Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಚೌಡಯ್ಯ ಮೂರ್ತಿ ಭಗ್ನ, ಕಿಡಿಗೇಡಿಗಳ ಬಂಧನಕ್ಕೆ ಆಗ್ರಹ
  • Crime
  • State
  • ಶಹಾಪುರ

ಚೌಡಯ್ಯ ಮೂರ್ತಿ ಭಗ್ನ, ಕಿಡಿಗೇಡಿಗಳ ಬಂಧನಕ್ಕೆ ಆಗ್ರಹ

Praja Vahini October 14, 2025 1 minute read
WhatsApp Image 2025-10-14 at 18.06.47
Spread the love

ಶಹಾಪುರ: ಕಲಬುರಗಿ ಜಿಲ್ಲೆಯ ಶಹಾಬಾದ್ ತಾಲೂಕಿನ ಮುತ್ತಗಾ ಗ್ರಾಮದಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಅವರ ಮೂರ್ತಿ ಕಿಡಿಗೇಡಿಗಳು ಕಲ್ಲಿನಿಂದ ಮೂರ್ತಿಯ ಕೈಯನ್ನು ಧ್ವಂಸ ಮಾಡಿದ್ದು, ಕೂಡಲೇ ಕಿಡಿಗೇಡಿಗಳನ್ನು ಬಂಧಿಸಬೇಕು ಎಂದು ಕೋಲಿ ಕಬ್ಬಲಿಗ ಸಮಾಜದ ತಾಲೂಕ ಅಧ್ಯಕ್ಷ ರಾಯಪ್ಪ ಸಾಲಿಮನಿ ಆಗ್ರಹಿಸಿದರು.

ತಹಸೀಲ್ ಕಚೇರಿ ಎದುರು ಕೋಲಿ ಕಬ್ಬಲಿಗ ಸಮಾಜದ ವತಿಯಿಂದ ಪ್ರತಿಭಟನೆ ನಡೆಸಿ ಮಾತನಾಡಿ, ಚೌಡಯ್ಯ ಅವರ ಬಲಗೈಯಲ್ಲಿದ್ದ ವಚನ ಪುಸ್ತಕದ ಭಾಗವನ್ನು ಒಡೆಯಲಾಗಿದೆ. ಮೂರ್ತಿಯ ಮುಖಕ್ಕೆ ಕೆಸರನ್ನು ಸಿಡಿಸಲಾಗಿದೆ. ಚೌಡಯ್ಯ ಪ್ರತಿಮೆಯನ್ನು ದುಷ್ಕರ್ಮಿಗಳು ವಿರೂಪಗೊಳಿಸಿರುವ ಘಟನೆ ಖಂಡನೀಯ. ಈ ಕೃತ್ಯದಲ್ಲಿ ಯಾರೇ ಭಾಗಿಯಾಗಿದ್ದರೂ ಅವರಿಗೆ ಕಾನೂನು ಶಿಕ್ಷೆಯಾಗಬೇಕು. ಆರೋಪಿಗಳನ್ನು ಶೀಘ್ರವೇ ಪತ್ತೆಹಚ್ಚಿ ಬಂಧಿಸಬೇಕು ಎಂದು ಆಗ್ರಹಿಸಿದರು. ತಹಸೀಲ್ದಾರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಪರಂಪರೆಗೆ ಅಪಮಾನ

ಮಹಾನ್ ವಚನಕಾರರ ಪ್ರತಿಮೆ ವಿರೂಪಗೊಳಿಸಿರುವುದು ಭವ್ಯ ಪರಂಪರೆಗೆ ಮಾಡಿರುವ ಅಪಮಾನವಾಗಿದ್ದು, ಚೌಡಯ್ಯನವರ ಮೂರ್ತಿ ಭಗ್ನಗೊಳಿಸಿರುವುದು ಕೋಲಿ, ಕಬ್ಬಲಿಗ ಸಮಾಜಕ್ಕೆ ಭಾವನಾತ್ಮಕವಾಗಿ ದಾಳಿ ಮಾಡಿದಂತಾಗಿದ್ದು, ಸಮಾಜ ಘಾತಕು ಶಕ್ತಿಯನ್ನು ತಕ್ಷಣವೇ ಬಂಧಿಸಿ, ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅಯ್ಯಣ್ಣ ಕನ್ಯಾಕೊಳೂರ ಗೌರವಧ್ಯಕ್ಷರು ಹೇಳಿದರು.

ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ

ನಿಜಶರಣ ಅಂಬಿಗರ ಚೌಡಯ್ಯ ಪ್ರತಿಮೆಯನ್ನು ದುರ್ಷ್ಕಿರ್ಮಿಗಳು ವಿರೂಪಗೊಳಿಸಿರುವ ಹೇಯ ಕೃತ್ಯ ಖಂಡನೀಯ. ಸಂಪೂರ್ಣ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಈ ಕೃತ್ಯದಲ್ಲಿ ಯಾರೇ ಭಾಗಿಯಾಗಿದ್ದರೂ ಅವರಿಗೂ ಕಾನೂನು ಅಡಿಯಲ್ಲಿ ಕಠಿಣ ಶೀಕ್ಷೆ ಆಗಬೇಕು. ಮತ್ತು ಗ್ರಾಮದ ಸರಕಾರಿ ಸ್ಥಳದಲ್ಲಿಯೇ ಹೊಸ ಮೂರ್ತಿ ಪ್ರತಿಷ್ಠಾಪನೆ ಮಾಡಬೇಕು. ಎಲ್ಲಾ ಮಹಾನ್ ಪುರುಷರ ಪ್ರತಿಮೆಗಳ ಬಳಿ ರಕ್ಷಣೆಗೆ ಸ್ಥಳೀಯಾಡಳಿತಗಳು ಸಿಸಿ ಕ್ಯಾಮರಾ ಅಳವಡಿಸಬೇಕು. ಕೃತ್ಯ ನಡೆಸಿದ ಹಿನ್ನಲೇ ಅಪರಾಧಿಗಳ ವಿರುದ್ಧ ಕಠಿಣ ಶಿಕ್ಷೆ ವಿಧಿಸಿ ಗಡಿಪಾರು ಮಾಡಬೇಕು ಎಂದು ಯುವ ಮುಖಂಡರಾದ ಭೀಮಣ್ಣ ಶಖಾಪುರ ಹೇಳಿದರು. ಇದನ್ನೂ ಓದಿ: ಬೆದರಿಕೆ ಕರೆಗೆ ನಾನು ಬಗ್ಗಲ್ಲ: ಪ್ರಿಯಾಂಕ್ ಖರ್ಗೆ

ಈ ಸಂದರ್ಭದಲ್ಲಿ ಮಹಾದೇವಪ್ಪ ಸಾಲಿಮನಿ, ಯಲ್ಲಪ್ಪ ನಾಯ್ಕೊಡಿ, ಬಸವರಾಜ ರತ್ತಾಳ, ಹಣಮಂತ್ರಾಯಗೌಡ ರಾಕಂಗೇರ, ಮರೆಪ್ಪ ಚಂಡು, ಮಾನಯ್ಯ ಹಾದಿಮನಿ, ಮಾಹದೇವಪ್ಪಗೌಡ ಕಟ್ಟಿಮನಿ, ಶರಣಪ್ಪ ನಾಯ್ಕೊಡಿ, ಬಸವರಾಜ ನಾಯ್ಕೋಡಿ, ಗೋಪಾಲ ಹಳಿಸಗರ, ಮಲ್ಲರೆಡ್ಡಿ ವಿಭೂತಿಹಳ್ಳಿ, ರಾಜು ನಾಯ್ಕೋಡಿ, ವೆಂಕಟೇಶ ಬೊನೇರ, ರಾಜಶೇಖರ ನಾಟೇಕರ, ಬಂಡಾರಿ ನಾಟೇಕರ, ಸಿದ್ದರಾಮ ಕಳ್ಳಳ್ಳಿ ಸೇರಿದಂತೆ ಸಮಾಜದ ಮುಖಂಡರು ಯುವಕರು ಇದ್ದರು.

 

About the Author

Praja Vahini

Editor

View All Posts

Spread the love

Post navigation

Previous: ಬೆದರಿಕೆ ಕರೆಗೆ ನಾನು ಬಗ್ಗಲ್ಲ: ಪ್ರಿಯಾಂಕ್ ಖರ್ಗೆ
Next: ಲೋಕಾಯುಕ್ತ ದಾಳಿ; ಭ್ರಷ್ಟ ಅಧಿಕಾರಿಗಳ ಆಸ್ತಿ ಪತ್ತೆಯಾದದ್ದು ಎಷ್ಟು ಗೊತ್ತಾ?

Views:

98

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.