ಬೆಂಗಳೂರು: ಬಿಜೆಪಿಯವರಿಗೆ ನಾಚಿಕೆ, ಮಾನ-ಮರ್ಯಾದೆ ಇಲ್ಲ. ಪಾಕಿಸ್ತಾನದ ಜೊತೆ ಭಾರತ ಕ್ರಿಕೆಟ್ ಆಡಿದ ಬಗ್ಗೆ ಬಿಜೆಪಿ ನಾಯಕರು ಬಾಯಿಬಿಟ್ಟು ಮಾತನಾಡಲಿ ಅದು ಬಿಟ್ಟು ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಬಗ್ಗೆ ಮಾತನಾಡುತ್ತಾರಲ್ಲ ಇವರಿಗೆ ನಾಚಿಕೆ, ಮಾನ-ಮರ್ಯಾದೆ ಇಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯಲ್ಲಿ ಮತಾಂತರ ಆದವರಿಗೆ ಮೂಲ ಜಾತಿ ಜೊತೆ ಧರ್ಮ ನಮೂದು ಮಾಡುವ ಬಗ್ಗೆ ಕಾಲಂ ಇರುವುದನ್ನು ನೋಡೋದಷ್ಟೇ ಅಲ್ಲ. ಇಂತಹ ವಿಷಯವನ್ನೇ ಮಾತಾಡೋದು ಇವರ ಕೆಲಸವಾಗಿದೆ. ಪಾಕಿಸ್ತಾನದ ಜೊತೆ ಕ್ರಿಕೆಟ್ ಆಡಿದ ಬಗ್ಗೆ ಬಿಜೆಪಿ ಅವರು ವಿರೋಧ ಮಾಡಲಿ ನೋಡೋಣ. ಜಾತಿ, ಧರ್ಮ ಬಂದರೆ ಮಾತ್ರ ಇವರು ವಿರೋಧ ಮಾಡೋದು. ನಾಚಿಕೆ, ಮಾನ-ಮರ್ಯಾದೆ ಇದೆಯಾ ಇವರಿಗೆ ಎಂದು ಆಕ್ರೋಶ ಹೊರಹಾಕಿದರು. ಇದನ್ನೂ ಓದಿ: ಭ್ರಷ್ಟ ಅಧಿಕಾರಿಗಳ ನಿದ್ದೆಗೆಡಿಸಿದ ಲೋಕಾಯುಕ್ತ
ಆಪರೇಷನ್ ಸಿಂಧೂರ ಅಂತ ಭಾರೀ ದೊಡ್ಡ ದೊಡ್ಡ ಭಾಷಣ ಮಾಡಿದರು. ಅಮಿತ್ ಶಾ ಮಗ ಜೈ ಶಾ ಐಸಿಸಿ ಅಧ್ಯಕ್ಷ ನೀವು ಯಾಕೆ ಪಾಕಿಸ್ತಾನದ ಜೊತೆ ಕ್ರಿಕೆಟ್ ಆಡಿದಿರಿ. ಬಿಜೆಪಿಯವರಿಗೆ ಪಾಕಿಸ್ತಾನ, ಮುಸ್ಲಿಮರು ಇಲ್ಲದೆ ವ್ಯವಹಾರ ಇಲ್ಲ. ಇದನ್ನು ಇಟ್ಟುಕೊಂಡು ಬೆಳೆ ಬೇಯಿಸಿಕೊಳ್ಳುತ್ತಿದ್ದಾರೆ. ಇದರಿಂದಲೇ ಬಿಜೆಪಿ ಅವರು ಜೀವನ ಮಾಡ್ತಿರೋದು ಎಂದು ಕಿಡಿಕಾರಿದರು.
