ಹಾಸನ: ವಿಜಯಪುರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ರವರು ಹೊಸ ಪಕ್ಷ ಕಟ್ಟಲು ಮುಂದಾಗಿದ್ದಾರೆ ಎಂಬ ವದಂತಿಗಳಿಗೆ ಇದೀಗ ಅವರೇ ಪ್ರತಿಕ್ರಿಯಿಸಿದ್ದಾರೆ.
ಹಾಸನದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಯಾವುದೇ ರಾಜಕೀಯ ಪಕ್ಷಕ್ಕೆ ಸೇರ್ಪಡೆಯಾಗುವ ವದಂತಿಗಳನ್ನು ತಳ್ಳಿಹಾಕಿದ್ದಾರೆ. ಯಾವುದೇ ಪಕ್ಷಕ್ಕೆ ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹಿಂದೂ ಮತಗಳು ವಿಭಜನೆಯಾಗಬಾರದು ಎಂಬುದು ತಮ್ಮ ಮುಖ್ಯ ಗುರಿಯಾಗಿದ್ದು, ಹಿಂದೂಗಳ ಮತ ವಿಭಜಿಸುವಂತಹ ಕೆಟ್ಟ ಕೆಲಸ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ.
ನಾನು ಹಿಂದುತ್ವದ ಪರವಾಗಿ ಓಡಾಡ್ತಾ ಇದ್ದೀನಿ. ಮಂಡ್ಯ ಅಂತ ಮಂಡ್ಯದಲ್ಲಿ ಸುಮಾರು 20 ಸಾವಿರ ಜನ ಸೇರಿದ್ದರು. ಇಡೀ ಮಂಡ್ಯ ನಗರದಲ್ಲಿ ಜನ ಹೂಗಳನ್ನ ನನ್ನ ತಲೆ ಮೇಲೆ ಹಾಕಿ ಆಶೀರ್ವಾದ ಮಾಡಿದ್ದಾರೆ. ಮುಂದಿನ ಸಲ ನೀವೇ ರಾಜ್ಯದ ಮುಖ್ಯಮಂತ್ರಿ ಆದರೆ ಮಾತ್ರ ಹಿಂದೂಗಳಿಗೆ ರಕ್ಷಣೆ ಇರುತ್ತದೆ ಎಂದು ಹೇಳುತ್ತಿದ್ದಾರೆ ಎಂದರು. ಇದನ್ನೂ ಓದಿ: ಭ್ರಷ್ಟ ಅಧಿಕಾರಿಗಳ ನಿದ್ದೆಗೆಡಿಸಿದ ಲೋಕ ದಾಳಿ
ಇದನ್ನ ನಾನು ಕ್ರಿಯೇಟ್ ಮಾಡಿದ್ದಲ್ಲ. ನಾ ಯಡಿಯೂರಪ್ಪ ಹಂಗೆ ಹೇಳಿಕೊಳ್ಳುವುದಿಲ್ಲ ಜನರು ಏನು ತೀರ್ಪು ಕೊಡ್ತಾರೆ ಅದಕ್ಕೆ ನಾನು ತಯಾರಿದ್ದೇನೆ.
ಬಿಜೆಪಿ ಏನಾದರೂ ಯಡಿಯೂರಪ್ಪನ ಬಿಟ್ಟು ಮತ್ತೆ ಬಿಜೆಪಿ ಪಕ್ಷವನ್ನು ಕಟ್ಟಿದರೆ ನಾನು ಖಂಡಿತವಾಗಿ ಮತ್ತೆ ಬಿಜೆಪಿ ಪಕ್ಷ ಸೇರ್ಪಡೆಯಾಗುತ್ತೇನೆ ಎಂದು ಹೇಳಿದ್ದಾರೆ.
