ಬೆಂಗಳೂರು: ರೇಣುಕಾ ಸ್ವಾಮಿ ಕೊ*ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕನ್ನಡ ಚಿತ್ರರಂಗದ ನಟಿ ರಮ್ಯಾ ಅವರು ಧ್ವನಿ ಎತ್ತಿದ್ದಕ್ಕೆ ದರ್ಶನ್ ಅಭಿಮಾನಿಗಳು ನಟಿ ರಮ್ಯಾ ಅವರಿಗೆ ಅಶ್ಲೀಲ ಕಾಮೆಂಟ್ಸ್ ಮತ್ತು ಸಂದೇಶಗಳನ್ನು ಕಳಿಸಿದ್ದರು.
ಇನ್ನು ಅಶ್ಲೀಲ ಕಾಮೆಂಟ್ಸ್ಗಳನ್ನು ಹಾಕಿರುವುದನ್ನು ನಟಿ ರಮ್ಯಾ ಅವರು ತಮ್ಮ instagram ಖಾತೆಯಲ್ಲಿ ಸ್ಟೋರಿ ಹಾಕಿದ್ದರು. ಅಶ್ಲೀಲ ಕಾಮೆಂಟ್ಸ್ ಹಾಗೂ ಅಶ್ಲೀಲ ಸಂದೇಶ ಕಳಿಸಿದವರ ವಿರುದ್ಧ ರಮ್ಯಾ ಕಾನೂನು ಹೋರಾಟಕ್ಕೆ ಸಜ್ಜಾಗಿದ್ದು, ಈಗಾಗಲೇ ಈ ಕುರಿತು ಪೊಲೀಸ್ ಆಯುಕ್ತರಿಗೆ ದೂರು ಕೂಡ ದಾಖಲಿಸಿದ್ದಾರೆ.
ರಮ್ಯಾ ಅವರ ದೂರನ್ನು ಆಧರಿಸಿ ಸಿಸಿಬಿ ಪೊಲೀಸ್ ಅಧಿಕಾರಿಗಳು ಅಶ್ಲೀಲ ಕಾಮೆಂಟ್ ಹಾಕಿರುವ ಎ1 ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಬೆಂಗಳೂರಿನ ಕೆ.ಆರ್ ಪುರಂ ಮೂಲದ ಆರೋಪಿ ಪ್ರಮೋದ್ ಗೌಡನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈತನೇ ಪ್ರಕರಣದಲ್ಲಿ ಎ1 ಆರೋಪಿಯಾಗಿದ್ದಾನೆ. ಈತ ತನ್ನ ಗೆಳೆಯನ ಫೋನ್ನಲ್ಲಿ ಇನ್ಸ್ಟಾಗ್ರಾನ್ ಅಕೌಂಟ್ ಕ್ರಿಯೇಟ್ ಮಾಡಿದ್ದನು. ಪ್ರಮೋದ್ ಗೌಡ 87 ಎಂಬ ಅಕೌಂಟ್ನಿಂದ ಕಮೆಂಟ್ ಮಾಡುತ್ತಿದ್ದನು. ಅದರಂತೆ ಇದೇ ಅಕೌಂಟ್ನಿಂದ ನಟಿ ರಮ್ಯಾ ಅವರಿಗೆ ಅಶ್ಲೀಲ ಕಮೆಂಟ್ಗಳನ್ನು ಮಾಡಿದ್ದನು. ಇದನ್ನೂ ಓದಿ: ನಟ ಧೃವ ಸರ್ಜಾ ವಿರುದ್ಧ ಎಫ್ಐಆರ್ ದಾಖಲು
ಆರೋಪಿ ಪ್ರಮೋದ್ನನ್ನು ವಶಕ್ಕೆ ಪಡೆದು ಕರೆತಂದಿರುವ ಸಿಸಿಬಿ ಸೈಬರ್ ಕ್ರೈಂ ಪೊಲೀಸರು ಮೊದಲು ನ್ಯಾಯಾಲಯಕ್ಕೆ ಹಾಜರು ಪಡಿಸಲಿದ್ದಾರೆ. ಇದಾದ ಮೇಲೆ ಕಸ್ಟಡಿಗೆ ಪಡೆಯಲಿದ್ದಾರೆ. ಕಸ್ಟಡಿಗೆ ಪಡೆದು ಆರೋಪಿಯನ್ನು ತನಿಖೆ ಮಾಡಲಿದ್ದಾರೆ.
