ಬೆಂಗಳೂರು: ಇಂದು ಪುನೀತ್ ರಾಜಕುಮಾರ್ ಅವರ ನಾಲ್ಕನೇ ವರ್ಷದ ಪುಣ್ಯಸ್ಮರಣೆಯಾಗಿದ್ದು ಪುನೀತ್ ಅವರ ಅಭಿಮಾನಿಗಳು ಅವರ ಸ್ಮಾರಕಕ್ಕೆ ಭೇಟಿ ನೀಡಿ ನಮನ ಸಲ್ಲಿಸುತ್ತಿದ್ದಾರೆ.
ಹೌದು, 2021 ಅಕ್ಟೋಬರ್ 29ರಂದು ಪುನೀತ್ ಹೃದಯಗಾತದಿಂದ ನಿಧನ ಹೊಂದಿದ್ದರು ಕೂಡ ಅವರ ನೆನಪು, ಅವರ ಪ್ರೀತಿ ಅಭಿಮಾನಿಗಳ ಮನದಲ್ಲಿ ಇನ್ನೂ ಕೂಡ ಹಚ್ಚ ಹಸಿರಾಗಿದೆ.
ಇಂದು (ಬುಧವಾರ ಅ.29) ಅವರ 4ನೇ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ, ಕಂಠೀರವ ಸ್ಟುಡಿಯೋದಲ್ಲಿರುವ ಅಪ್ಪು ಸಮಾಧಿ ಸ್ಥಳವನ್ನು ಹೂವುಗಳಿಂದ ಸಿಂಗರಿಸಲಾಗಿದೆ. ಬೆಳಗ್ಗಿನಿಂದಲೇ ಸಾವಿರಾರು ಅಭಿಮಾನಿಗಳು ಅಪ್ಪು ಸಮಾಧಿಗೆ ಆಗಮಿಸಿ, ಅಪ್ಪುವಿನ ಸ್ಮಾರಕಕ್ಕೆ ನಮನ ಸಲ್ಲಿಸುತ್ತಿದ್ದಾರೆ. ಡಾ. ರಾಜ್ಕುಮಾರ್ ಕುಟುಂಬದ ಸದಸ್ಯರೂ ಸಹ ಬೆಳಗ್ಗೆ 10 ಗಂಟೆ ಸಮಾಧಿ ಸ್ಥಳಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಇದನ್ನೂ ಓದಿ: ಸಿಎಂ ಬದಲಾವಣೆ ಕುರಿತು ಸ್ಫೋಟಕ ಹೇಳಿಕೆ ನೀಡಿದ ಗೃಹ ಸಚಿವರು!
ಇನ್ನು ಸ್ಮಾರಕದ ಸುತ್ತಮುತ್ತ ಬಿಗಿ ಪೊಲೀಸ್ ಭದ್ರತಾ ಒದಗಿಸಲಾಗಿದ್ದು, ಅಪ್ಪು ಅಭಿಮಾನಿಗಳ ಆಗಮನಕ್ಕಾಗಿ ಎಲ್ಲ ಸೌಲಭ್ಯಗಳೂ ಒದಗಿಸಲಾಗಿದೆ. ಅಪ್ಪು ಸ್ಮಾರಕದ ಬಳಿ ಅನ್ನದಾನ, ರಕ್ತದಾನ, ಹಾಗೂ ಬಡ ಮಕ್ಕಳಿಗೆ ನೋಟ್ಬುಕ್ ವಿತರಣೆ ಸೇರಿದಂತೆ ಹಲವು ಸೇವಾ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗಿದೆ. ಇಂದು ಇಡೀ ದಿನ ಅಭಿಮಾನಿಗಳಿಗೆ ಅನ್ನದಾನ ನಡೆಯಲಿದೆ.
