಕ ಮತ್ತೆ ಕಾಲಿವುಡ್ಗೆ ಕಮ್ಬ್ಯಾಕ್ ಮಾಡಲಿದ್ದಾರಂತೆ ಮೇಘನಾ.
