Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಬೆಂಗ್ಳೂರಿಗರೇ ಎಚ್ಚರ..ಎಚ್ಚರ ಮನೆ ಲೀಸ್ ಪಡೆಯುವ ಮುನ್ನ ಇರಲಿ ಎಚ್ಚರ
  • Bangalore
  • Crime
  • State

ಬೆಂಗ್ಳೂರಿಗರೇ ಎಚ್ಚರ..ಎಚ್ಚರ ಮನೆ ಲೀಸ್ ಪಡೆಯುವ ಮುನ್ನ ಇರಲಿ ಎಚ್ಚರ

Praja Vahini September 16, 2025 1 minute read
WhatsApp Image 2025-09-16 at 14.43.15
Spread the love

ಬೆಂಗಳೂರು: ಬೆಂಗಳೂರು ನಗರದಲ್ಲಿ ಕೇವಲ ಕರ್ನಾಟಕ ರಾಜ್ಯದ ಜನರು ಮಾತ್ರವಲ್ಲದೇ ಬೇರೆ ರಾಜ್ಯ, ಬೇರೆ ದೇಶಗಳಿಂದ ಬಂದು ತಮ್ಮ ಜೀವನವನ್ನು ಬೆಂಗಳೂರು ನಗರದಲ್ಲಿ ಕಟ್ಟಿಕೊಳ್ಳುತ್ತಾರೆ. ಎಲ್ಲಿಂದಲೋ ಬಂದು ಬೆಂಗಳೂರಿನಲ್ಲಿ ಜೀವನ ಕಟ್ಟಿಕೊಳ್ಳಬೇಕಾದರೆ ಅವರಿಗೊಂದು ಬಾಡಿಗೆ ಮನೆ ಅಥವಾ ಲೀಸ್ ಮನೆಗಳ ಮರೆ ಹೋಗುತ್ತಾರೆ.

ಹೌದು, ಬೆಂಗಳೂರು ನಗರದಲ್ಲಿ ಅದೆಷ್ಟೋ ಜನ ತಮ್ಮ ಜೀವನವನ್ನು ಸಾಗಿಸಿಕೊಳ್ಳಲು ಬಾಡಿಗೆ ಮನೆಯ ಅಥವಾ ಲೀಸ್ ನ ಮುಖಾಂತರ ಮನೆ ಪಡೆದು ತಮ್ಮ ಜೀವನವನ್ನು ಸಾಗಿಸುತ್ತಾರೆ. ಆದರೆ ಲೀಸ್ ಗೆ ಮನೆ ಪಡೆಯುವ ಮುನ್ನ ಇರಲಿ ಎಚ್ಚರ ಎಚ್ಚರ.

ಹೌದು, ಇಲ್ಲೊಬ್ಬ ಖತರ್ನಾಕ್ ಐನಾತಿ ಕಳ್ಳ ಲೀಸ್ ಹೆಸರಿನಲ್ಲಿ ಕೋಟಿಗಟ್ಟಲೆ ಹಣ ಪಡೆದು ವಂಚನೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಮನೆಗಳನ್ನು ಬಾಡಿಗೆ ಪಡೆದು, ಲೀಸ್‍ಗೆ ಕೊಟ್ಟು ನೂರಾರು ಮಂದಿಗೆ ವಂಚನೆ ಮಾಡಿದ ಆರೋಪ ನಗರದ ಕೆಟಿನಾ ಹೋಮ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿ ಮಾಲೀಕನ ವಿರುದ್ಧ ಕೇಳಿಬಂದಿದೆ.

