ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ನಟ ಧೃವ ಸರ್ಜಾ ಅವರ ವಿರುದ್ಧ ಆರೋಪ ಒಂದು ಕೇಳಿಬಂದಿದೆ. ಸಿನಿಮಾ ಮಾಡುವುದಾಗಿ ಮುಂಗಡವಾಗಿ ಹಣ ಪಡೆದುಕೊಂಡು ವಂಚನೆ ಮಾಡಿದ್ದಾರೆ ಎಂದು ಮುಂಬೈನಲ್ಲಿ ದೂರು ದಾಖಲಾಗಿದೆ.
ಹೌದು, ಸಿನಿಮಾ ಮಾಡೋದಾಗಿ ನಟ ಧೃವ ಸರ್ಜಾ ಅವರು 3.15 ಕೋಟಿ ರೂ ಹಣ ಪಡೆದು ವಂಚನೆ ಮಾಡಿದ್ದಾರೆ ಎಂದು ಮುಂಬೈನ ಅಂಬೋಲಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ರಾಘವೇಂದ್ರ ಹೆಗ್ಗಡೆ ಎಂಬುವವರು ಧೃವ ಸರ್ಜಾ ವಿರುದ್ಧ ದೂರು ನೀಡಿದ್ದಾರೆ. ಸಿನಿಮಾ ಮಾಡುವುದಾಗಿ 3.15 ಕೋಟಿ ರೂ. ಹಣ ಪಡೆದು ವಂಚಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ:ಸುಪ್ರೀಂ ಕೋರ್ಟ್ ಗೆ ಪವಿತ್ರ ಏನೆಂದು ಮನವಿ ಮಾಡಿದ್ದಾಳೆ ಗೊತ್ತಾ?
