ಹಾಸನ: ರಾಜ್ಯ ರಾಜಕೀಯದಲ್ಲಿ ಸಿಎಂ ಕುರ್ಚಿ ಬದಲಾವಣೆ ಬಗ್ಗೆ ಭಾರಿ ಚರ್ಚೆಯಾಗುತ್ತಿದ್ದು, ಇದರ ಬೆನ್ನಲ್ಲೇ ಇದೀಗ ಬ್ರಹ್ಮಾಂಡ ಗುರೂಜಿ ರಾಜ್ಯ ಕಾಂಗ್ರೆಸ್ ಸರ್ಕಾರದ ಬಗ್ಗೆ ಸ್ಪೋಟಕ ಭವಿಷ್ಯವನ್ನು ನುಡಿದಿದ್ದಾರೆ.
ನಗರದಲ್ಲಿ ಇಂದು ಮಾತನಾಡಿದ ಅವರು, ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿರುವುದು ಇದೇ ಕೊನೆ. ಇನ್ಯಾವತ್ತೂ ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವುದಿಲ್ಲ ಎಂದು ಸ್ಫೋಟಕ ಭವಿಷ್ಯ ನುಡಿದಿದ್ದಾರೆ.
ಅಲ್ಲದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಆರೋಗ್ಯವನ್ನು ಸ್ಥಿರವಾಗಿ ನೋಡಿಕೊಳ್ಳಬೇಕು ಎಂದಿದ್ದಾರೆ. ಮುಂದಿನ ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬ ಅವಕಾಶಗಳಲ್ಲಿ ಇಬ್ಬರಿಗೆ ಅವಕಾಶಗಳಿದೆ. ಇದನ್ನು ಕೂಡ ಬಹಳ ಜನ ಎಳೆದಾಡುವಂತಹ ಕೆಲಸ ಕೂಡ ನಡೆಯುತ್ತಿದೆ. ಇದನ್ನೂ ಓದಿ: ಮುಖ್ಯಮಂತ್ರಿಗಳೇ, ವರ್ಗಾವಣೆ ದಂಧೆ ನಿಲ್ಲಿಸಲು ನಿಮ್ಮ ಮಗನಿಗೆ ಹೇಳಿ: ಪ್ರತಾಪ್ ಸಿಂಹ
ಅಕಸ್ಮಾತ್ ಆಗಿ ಯೋಗ ಕೂಡಿ ಬಂದರೆ ನವಂಬರ್ ನಿಂದ ಸಂಕ್ರಾಂತಿ ಒಳಗಡೆ ಮುಖ್ಯಮಂತ್ರಿ ಆದರೆ ಅವರಿಗೆ ಒಳಿತು. ಇಲ್ಲದಿದ್ದರೆ 10 ವರ್ಷಗಳ ಕಾಲ ಅವರಿಗೆ ಮುಖ್ಯಮಂತ್ರಿ ಆಗುವ ಯೋಗ್ಯ ಇರೋದಿಲ್ಲ ಎಂದು ಹೇಳಿದ್ದಾರೆ.
10 ವರ್ಷದ ನಂತರ ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತೋ ಇಲ್ವೋ ಗೊತ್ತಿಲ್ಲ. ಇದೇ ಕೊನೆ ಕಾಂಗ್ರೆಸ್ ಅವಧಿ, ಇದೇ ಕೊನೆ. ಯಾವುದೇ ಜನ್ಮದಲ್ಲೂ ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ನ ಅಧಿಕಾರ ಇರುವುದಿಲ್ಲ ಎಂದು ಭವಿಷ್ಯ ನುಡಿದಿದ್ದಾರೆ.
