ಆನೇಕಲ್: ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಹಾಗೂ ಹೊಸೂರು ಶಾಸಕ ಸೇರಿದಂತೆ ಸುಮಾರು 10 ಹತ್ತು ಜನ ಲಿಫ್ಟ್ ನಲ್ಲಿ ಸಿಲುಕಿದ್ದರು ಎಂದು ತಿಳಿದುಬಂದಿದೆ. ರಾಮಲಿಂಗ ರೆಡ್ಡಿಯವರು ತಮಿಳುನಾಡಿನ ಹೊಸೂರಿನಲ್ಲಿರುವ ಖಾಸಗಿ ಆಸ್ಪತ್ರೆ ಉದ್ಘಾಟನೆಗೆ ತೆರಳಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.
ಸುಮಾರು 10 ನಿಮಿಷಗಳ ಕಾಲ ಲಿಫ್ಟ್ ಬಂದಾಗಿದ್ದ ಕಾರಣ ಸಚಿವರು ಸೇರಿದಂತೆ 10 ಜನಾನು ಪರದಾಡುವಂಥ ಪರಿಸ್ಥಿತಿ ನಿರ್ಮಾಣವಾಗಿತ್ತು. ಅಲ್ಲದೆ ಲಿಫ್ಟ್ ಬಂದ್ ಆದ ಕಾರಣ ಆಸ್ಪತ್ರೆಯಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು ಎಂದು ತಿಳಿದುಬಂದಿದೆ. ಇದನ್ನೂ ಓದಿ: ಇಂದಿನಿಂದ ಅಧಿವೇಶನ ಪ್ರಾರಂಭ!
ಇನ್ನು ಘಟನೆಯಿಂದ ಕೆಲಹೊತ್ತು ಆಸ್ಪತ್ರೆಯ ಆವರಣ ಗೊಂದಲಕ್ಕೀಡಾಗಿತ್ತು. ಬಳಿಕ ಲಿಫ್ಟ್ ಆಪರೇಟರ್ ಸಹಾಯದಿಂದ ಡೋರ್ ಓಪನ್ ಮಾಡಲಾಯಿತು. ತದನಂತರ ರಾಮಲಿಂಗಾ ರೆಡ್ಡಿ ಆಸ್ಪತ್ರೆ ಉದ್ಘಾಟಿಸಿ ಅಲ್ಲಿಂದ ತೆರಳಿದ್ದಾರೆ.
