ಬೀದರ್: ಬಿಜೆಪಿ ಶಾಸಕ ಪ್ರಭು ಚೌಹಾಣ್ ಜಾತಿ ವಿವಾದಕ್ಕೆ ಸಂಬಂಧಿಸಿದಂತೆ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದ್ದು ಪ್ರಭು ಚೌಹಾಣ್ ಅವರು ವಿಚಾರಣೆಗೆ ಹಾಜರಾಗಲು ಪದೇಪದೇ ಸಮಯ ಕೇಳುತ್ತಿದ್ದಕ್ಕೆ ಇದೀಗ ಕೋರ್ಟ್ ಪ್ರಭು ಚೌಹಾಣ್ ಅವರಿಗೆ ಒಂದು ಲಕ್ಷ ದಂಡ ವಿಧಿಸಿ ಸಪ್ಟೆಂಬರ್ 8ಕ್ಕೆ ವಿಚಾರಣೆಯನ್ನು ಮುಂದೂಡಿದೆ.
ಹೌದು, ಶಾಸಕ ಪ್ರಭು ಚೌಹಾಣ್ ವಿರುದ್ಧ ಜಾತಿ ವಿವಾದಕ್ಕೆ ಸಂಬಂಧಿಸಿದಂತೆ ಕಲಬುರಗಿ ಪೀಠದಲ್ಲಿ ವ್ಯಕ್ತಿಯೊಬ್ಬರು ದಾವೆ ಹೂಡಿದ್ದರು. ಈ ಸಂಬಂಧ ಕೋರ್ಟ್ಗೆ ಹಾಜರಾಗಲು ಚೌಹಾಣ್ ಪರ ವಕೀಲರು ಪದೇ ಪದೇ ಸಮಯ ಕೇಳುತ್ತಿರುವ ಹಿನ್ನೆಲೆ ದಂಡ ವಿಧಿಸಲಾಗಿದೆ.
ಬೀದರ್ನ ಕಮಲ ನಗರ ತಾಲೂಕಿನ ನಿವಾಸಿ ನರಸಿಂಗ್ ಎಂಬುವವರು ಶಾಸಕ ಪ್ರಭು ಚೌಹಾಣ್ ಪರಿಶಿಷ್ಟ ಜಾತಿಯವರಲ್ಲ, ಅವರು ಪರಿಶಿಷ್ಟ ಪಂಗಡದವರು ಎಂದು ಕರ್ನಾಟಕ ಹೈಕೋರ್ಟ್ನ ಕಲಬುರಗಿ ಪೀಠದಲ್ಲಿ ದಾವೆ ಹೂಡಿದ್ದರು. ಇದನ್ನೂ ಓದಿ: ಜಪಾನ್ ಪ್ರಧಾನಿ ಜೊತೆ ಭಾರತದ ಪ್ರಧಾನಿ ಸವಾರಿ
ಕಳೆದ ಬಾರಿಯೂ ಕೋರ್ಟ್ಗೆ ಹಾಜರಾಗದೆ ಚೌಹಾಣ್ ಪರ ವಕೀಲರು ಸಮಯ ಕೇಳಿದ್ದರು. ಈ ಬಾರಿಯೂ ಮತ್ತೆ ಸಮಯ ಕೇಳಿದ್ದಕ್ಕೆ 1 ಲಕ್ಷ ದಂಡ ರೂ. ವಿಧಿಸಿದೆ.
