ಬೆಂಗಳೂರು: ಯಾವುದೇ ಬೆದರಿಕೆ ಕರೆಗಳು ಬಂದರೂ ಕೂಡ ನಾನು ಹೆದರುವುದಿಲ್ಲ ಹಾಗೂ ಯಾವುದಕ್ಕೂ ಬಗ್ಗುವುದಿಲ್ಲ ಎಂದು ಸಚಿವ ಪ್ರಿಯಾಂಕ ಖರ್ಗೆ ಅವರು ಹೇಳಿದ್ದಾರೆ.
ನಗರದಲ್ಲಿ ಇಂದು (ಮಂಗಳವಾರ ಅ.14) ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮಹಾನ್ ನಾಯಕರುಗಳಾದ ಬಿ ಆರ್ ಅಂಬೇಡ್ಕರ್ ಹಾಗೂ ಮಹಾತ್ಮ ಗಾಂಧೀಜಿಯವರನ್ನೇ ಬಿಟ್ಟಿಲ್ಲ ಇನ್ನೂ ನಮ್ಮನ್ನು ಬಿಡುತ್ತಾರೆ ಇವರು ಎಂದು ಪ್ರಶ್ನಿಸಿದರು.
ಇಂಗ್ಲೀಷ್ನಲ್ಲಿ ಮಾತಾನಾಡುತ್ತಾರೆ. ನೋ ಕಾಲರ್ ಐಡಿ, ಅಂತರಾಷ್ಟ್ರೀಯ ನಂಬರ್ ಇದೆ. ಕೆಟ್ಟ ಭಾಷೆಯಿಂದ ನಮಗೆ, ಕುಟುಂಬದವರಿಗೆ, ಕುಟುಂಬದವರ ಪರಿಸ್ಥಿತಿ ಬಗ್ಗೆ ಮಾತಾನಾಡುತ್ತಾರೆ. ಇದು ಸಹಜ, ವಿರೋಧ ಪಕ್ಷದಲ್ಲಿ ಇದ್ದಾಗಲೂ ಎರಡ್ಮೂರು ಬಾರಿ ದೂರು ಕೊಟ್ಟಿದ್ದೆ. ಬೊಮ್ಮಾಯಿ ಇದ್ರು, ತನಿಖೆ ಮಾಡಿಸಿದರು. ಆಗ ಇದು ಹೊರ ದೇಶದಿಂದ ಬರುತ್ತಿವೆ ಅಂದರು. ಈಗಲೂ ಅದೇ ನಡೆದಿದೆ ಎಂದರು. ಇದನ್ನೂ ಓದಿ: ವಿದ್ಯೆ ಮತ್ತು ಪ್ರತಿಭೆ ಯಾರ ಅಪ್ಪನ ಮನೆ ಸ್ವತ್ತಲ್ಲ: ಸಿಎಂ
ಹಿಂದೆ ಮಲ್ಲಿಕಾರ್ಜುನ ಖರ್ಗೆ ಅವರಿಗೂ ಬೆದರಿಕೆ ಕರೆ ಬಂದಿತ್ತು, ಈಗಲೂ ದೂರು ಇದೆ. ಎಫ್ಐಆರ್ ರಿಜಿಸ್ಟರ್ ಮಾಡಬಹುದು, ಆದರೆ ಕಂಡು ಹಿಡಿಯೋದು ಕಷ್ಟ. ನಾವ್ಯಾಕೆ ಈ ಸಿದ್ಧಾಂತದಿಂದ ಹಿಂದೆ ಸರಿಯಲಿ? ಈ ತತ್ವದಿಂದ ಗಾಂಧೀಜಿ ಬಲಿ ತೆಗೆದುಕೊಂಡಿಲ್ವಾ? ಸಂವಿಧಾನದಲ್ಲಿ ನಮಗೆ ನಂಬಿಕೆ ಇದೆ. ಇದು ನನ್ನ ಸಿದ್ಧಾಂತ, ನಾನು ಮಾತನಾಡಿದ್ದೇನೆ. ಪಕ್ಷದಿಂದ ಸಪೋರ್ಟ್ ಇಲ್ಲ ಅಂತ ಯಾರು ಹೇಳಿದ್ದು? ಸಿಎಂ ಹಾದಿಯಾಗಿ ಎಲ್ಲರೂ ಸಪೋರ್ಟ್ ಮಾಡಿದ್ದಾರೆ ಎಂದು ಸಮರ್ಥಿಸಿಕೊಂಡರು.
