ಬೆಂಗಳೂರು: ಕನ್ನಡ ಚಿತ್ರರಂಗದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಎಷ್ಟೇ ವಯಸ್ಸಾದರೂ ಕೂಡ ಯಾವ ಹೀರೋಗಳಿಗೂ ಕಮ್ಮಿ ಇಲ್ಲ. ಎಷ್ಟೇ ವಯಸ್ಸಾದರೂ ಕೂಡ ಹರೆಯದ ಹುಡುಗರು ನಾಂಚುವಂತೆ ಸ್ಟೆಪ್ ಹಾಕುತ್ತಾರೆ.
ಹೌದು, ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅವರು ಈಗಾಗಲೇ ಹಲವಾರು ಸಿನಿಮಾಗಳಲ್ಲಿ ನಟಿಸಿ ತಮ್ಮದೇ ಆದ ಅಭಿಮಾನಿಗಳ ಬಳಕೆ ಹೊಂದಿರುವವರು ಇದೀಗ ತೆಲುಗು ರಾಜಕಾರಣಿಯ ಜೀವನಾಧಾರಿತ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
ಯೆಸ್… ಆಂಧ್ರ ಮೂಲದ ಯೆಲ್ಲಾಂಡು ರಾಜಕಾರಣಿ ಗುಮ್ಮಡಿ ನರಸಯ್ಯ ಜೀವನಗಾಥೆಯಲ್ಲಿ ಕರುನಾಡ ಚಕ್ರವರ್ತಿ ಮಿಂಚಲಿದ್ದಾರೆ. ದೀಪಾವಳಿ ಹಬ್ಬಕ್ಕಾಗಿ ಈ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಆಗಿದ್ದು ಸೈಕಲ್ ತಳ್ಳುತ್ತಾ, ಹೆಗಲಿಗೆ ಕೆಂಪು ಶಾಲು ಹಾಕಿಕೊಂಡು, ಕನ್ನಡಕ ಹಾಕಿಕೊಂಡ ಸರ್ಕಾರಿ ಕಚೇರಿ ಮುಂದೆ ಶಿವಣ್ಣ ಕಾಣಿಸಿಕೊಂಡಿದ್ದಾರೆ. ಶಿವರಾಜ್ ಕುಮಾರ್ ಲುಕ್ ಗೆ ಅವರ ಅಭಿಮಾನಿಗಳು ಫಿದಾ ಆಗಿದ್ದಾರೆ. ಇದನ್ನೂ ಓದಿ: ಹಾಸನ: ಇಂದು ಹಾಸನಾಂಬೆ ಗರ್ಭಗುಡಿ ಬಾಗಿಲು ಬಂದ್
ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ನ್ಯೂ ಡಿಮಾಕ್ರಸಿ ಅಥವಾ ಸಿಪಿಐನ ಸದಸ್ಯರಾಗಿರುವ ಗುಮ್ಮಡಿ ನರಸಯ್ಯ 1983-1994 ಹಾಗೂ 1999-2009 ನಡುವೆ ಯೆಲ್ಲಾಂಡುವಿನ ತೆಲಂಗಾಣ ವಿಧಾನಸಭೆಯ ಸದಸ್ಯರಾಗಿದ್ದರು. ಸ್ವತಂತ್ರ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದರು. ಅವರ ಹೋರಾಟದ ಬದುಕೇ ಒಂದು ಸ್ಪೂರ್ತಿ ಆಗಿತ್ತು. ಈಗ ಅದೇ ಸಿನಿಮಾವಾಗುತ್ತಿದೆ. 5 ಬಾರಿ ಶಾಸಕರಾಗಿದ್ದರೂ ಇವರು ಸೈಕಲ್ ನಲ್ಲಿಯೇ ಓಡಾಟ, ರಸ್ತೆ ಬದಿಯಲ್ಲಿ ಊಟ, ಹಳೆ ಮನೆಯಲ್ಲಿಯೇ ವಾಸ ಮಾಡುತ್ತಿದ್ದರು.