ಕೆಟಿನಾ ಹೋಮ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಎಂಬ ಬ್ರೋಕರ್ ಕಂಪನಿಯ ಮಾಲೀಕನಾಗಿದ್ದ ವಿವೇಕ್ ಕೇಶವನ್ ಎಂಬಾತನ ವಿರುದ್ಧ ವಂಚನೆ ಆರೋಪ ಕೇಳಿಬಂದಿದೆ. ಈತ ಮಾರತ್ತಹಳ್ಳಿ, ಬಾಣಸವಾಡಿ, ಅಮೃತಹಳ್ಳಿ, ಎಲೆಕ್ಟ್ರಾನಿಕ್ ಸಿಟಿ ಸೇರಿದಂತೆ ಹಲವೆಡೆ ಮನೆಗಳನ್ನು ಬಾಡಿಗೆಗೆ ಪಡೆಯುತ್ತಿದ್ದ. ಬಳಿಕ ಲೀಸ್‍ಗಾಗಿ ಮನೆ ಹುಡುಕುತ್ತಿದ್ದವರಿಗೆ ವೆಬ್‍ಸೈಟ್‍ನಲ್ಲಿ ಗಾಳ ಹಾಕುತ್ತಿದ್ದ. ಬಳಿಕ ಅವರಿಂದ ಹಣ ಪಡೆದು ಮನೆ ಕೀ ನೀಡುತ್ತಿದ್ದ. ಮನೆ ಮಾಲೀಕರಿಗೆ ಸರಿಯಾಗಿ 2 ತಿಂಗಳು ಬಾಡಿಗೆ ಹಣ ನೀಡುತ್ತಿದ್ದ. ಆಮೇಲೆ ಹಣ ಕೊಡುತ್ತಿರಲಿಲ್ಲ. ಈ ವೇಳೆ ಮನೆಯಲ್ಲಿದ್ದವರನ್ನು ಮಾಲೀಕರು ವಿಚಾರಿಸಿದಾಗ ವಂಚನೆ ಬೆಳಕಿಗೆ ಬಂದಿದೆ. ಹೀಗೆ ಸುಮಾರು 60 ಕೋಟಿ ರೂ.ಗೂ ಹೆಚ್ಚಿನ ಹಣವನ್ನು ವಂಚಿಸಿದ್ದಾನೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: CM ಸಿದ್ದರಾಮಯ್ಯ ಬರೀ ಬೊಗಳೆ ಬಿಟ್ಕೊಂಡು ಓಡಾಡ್ತಿದ್ದಾರೆ: ಎಚ್ ವಿಶ್ವನಾಥ್

ಆರೋಪಿ ವಿರುದ್ಧ ಕ್ರಮಕೈಗೊಳ್ಳುವಂತೆ ವಂಚನೆಗೊಳಗಾದ ಜನ ಒತ್ತಾಯಿಸಿದ್ದಾರೆ. ರಾತ್ರೋರಾತ್ರಿ ಕಂಪನಿಯನ್ನು ಖಾಲಿ ಮಾಡಿಕೊಂಡು ವಂಚಕ ಪರಾರಿಯಾಗಿದ್ದಾನೆ. ಈಗ ಮನೆ ಖಾಲಿ ಮಾಡಿ ಎಂದು ಜನರಿಗೆ ಮಾಲೀಕರಿಂದ ಒತ್ತಡ ಬರುತ್ತಿದೆ. ಲೀಸ್‍ಗೆ ಕೊಟ್ಟ ಲಕ್ಷಾಂತರ ಹಣವೂ ಇಲ್ಲದೇ, ಇತ್ತ ಮನೆಯೂ ಇಲ್ಲದೆ ಜನ ಬೀದಿಗೆ ಬಿದ್ದಿದ್ದಾರೆ. ಈ ಸಂಬಂಧ ವಿವೇಕ್ ಕೇಶವನ್ ವಿರುದ್ಧ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About the Author

Praja Vahini

Editor

View All Posts

Spread the love

Post navigation

Previous: CM ಸಿದ್ದರಾಮಯ್ಯ ಬರೀ ಬೊಗಳೆ ಬಿಟ್ಕೊಂಡು ಓಡಾಡ್ತಿದ್ದಾರೆ: ಎಚ್ ವಿಶ್ವನಾಥ್
Next: ಬಿಜೆಪಿಯವರಿಗೆ ನಾಚಿಕೆ, ಮಾನ-ಮರ್ಯಾದೆ ಇಲ್ಲ: ಸಂತೋಷ್‌ ಲಾಡ್

Views:

19

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.