ಟೋಕಿಯೊ: ಪ್ರಧಾನಿ ನರೇಂದ್ರ ಮೋದಿಯವರು ಜಪಾನ್ ಪ್ರವಾಸವನ್ನು ಕೈಗೊಂಡಿದ್ದು, ಜಪಾನಿನಲ್ಲಿ ಹೈ ಸ್ಪೀಡ್ ಬುಲೆಟ್ ರೈಲ್ ನಲ್ಲಿ ಜಪಾನಿನ ಪ್ರಧಾನಿ ಶಿಗೇರು ಇಶಿಬಾ ಅವರ ಜೊತೆ ನರೇಂದ್ರ ಮೋದಿಯವರು ಪ್ರಯಾಣ ಬೆಳೆಸಿದ್ದಾರೆ.
ಇನ್ನು ಸೆಂಡೈಗೆ ತೆರಳುವ ಮೊದಲು, ಪ್ರಧಾನಿ ನರೇಂದ್ರ ಮೋದಿ ಟೋಕಿಯೊದಲ್ಲಿ 16 ಜಪಾನಿನ ಪ್ರಾಂತ್ಯಗಳ ರಾಜ್ಯಪಾಲರನ್ನು ಭೇಟಿಯಾದರು. ಈ ಸಂದರ್ಭದಲ್ಲಿ ಭಾರತ-ಜಪಾನ್ ವಿಶೇಷ ಕಾರ್ಯತಂತ್ರ ಮತ್ತು ಜಾಗತಿಕ ಪಾಲುದಾರಿಕೆಯ ಅಡಿಯಲ್ಲಿ ರಾಜ್ಯ-ಪ್ರಾಂತ್ಯ ಸಹಕಾರವನ್ನು ಬಲಪಡಿಸಲು ಅವರು ಕರೆ ನೀಡಿದರು. ಇದನ್ನೂ ಓದಿ: ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಬ್ಯಾಡ್ ಕಾಮೆಂಟ್ಸ್; ದೂರು ದಾಖಲು
ಅಲ್ಲದೆ ಬುಲೆಟ್ ಟ್ರೈನ್ ಟ್ರೇನಿಂಗ್ನಲ್ಲಿರುವ ಭಾರತೀಯ ಮೂಲದ ಲೊಕೊ ಪೈಲಟ್ಗಳನ್ನು ಭೇಟಿಯಾಗಿ ಮೋದಿ ಮಾತುಕತೆ ನಡೆಸಿದರು. ಬುಲೆಟ್ ಟ್ರೈನ್ ಕೋಚ್ ತಯಾರಿಕಾ ಘಟಕ ಇರುವ ಟೋಕಿಯೊದ ಎಲೆಕ್ಟ್ರಾನ್ ಕಾರ್ಖಾನೆ ಮತ್ತು ಸೆಂಡೈನಲ್ಲಿರುವ ಟೊಹೊಕು ಶಿಂಕನ್ಸೆನ್ ಸ್ಥಾವರಕ್ಕೂ ಮೋದಿ ಭೇಟಿ ನೀಡಲಿದ್ದಾರೆ.
