Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಮುಖ್ಯಮಂತ್ರಿಗಳೇ, ವರ್ಗಾವಣೆ ದಂಧೆ ನಿಲ್ಲಿಸಲು ನಿಮ್ಮ ಮಗನಿಗೆ ಹೇಳಿ: ಪ್ರತಾಪ್​ ಸಿಂಹ
  • Politics
  • State
  • ಮೈಸೂರು

ಮುಖ್ಯಮಂತ್ರಿಗಳೇ, ವರ್ಗಾವಣೆ ದಂಧೆ ನಿಲ್ಲಿಸಲು ನಿಮ್ಮ ಮಗನಿಗೆ ಹೇಳಿ: ಪ್ರತಾಪ್​ ಸಿಂಹ

Praja Vahini October 10, 2025 1 minute read
WhatsApp Image 2025-10-10 at 14.57.54
Spread the love

ಮೈಸೂರು: ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಯತೀಂದ್ರ ಸಿದ್ರಾಮಯ್ಯ ಅವರ ವಿರುದ್ಧ ಒಂದಲ್ಲ ಒಂದು ಆರೋಪ ಮಾಡುತ್ತಲೇ ಇರುತ್ತಾರೆ. ಅದರಂತೆ ಮತ್ತೆ ಇದೀಗ ಸಿಎಂ ಪುತ್ರ ಯತೀಂದ್ರ ರವರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮೈಸೂರು ಪೊಲೀಸರಿಗೆ ಸಿಎಂ ಮಗನ ಕಾಟ ಹೆಚ್ಚಾಗಿದೆ ಎಂದಿದ್ದಾರೆ. ಡಾ. ಯತೀಂದ್ರ ವರ್ಗಾವಣೆ ಸಚಿವರಾಗಿದ್ದಾರೆ. ಯಾವುದೇ ವರ್ಗಾವಣೆ ಆಗಬೇಕಾದರೂ ಸಿಎಂ ಪುತ್ರನಿಗೆ ತೆರಿಗೆ ಕಟ್ಟಬೇಕು. ಯಾರು ಜಾಸ್ತಿ ಕಲೆಕ್ಷನ್ ಮಾಡಿ ರಾಹುಲ್ ಗಾಂಧಿಗೆ ಕೊಡುತ್ತೇವೆ ಎಂದು ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಪೈಪೋಟಿಗೆ ಇಳಿದಿದ್ದಾರೆ ಎಂದು ಪ್ರತಾಪ್​ ಸಿಂಹ  ಆರೋಪಿಸಿದ್ದಾರೆ. ಇದನ್ನೂ ಓದಿ: ಬಿಗ್‌ ಬಾಸ್‌; ವೀಕೆಂಡ್ ಎಪಿಸೋಡ್ ನಲ್ಲಿ ಎಂದಿನಂತೆ ಕಿಚ್ಚ ಭಾಗಿ

ಆರೋಪಿ ಯಾವ ಜಾತಿಯವನು ಎಂದು ನೋಡಿ ನಂತರ ಅವನನ್ನು ಹಿಡಿಯ ಬೇಕಾದ ಸ್ಥಿತಿ ಮೈಸೂರು ಪೊಲೀಸರಿಗೆ ಬಂದಿದೆ. ಅವ್ಯಾಹತವಾಗಿ ಇಸ್ಪೀಟ್ ದಂಧೆ ನಡೆಯುತ್ತಿದ್ದು, ಅದರ ಮೇಲೆ ದಾಳಿ ಮಾಡಲೂ ಪೊಲೀಸರು ಹೆದರುತ್ತಿದ್ದಾರೆ. ದಾಳಿ ಮಾಡಿದರೆ ಎಲ್ಲಿ ಯಾವ ಸಚಿವ, ಶಾಸಕನ ಫೋನ್ ಬರುತ್ತದೆಯೋ ಎಂಬ ಭಯದಲ್ಲಿದ್ದಾರೆ. ಸಿದ್ದರಾಮಯ್ಯ ಕುರ್ಚಿ ಖಾಲಿಯಾದರೆ ತನಗೆ ಸಿಗುತ್ತೆಂಬ ಆಸೆಯಲ್ಲಿ ಗೃಹ ಸಚಿವರು ತಮ್ಮ ಇಲಾಖೆಯನ್ನೇ ಮರೆತಿದ್ದಾರೆ. ಮುಖ್ಯಮಂತ್ರಿಗಳೇ, ವರ್ಗಾವಣೆ ದಂಧೆ ನಿಲ್ಲಿಸಲು ನಿಮ್ಮ ಮಗನಿಗೆ ಹೇಳಿ. ಶಾಸಕರಿಗೆ ವಸೂಲಿ ನಿಲ್ಲಿಸಲು ಹೇಳಿ ಎಂದು ಪ್ರತಾಪ್​ ಸಿಂಹ ಕಿಡಿ ಕಾರಿದ್ದಾರೆ.

 

About the Author

Praja Vahini

Editor

View All Posts

Spread the love

Post navigation

Previous: ಬಿಗ್‌ ಬಾಸ್‌; ವೀಕೆಂಡ್ ಎಪಿಸೋಡ್ ನಲ್ಲಿ ಎಂದಿನಂತೆ ಕಿಚ್ಚ ಭಾಗಿ
Next: ಇದೇ ಕೊನೆ ಕಾಂಗ್ರೆಸ್ ನ ಅವಧಿ, ಇದೇ ಕೊನೆ: ಬ್ರಹ್ಮಾಂಡ ಗುರೂಜಿ ಸ್ಫೋಟಕ ಭವಿಷ್ಯ

Views:

35

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.